ಉತ್ತರ ಕನ್ನಡ | ಕೇಣಿ ಬಂದರು ಅಹವಾಲು ಸ್ವೀಕಾರ ಸಭೆ: ಹಣದ ಆಮಿಷವೊಡ್ಡಿ ಬೆಂಬಲ ಪಡೆಯುತ್ತಿರುವ ಆರೋಪ

Date:

Advertisements

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ ಉದ್ದೇಶಿತ ಖಾಸಗಿ ಬಂದರು ನಿರ್ಮಾಣ ವಿಚಾರ ಮತ್ತೆ ಚರ್ಚೆಗೆ ಕಾರಣವಾಗಿದೆ. ಜನರ ತೀವ್ರ ವಿರೋಧದ ನಡುವೆಯೂ ಹಣದ ಆಮಿಷ ನೀಡಿ ಬೆಂಬಲ ಪಡೆಯಲು ಜೆಎಸ್‌ಡಬ್ಲ್ಯೂ ಕಂಪೆನಿ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.

ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ನಡೆಯುತ್ತಿರುವ ಕೇಣಿ ಬಂದರು ಅಹವಾಲು ಸ್ವೀಕಾರ ಸಭೆಯಲ್ಲಿ ಜೆಎಸ್‌ಡಬ್ಲ್ಯೂ ಕಂಪೆನಿಯ ಹಾಗೂ ಅದರ ಬೆಂಬಲಿಗರ ಕೃತ್ಯಗಳು ಬಯಲಾಗಿದೆ. ₹4,118 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬಂದರಿಗೆ ಬೆಂಬಲದ ಹೆಸರಿನಲ್ಲಿ ಹಣ ಹಂಚಿಕೆ ನಡೆದಿರುವುದು ತಿಳಿದುಬಂದಿದೆ.

ಬಂದರಿನ ಪರವಾಗಿ ನಿಲ್ಲಲು ಸ್ಥಳೀಯರನ್ನು ಮತ್ತು ಅಂಕೋಲಾದ ವಿವಿಧೆಡೆಯ ಜನರನ್ನು ಹಣದ ಆಮಿಷವೊಡ್ಡಿ ಕರೆಯಲಾಗಿದೆಯೆಂದು ಆರೋಪಿಸಿದ್ದು, ಕುಮಟಾ ಸೇರಿದಂತೆ ಹೊರಗಿನ ತಾಲೂಕುಗಳಿಂದಲೂ ಜನರನ್ನು ನಕಲಿ ಸಹಿಗಳೊಂದಿಗೆ ಸಹಿ ಅಭಿಯಾನಕ್ಕೆ ಕರೆಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

Advertisements

ಕಂಪೆನಿಯ ಕುತಂತ್ರವನ್ನು ಅಂಕೋಲಾ ಜನರು ಸಾಕ್ಷಿ ಸಮೇತ ಮಾಧ್ಯಮದ ಮುಂದೆ ಬಯಲಿಗೆಳೆದಿದ್ದಾರೆ. ಬೊಗ್ರಿಬೈಲ್‌ನ ಮಹಿಳೆಯರಿಗೆ ಪ್ರೇಮಾ ಎಂಬ ಮಹಿಳೆ ಹಣದ ಆಮಿಷ ನೀಡಿ ಕರೆ ತಂದಿದ್ದಾಳೆಂಬ ದೂರೂ ಕೂಡ ಕೇಳಿಬಂದಿದೆ. ಇತರರಿಗೂ ತಲಾ ₹500 ನೀಡಿ ನೂರಾರು ಜನರನ್ನು ಸೇರಿಸಿದ ಆರೋಪವಿದೆ.

ಅಂಕೋಲಾದ ನಿವಾಸಿಯೆಂದು ಗುರುತಿಸಿಕೊಂಡು ಬಂದರು ಪರವಾಗಿ ಬಂದಿದ್ದ ಹಿರೇಗುತ್ತಿಯ ಯುವಕನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಜನರ ಅಸಮಾಧಾನ ವ್ಯಕ್ತವಾಗುತ್ತಿದ್ದಂತೆ, “ಜಮೀನು-ಮನೆಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದರೆ ನಮ್ಮ ಮಕ್ಕಳನ್ನು ಕರೆದುಕೊಂಡು ಬೀದಿಗಿಳಿದು ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಜಾನುವಾರುಗಳ ಕಳವು ಪ್ರಕರಣ : ಐವರು ಆರೋಪಿಗಳ ಬಂಧನ

ಜನರ ವಿರೋಧದ ನಡುವೆಯೂ ಬಂದರು ಪರವಾಗಿ ಸಹಿ ಪತ್ರ ಸಂಗ್ರಹಿಸುವ ಕಾರ್ಯ ಮುಂದುವರೆದರೆ, ಮುಖಂಡರು ಮತ್ತು ಕಂಪೆನಿ ಸಿಬ್ಬಂದಿಯ ವಿರುದ್ಧ ಜನರು ಕೈ ಎತ್ತುವುದಕ್ಕೂ ಹಿಂದೆ ಸರಿಯುವುದಿಲ್ಲವೆಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಬಂದರು ಪರ ನಕಲಿ ಸಹಿ ಹಾಕಿದ ಬೆಂಬಲಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ವ್ಯಕ್ತವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ಸೌಜನ್ಯ ಹೋರಾಟ ಮುಂದುವರಿಯಲಿದೆ: ಮಹೇಶ್ ಶೆಟ್ಟಿ ತಿಮರೋಡಿ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಕೋಲಾರ | ಪ್ರಗತಿಪರ ರೈತ ತುರಾಂಡಹಳ್ಳಿ ರವಿ ತೋಟಕ್ಕೆ ಅಂತಾರಾಷ್ಟ್ರೀಯ ಅಧಿಕಾರಿಗಳು ಭೇಟಿ

ಕೋಲಾರ ತಾಲೂಕಿನ ತುರಾಂಡಹಳ್ಳಿ ಗ್ರಾಮದ ಪ್ರಗತಿಪರ ರೈತ ಟಿ.ಎನ್ ರವಿ ಅವರ...

ಹಾವೇರಿ | ಬೇಡ್ತಿ-ವರದಾ ನದಿ ಜೋಡಣೆಗೆ ಕೇಂದ್ರ ತಾತ್ವಿಕ ಒಪ್ಪಿಗೆ: ಸಂಸದ ಬಸವರಾಜ ಬೊಮ್ಮಾಯಿ

"ಬೇಡ್ತಿ- ವರದಾ ನದಿ ಜೋಡಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ...

ಹಾವೇರಿ | ನಿರಂತರ ಮಳೆಯಿಂದ ಬೆಳ್ಳುಳ್ಳಿ ಬೆಳೆ ಹಾನಿ: ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ‌ ಸಂತ್ರಸ್ತ ರೈತರು

ಹಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಬೆಳ್ಳುಳ್ಳಿ ಬೆಳೆದ ರೈತನ ಬದುಕು...

Download Eedina App Android / iOS

X