ಹಾಸನ ಜಿಲ್ಲಾ ಬಾಬು ಜಗಜೀವನ್ ರಾಮ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2024-25 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ತೇರ್ಗಡೆಹೊಂದಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 2024-25 ನೇ ಸಾಲಿನಲ್ಲಿ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದ “ಮಾದಿಗ” ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿರಬೇಕು. (ಎರಡನೇ ಪ್ರಯತ್ನದಲ್ಲಿ ತೇರ್ಗಡೆಯಾದವರನ್ನು ಪರಿಗಣಿಸುವುದಿಲ್ಲ)ಎಸ್.ಎಸ್.ಎಲ್.ಸಿ. ಶೇ.80%ಅಂಕ ಮೇಲ್ಪಟ್ಟು, ಪಿ.ಯು.ಸಿ. ಕಲಾ, ವಿಜ್ಞಾನ, ವಾಣಿಜ್ಯ ಶೇ.80% ಅಂಕ ಮೇಲ್ಪಟ್ಟವರು ಅರ್ಜಿಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 10 ಕೊನೆ ದಿನವಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಖುದ್ದಾಗಿ ಅಥವಾ ಈ ಕೆಳಗೆ ತಿಳಿಸಿರುವ ವಿಳಾಸಕ್ಕೆ ಅಂಚೆ ಮೂಲಕ ಸೆಪ್ಟೆಂಬರ್ 10ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಂಚೆ ವಿಳಾಸ: ಬಸವರಾಜು. ಎಲ್ ಎಸ್. ಭಾಗ್ಯರಾಜು ನಿಲಯ, #.2390, 2ನೇ ಕ್ರಾಸ್, ಮಾಷ್ಟರ್ ಪಿ.ಯು.ಕಾಲೇಜು ಹಿಂಭಾಗ, ವಿವೇಕ ನಗರ, ಹಾಸನ-573201 ಮುಂದುವರಿದು ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ದೂರವಾಣಿ ಮೂಲಕ ತಿಳಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ತಂದೆ/ತಾಯಿ/ಪೋಷಕರೊಂದಿಗೆ ಕಡ್ಡಾಯವಾಗಿ ಸೆಪ್ಟೆಂಬರ್ 14 ರಂದು ಡಾ|| ಬಿ ಆರ್ ಅಂಬೇಡ್ಕರ್ ಭವನ, ಹಾಸನ ಇಲ್ಲಿ ಸಮಯ:10.30ಕ್ಕೆ ನಡೆಯುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಹಾಜರಾಗಲು ಕೋರಿದೆ.
ಇದನ್ನೂ ಓದಿ: ಹಾಸನ | ವಿಫಲಗೊಂಡ ಬಾವಿಗಳ ಮುಚ್ಚಲು ಕ್ರಮವಹಿಸಿ: ಡಿಸಿ ಲತಾ ಕುಮಾರಿ
ಸಂಪರ್ಕಿಸಬಹುದಾದವರ ಸಂಪರ್ಕ ಸಂಖ್ಯೆ: ಬಸವರಾಜು – 90196 38674, ಸೋಮಶೇಖರ್ – 831-0433685 ಹಾಗೂ ರಾಜು ಬಿ ಹೆಚ್ – 96867 77882 ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.