ಚಿಕ್ಕಮಗಳೂರು | ಹಣಕ್ಕಾಗಿ ಮೂವರ ಮೇಲೆ ಹಲ್ಲೆ: ಇಬ್ಬರ ಸಾವು

Date:

Advertisements

ಆಸ್ತಿ ಮಾರಿದ ಹಣಕ್ಕಾಗಿ ಮೂವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆದಿದ್ದು, ಇಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

ಮೂಡಿಗೆರೆ ತಾಲೂಕಿನ ಮಧುಗುಂಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಇಬ್ಬರು ಮೃತಪಟ್ಟಿದ್ದರೆ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಹತ್ಯೆಗೊಳಗಾದವರು ಕಾರ್ತಿಕ್‌(45) ಮತ್ತು ‌ಆರೋಪಿ ತಂದೆ ಭಾಸ್ಕರ್ ಗೌಡ.

ಆಸ್ತಿ ಮಾರಿದ 12‌ ಲಕ್ಷ ರೂ. ಹಣಕಾಸಿನ ವಿಚಾರ ಕೊಲೆಯಲ್ಲಿ ಅಂತ್ಯವಾಗಿದೆ. ಆಸ್ತಿ ಹಣಕ್ಕಾಗಿ ತನ್ನ ತಂದೆ ಹಾಗೂ ಆಸ್ತಿ ಮಾರಾಟದ ಮಧ್ಯವರ್ತಿಯನ್ನು ಹತ್ಯೆ ಮಾಡಿದ್ದಾನೆ.

Advertisements

ಆರೋಪಿ ಸಂತೋಷ್‌ ಹಾಗೂ ಆತನ ತಂದೆಗೆ ಸೇರಿದ ಜಮೀನನ್ನು ಮಾರಾಟ ಮಾಡಲು ಕಾರ್ತಿಕ್‌ (45) ಎಂಬವರು ಮಧ್ಯಸ್ಥಿಕೆ ವಹಿಸಿದ್ದರು. ಆಸ್ತಿ ಮಾರಿ ಬಂದ ಹಣದಲ್ಲಿ ಪಾಲಿನ ವಿಚಾರವಾಗಿ ಜಗಳ ಹುಟ್ಟಿಕೊಂಡಿದ್ದು, ಈ ಸಂದರ್ಭದಲ್ಲಿ ಸಂತೋಷ್‌ ತನ್ನ ತಂದೆ ಭಾಸ್ಕರ್‌ ಗೌಡ, ತಾಯಿ ಹಾಗೂ ಮಧ್ಯವರ್ತಿ ಕಾರ್ತಿಕ್‌ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ.

ಈ ಸುದ್ದಿ ಓದಿದ್ದೀರಾ? ರಾಯಚೂರು | ಏಮ್ಸ್ ಮಂಜೂರಾತಿ ಕುರಿತು ಪ್ರಾಣ ತ್ಯಾಗಕ್ಕೂ ಸಿದ್ಧ: ಕಾಂಗ್ರೆಸ್ ಮುಖಂಡ

ಮೂವರಿಗೂ ತೀವ್ರ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ತಂದೆ ಹಾಗೂ ಕಾರ್ತಿಕ್‌ ಮೃತಪಟ್ಟಿದ್ದಾರೆ. ತಾಯಿ ಸ್ಥಿತಿ ಗಂಭೀರವಾಗಿದೆ. ಹಲ್ಲೆ ನಡೆಸಿ ಆರೋಪಿ ಸಂತೋಷ್‌ ನೇರವಾಗಿ ಠಾಣೆಗೆ ಹೋಗಿದ್ದಾನೆ.

ಬಾಳೂರು‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

ತುಮಕೂರು | ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ : ಡಿಕೆಶಿ ವಿರುದ್ಧ ಕೆ. ಎನ್ ರಾಜಣ್ಣ ವಾಗ್ದಾಳಿ

ಡಿ.ಕೆ.ಶಿವಕುಮಾ‌ರ್ ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ ಹಾಡಿದ ಬಗ್ಗೆ  ಮಾಜಿ ಸಚಿವ ಕೆ...

Download Eedina App Android / iOS

X