ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ನಾಲ್ಕು ಜನ ಆರೋಪಿಗಳನ್ನು ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನಿಂಗಪ್ಪ ಗುರಿಕಾರ (50), ಮಾರುತಿ ಗುರಿಕಾರ (26), ರವಿ ಗುರಿಕಾರ (20), ನಾಗಪ್ಪ ಕುದುರಿಮೋತಿ (38 ) ಎಂಬುವವರನ್ನು ಬಂಧಿಸಲಾಗಿದೆ, ಇವರಲ್ಲಿ ಮೂವರು ಒಂದೇ ಕುಟುಂಬದವರು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ 25,200 ಬೆಲೆ ಬಾಳುವ 630 ಗ್ರಾಂ ಗಾಂಜಾ ಹಾಗೂ 15 ಗಾಂಜಾ ಗಿಡದ ಸಸಿಗಳನ್ನು ವಶಪಡಿಸಿಕೊಳ್ಳಲಾಗಿದೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
https://shorturl.fm/eyvEA