ದನ ಕಳ್ಳತನ ಮಾಡಿ ಸಾಗಿಸುತ್ತಿದ್ದಾಗ ಆರೋಪಿಗಳನ್ನ ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ನಡೆದಿದೆ.
ಆರೋಪಿಗಳಾದ ಸಲ್ಮಾನ್ ಖಾನ್@ಸಂಪತ್ ಬಿನ್ ಅಶ್ವಕ ಖಾನ್ (21 ), ಸಾಹಿಲ್ ಬಿನ್ ಲೇಟ್ ಜಮಿಲ್ ಅಹಮ್ಮದ್ (21), ಸಯ್ಯದ ತೌಫಿಕ್ ಬಿನ್ ಸೈಯದ್ ಐಜಾಜ್ (32 ), ಅಬ್ದುಲ್ ಅಜೀಜ್ ಬಿನ್ ಅಬ್ದುಲ್ ನಜೀರ್ (34), ಅಬ್ದುಲ್ ಜಾವಾದ್ ಬಿನ್ ಅಬ್ದುಲ್ ಹಾಕ್ (22), ಪೊಲೀಸರು ಜಾನುವಾರುಗಳನ್ನು ರಕ್ಷಿಸಿದ್ದು, ಹಾಗೂ ಕೃತ್ಯಕ್ಕೆ ಬಳಸಿದ ವಾಹನ & ಮೊಬೈಲ್ ಗಳನ್ನು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ ಎನ್ನಲಾಗಿದೆ.
ಜುಲೈ 10ರಂದು ಕಳಸ ಪೊಲೀಸ್ ಠಾಣಾ ವ್ಯಾಪ್ತಿಯ ಬಲಿಗೆ ಚೆಕ್ ಪೋಸ್ಟ್ ಹತ್ತಿರ xylo ವಾಹನದಲ್ಲಿ ಐದು ಜನ ಆರೋಪಿತರು ನಾಲ್ಕು ದನಗಳನ್ನು ಸಾಗಿಸಿಕೊಂಡು ಹೋಗುತ್ತಿರುವಾಗ ಸ್ಥಳೀಯರ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಶೋಧ ಕಾರ್ಯ ನಡೆಸಲಾಗಿದೆ. ಕಳಸ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿಯವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಆರೋಪಿತರು ಕದ್ದು ಪರಾರಿಯಾಗಿದ್ದರಿಂದ ವಾಹನದಲ್ಲಿದ್ದ ನಾಲ್ಕು ದನಗಳನ್ನು ರಕ್ಷಿಸಿ ಮತ್ತು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ಎಲ್ಲಾ ಆರೋಪಿಗಳು ಚಿಕ್ಕಮಗಳೂರು ಜಿಲ್ಲೆ, ಶಿವಮೊಗ್ಗ ಜಿಲ್ಲೆ, ದಾವಣಗೆರೆ ಜಿಲ್ಲೆ, ಹಾವೇರಿ ಜಿಲ್ಲೆ, ಚಿತ್ರದುರ್ಗ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದನಕಳ್ಳತನ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿದ್ದು, ಆರೋಪಿಗಳು ಪದೇ ಪದೇ ದನಕಳ್ಳತನ ಮಾಡುವ ಪ್ರವೃತ್ತಿಯುಳ್ಳವರೆನ್ನಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಮೂವರು ಅಂತಾರಾಷ್ಟ್ರೀಯ ಮನೆಗಳ್ಳರ ಬಂಧನ
ಠಾಣಾ ಮೊ.ನಂ: 40/2025 ರ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ. ಈ ಕುರಿತು ಡಾ.ವಿಕ್ರಂ ಅಮಟೆ ಐಪಿಎಸ್ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಬಾಲಾಜಿ ಸಿಂಗ್ ಪೊಲೀಸ್ ಉಪಾಧೀಕ್ಷಕರು ಕೊಪ್ಪ ಉಪವಿಭಾಗರವರ ನೇತೃತ್ವದಲ್ಲಿ ಕಳಸ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರಶೇಖರ್ ಎ.ಎಮ್ ಹಾಗೂ ಸಿಬ್ಬಂದಿಗಳಾದ ಗಿರೀಶ, ಶಿವಕುಮಾರ, ನಿಖಿಲ್, ಸಿದ್ದಪ್ಪ ಕರಂಡಿ, ಪ್ರಮೋದ್ ಎಲ್, ಹೆಚ್ ವಿನಯ್ ಹಾಗೂ ಇನ್ನಿತರರಿದ್ದರು.