ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಸೊಸೆಯೇ ಅತ್ತೆಯನ್ನು ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕು ಶಿವನಿ ಹೋಬಳಿ ತಡಗ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆ ದೇವಿರಮ್ಮ (75 ), ಸೊಸೆಯಾದ ಆರೋಪಿ ಅಶ್ವಿನಿ (34), ಮತ್ತು ಶಿವನಿ ಗ್ರಾಮದ ಆಂಜನೇಯ ಇಬ್ಬರಿಗೂ ಅಕ್ರಮ ಸಂಬಂಧವಿದ್ದ ಕಾರಣ ಆರೋಪಿಯಾದ ಆಂಜನೇಯನಿಗೆ ಹಣದ ಅಭಾವವಿರುವುದರಿಂದ ಅಶ್ವಿನಿ ಎಂಬಾಕೆ, ಅತ್ತೆಯಾದ ದೇವಿರಮ್ಮನಿಗೆ ಊಟದಲ್ಲಿ ನಿದ್ದೆ ಮಾತ್ರೆ ಬೆರಸಿ ತಿನ್ನಿಸಿದರಿಂದ ಉಸಿರಾಟಕ್ಕೆ ತೊಂದರೆಯಾಗಿದೆ ಆಸ್ಪತ್ರೆಗೆ ಸ್ಥಳೀಯರ ಸಹಾಯದಿಂದ ಕರೆದುಕೊಂಡು ಹೋಗುವಾಗ ರಸ್ತೆ ಮಧ್ಯದಲ್ಲಿ ದೇವಿರಮ್ಮ ಮೃತಪಟ್ಟಿದ್ದಾರೆ.
10ರಂದು ಅಶ್ವಿನಿ ಆತನ ಸ್ನೇಹಿತನಾದ ಆಂಜನೇಯನ ಜೊತೆ ಸೇರಿ ಮನೆಯಲ್ಲಿದ್ದ, 20 ಲಕ್ಷ ರೂ ಬೆಲೆ ಬಾಳುವ ಬಂಗಾರದ ಆಭರಣಗಳು ಮತ್ತು 65,000 ರೂ ಹಣ ಕಳತನ ಮಾಡಿ ದೇವಿರಮ್ಮನ್ನನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ತಾಯಿ ಸತ್ತ ವಿಚಾರವನ್ನು ಗಂಡನಿಗೂ ತಿಳಿಸದೇ, ಯಾರಿಗೂ ಗೊತ್ತಾಗದಂತೆ ಸಂಬಂಧಿಕರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ 11ರಂದು ಶವಸಂಸ್ಕಾರ ಮಾಡಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ದನ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಮೊ.ನಂ 222/2025 ಕಲಂ 305,103(1),238,3(5) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಘಟನೆ ಕುರಿತು ಡಾ.ವಿಕ್ರಂ ಅಮಟೆ ಐಪಿಎಸ್ ಪೊಲೀಸ್ ಅಧೀಕ್ಷಕರ ಹಾಗೂ ಜಯಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಹಾಲಮೂರ್ತಿರಾವ್ ಡಿವ್ಯೆಎಸ್ಪಿ ತರೀಕೆರೆ ಉಪವಿಭಾಗರವರ ನೇತೃತ್ವದಲ್ಲಿ, ವೀರೇಂದ್ರ ಪೊಲೀಸ್ ನಿರೀಕ್ಷಕರು ಅಜ್ಜಂಪುರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳು ಸೇರಿ ತನಿಖೆ ನಡೆಸಲಾಗಿದೆ.