ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆ, ಶಿರಸಿ ವಿಭಾಗದಲ್ಲಿ ವಿವಿಧ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನ (Walk-in-Interview) ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಮೆಕ್ಯಾನಿಕ್ ಡೀಸೆಲ್: 4 ಹುದ್ದೆ, ಮೆಕ್ಯಾನಿಕ್ ಮೆಟರ್ ಇಲೆಕ್ಟ್ರಾನಿಕ್ಸ್: 4 ಹುದ್ದೆ, ಇಲೆಕ್ಟ್ರಿಷಿಯನ್: 4 ಹುದ್ದೆ, ಫಿಟರ್: 6 ಹುದ್ದೆ, ಟರ್ನರ್: 1 ಹುದ್ದೆ, ವೆಲ್ಡರ್: 4 ಹುದ್ದೆ, ಕಂಪ್ಯೂಟರ್ ಆಪರೇಟರ್ (COPA): 14 ಹುದ್ದೆಗಳಿಗೆ ನೇರ ಸಂದರ್ಶನ ಮಾಡಲಾಗುತ್ತದೆ.
ಸಂಬಂಧಿತ ಟ್ರೇಡ್ನಲ್ಲಿ ಐಟಿಐ(DGT ಅಥವಾ NCVT/SCVT ಆಗಿರಬೇಕು). ಅಭ್ಯರ್ಥಿಗಳು ಅರ್ಪೆಂಟಿಸ್ ಶಿಪ್ ಅಕ್ಟ್ 1961 ಅನ್ವಯ ಅರ್ಹರಾಗಿರಬೇಕು. ಶೈಕ್ಷಣಿಕ ಅರ್ಹತೆ ಪ್ರಮಾಣ ಪತ್ರಗಳು, ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ (ಅರ್ಜಿಗೆ ಅನ್ವಯಿಸಿದರೆ).ಆದಾರ್ ಕಾರ್ಡ್ ಮತ್ತು ಇತರೆ ಅಗತ್ಯ ದಾಖಲೆಗಳು ಕಡ್ಡಾಯವಾಗಿರಬೇಕು.

ಇದನ್ನೂ ಓದಿ: ಶಿರಸಿಯಲ್ಲಿ ಇಬ್ಬರು ಬಾಲಕಿಯರು ನಾಪತ್ತೆ: ಪೊಲೀಸರ ತೀವ್ರ ಶೋಧ
ಸೆಪ್ಟೆಂಬರ್ 4ರಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆ, ಶಿರಸಿ ವಿಭಾಗ, ಶಿರಸಿ ಇಲ್ಲಿ ಸಂದರ್ಶನ ನಡೆಯಲಿದೆ. ಆಸಕ್ತರು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಂತರ್ಜಾಲ ತಾಣ ಅಥವಾ ಶಾಖಾಧಿಕಾರಿ ಕಚೇರಿಯನ್ನು ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.