ಕೊಪ್ಪಳ ನಗರದ ಬೀದಿಗಳಲ್ಲಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು, ಈ ಕುರಿತು ಹಲವಾರು ಬಾರಿ ಫೋನ್ ಕರೆ ಮೂಲಕ ಮತ್ತು ಅರ್ಜಿ ಮುಖಾಂತರ ದೂರು ನೀಡಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಕಾರ್ಯಕರ್ತರು ನಗರಸಭೆ ಚೀಫ್ ಆಫೀಸರ್‌ಗೆ ಮನವಿ ಸಲ್ಲಿಸಿದರು.
“ನಗರದಲ್ಲಿ ಬೀದಿ ನಾಯಿಗಳು ಆಟವಾಡುವ ಮಕ್ಕಳಿಗೆ ಕಚ್ಚಿ ಗಾಯಗೊಳಿಸಿರುವ ಬಹಳಷ್ಟು ಘಟನರಗಳಿವೆ. ಈ ಕುರಿತು ಹಲವು ಬಾರಿ ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಮನವಿ ಸಲ್ಲಿಸಿದರೂ ನಗರಸಭೆ ನಾಯಿಗಳ ದಾಳ ತಪ್ಪಿಸಲು ಕ್ರಮ ಜರುಗಿಸಿಲ್ಲ” ಎಂದು ಆರೋಪಿಸಿದರು.
“ಶಾಲೆಗೆ ಹೊಗುವಂತಹ ಹಾಗೂ ಓಣಿಯಲ್ಲಿ ಆಡುವಂತಹ ಪುಟ್ಟ ಮಕ್ಕಳ ಮೇಲೆ ನಾಯಿ ಕಡಿಯುತ್ತಿರುವ ಘಟನೆಗಳು ದಿನೇ ದಿನೆ ವರದಿಯಾಗುತ್ತಲೇ ಇವೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೆಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಸ್‌ಡಿಪಿಐ ಸಾರ್ವಜನಿಕರಿಗೆ ಕರೆ ಕೊಡುವುದರ ಮೂಲಕ ನಗರಸಭೆ ಕಾರ್ಯಲಯದ ಎದುರು ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ವಿಫಲಗೊಂಡ ಬಾವಿಗಳ ಮುಚ್ಚಲು ಕ್ರಮವಹಿಸಿ: ಡಿಸಿ ಲತಾ ಕುಮಾರಿ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸೈ ಸಲೀಮ್ ಖಾದ್ರಿ, ಉಪಾಧ್ಯಕ್ಷ ಫಾರೂಕ್ ಅತ್ತಾರ, ತಾಲೂಕು ಸಮಿತಿಯ ಸದಸ್ಯ ರಿಜ್ವಾನ್ ಪೀರ್ಜಾದೆ, ಗೆಸು, ಭಾಷಾ ಗಂಗಾವತಿ, ಶಾರುಖ್ ಖಾನ್ ಸೇರಿದಂತೆ ಇತರರು ಇದ್ದರು.