ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ 26 ವರ್ಷದ ಮುಸ್ಲಿಂ ಯುವಕನೊಬ್ಬ ತನ್ನ ಒಂದು ಕಿಡ್ನಿಯನ್ನು (ಮೂತ್ರಪಿಂಡ) ಹಿಂದೂ ಧರ್ಮಪ್ರಚಾರಕ ಪ್ರೇಮಾನಂದ ಗೋವಿಂದ ಶರಣ್ ‘ಪ್ರೇಮಾನಂದ ಜಿ ಮಹಾರಾಜ್’ ಅವರಿಗೆ ದಾನ ಮಾಡಲು ಮುಂದಾಗಿದ್ದಾನೆ. ಹಾಗೆಯೇ ಇದನ್ನು ಕೋಮು ಸಾಮರಸ್ಯಕ್ಕೆ ನೀಡುವ ಕೊಡುಗೆ ಎಂದು ಕರೆದಿದ್ದಾನೆ.
ಪ್ರೇಮಾನಂದ ಗೋವಿಂದ ಶರಣ್ ಅವರು ಸುಮಾರು ಎರಡು ದಶಕಗಳಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸುಮಾರು 18–19 ವರ್ಷಗಳ ಹಿಂದೆ ಎರಡೂ ಮೂತ್ರಪಿಂಡಗಳು ವಿಫಲವಾದ ಕಾರಣ, ಅವರು ನಿಯಮಿತ ಡಯಾಲಿಸಿಸ್ ಮೂಲಕ ಬದುಕುಳಿದಿದ್ದಾರೆ. ಅವರ ಜೀವನ ಮತ್ತು ಸಂದೇಶದಿಂದ ಪ್ರೇರಿತರಾಗಿರುವುದಾಗಿ ಹೇಳಿಕೊಂಡಿರುವ ಇತಾರ್ಸಿಯ ಆನ್‌ಲೈನ್ ಮತ್ತು ಕಾನೂನು ಸಲಹೆಗಾರ ಆರಿಫ್ ಖಾನ್ ಚಿಶ್ತಿ ಅವರು ಆಗಸ್ಟ್ 20ರಂದು ಪ್ರೇಮಾನಂದರಿಗೆ ತಮ್ಮ ಕಿಡ್ನಿ ನೀಡುವುದಾಗಿ ಜಿಲ್ಲಾಧಿಕಾರಿ ಮತ್ತು ಪ್ರೇಮಾನಂದ ಅವರಿಗೆ ಪತ್ರ ಬರೆದಿದ್ದಾರೆ.
ಇದನ್ನು ಓದಿದ್ದೀರಾ? ತನ್ನ ಸಹೋದರನಿಗೆ ಕಿಡ್ನಿ ದಾನ ಮಾಡಿದ್ದಕ್ಕೆ ಪತ್ನಿಗೆ ಫೋನಲ್ಲೇ ತ್ರಿವಳಿ ತಲಾಖ್ ನೀಡಿದ ಪತಿ
“ಖ್ವಾಜಾ ಮೊಯಿನುದ್ದೀನ್ ಚಿಶ್ತಿ ಅಜ್ಮೇರಿ ಮತ್ತು ಅಮೀರ್ ಖುಸ್ರೋ ಬಗ್ಗೆ ಮಹಾರಾಜ್ ಜಿ ತುಂಬಾ ಗೌರವದಿಂದ ಮಾತನಾಡಿದ ರೀಲ್ ಅನ್ನು ನಾನು ನೋಡಿದೆ. ಸುಲಭವಾಗಿ ದ್ವೇಷ ಹರಡುವ ಸಮಯದಲ್ಲಿ ಅವರು ಸಹೋದರತ್ವಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನನಗೆ ಅನಿಸಿತು. ಆ ಮನೋಭಾವವನ್ನು ಜೀವಂತವಾಗಿಡಲು ಅವರ ದೀರ್ಘಾಯುಷ್ಯ ಅತ್ಯಗತ್ಯ” ಎಂದು ಚಿಶ್ತಿ ಅಭಿಪ್ರಾಯಿಸಿದ್ದಾರೆ.
संत #प्रेमानंद_जी महाराज हिंदू-मुस्लिम एकता के प्रतीक हैं। वे समाज में प्रेम और शांति का संदेश देते हैं! महाराज जी की दोनों किडनियां खराब हैं, इसलिए मैं अपनी एक किडनी उनको देना चाहता हूं!
— Jitendra (Jitu) Patwari (@jitupatwari) August 22, 2025
यह आग्रह है #नर्मदापुरम के मुस्लिम युवक श्री आरिफ खान चिश्ती का! उन्होंने #वृंदावन के संत… pic.twitter.com/KMmOFNOTFW
ಸೂಫಿ ಸಂಪ್ರದಾಯವನ್ನು ಪಾಲಿಸುವ ಚಿಶ್ತಿ, ಮೊದಲು ತಮ್ಮ ಪತ್ನಿಯೊಂದಿಗೆ ಕಿಡ್ನಿ ದಾನದ ಬಗ್ಗೆ ಮಾತನಾಡಿರುವುದಾಗಿಯೂ ಹೇಳಿದ್ದಾರೆ. “ನಾನು 2023ರಲ್ಲಿ ನನ್ನ ತಾಯಿಯನ್ನು ಕಳೆದುಕೊಂಡೆ, ಅದರಿಂದಾಗಿ ನಾನು ಬಹುತೇಕ ನಿರ್ಜೀವ ಎನಿಸಿತು. ನಾನು ಒಂದು ವರ್ಷದ ಹಿಂದೆಯೇ ಮದುವೆಯಾಗಿದ್ದು, ನನ್ನ ಸಂಗಾತಿಯ ಬಳಿ ಹಿಂದೂ ಧಾರ್ಮಿಕ ಬೋಧಕರ ದೀರ್ಘಾಯುಷ್ಯ ಮತ್ತು ಯೋಗಕ್ಷೇಮಕ್ಕಾಗಿ ಕಿಡ್ನಿ ದಾನ ಮಾಡುವ ಬಗ್ಗೆ ಮಾತನಾಡಿದೆ. ದೇಶದಲ್ಲಿ ಸಮುದಾಯ ಸೌಹಾರ್ದತೆ ಮತ್ತು ಏಕತೆಯನ್ನು ಉತ್ತೇಜಿಸುವಲ್ಲಿ ಕೆಲಸ ಮಾಡುತ್ತಿರುವ ಆಧ್ಯಾತ್ಮಿಕ ಗುರುವಿನ ಜೀವನಕ್ಕಿಂತ ನನ್ನ ಜೀವನ ದೊಡ್ಡದಲ್ಲ” ಎಂದು ಹೇಳಿದ್ದಾರೆ.
ಆರಿಫ್ ಖಾನ್ ಚಿಶ್ತಿಯ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇದು ನಿಜವಾದ ಭಾರತ ಎಂದು ನೆಟ್ಟಿಗರು ಹೇಳಿದ್ದಾರೆ.
