ಕೋಲಾರ | ‘ವೇಮಗಲ್ – ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ದಲಿತರನ್ನು ಕಡೆಗಣಿಸಿಲ್ಲ’

Date:

Advertisements

ಇತ್ತೀಚೆಗೆ ಕೋಲಾರ ಜಿಲ್ಲೆಯ ವೇಮಗಲ್- ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ 6 ಸ್ಥಾನ ಗಳಿಸಿದ ಕಾಂಗ್ರೆಸ್ ಸೋಲಲು ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎಂಎಲ್ ಸಿ ಅನಿಲ್ ಕುಮಾರ್ ರವರೇ ಕಾರಣ ಎಂದಿದ್ದ ಮುಖಂಡರಿಗೆ ವೇಮಗಲ್ -ಕುರುಗಲ್ ಪಟ್ಟಣ ಪಂಚಾಯತಿ ವ್ಯಾಪ್ತಿಯ ದಲಿತ ಮುಖಂಡರು ತಿರುಗೇಟು ನೀಡಿದ್ದಾರೆ.

ವೇಮಗಲ್ ಪಟ್ಚಣದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷ ಮುನಿಯಪ್ಪ ಮಾತನಾಡಿ, “ಎಸ್.ಎನ್ ನಾರಾಯಣಸ್ವಾಮಿ ಅವರಿಗೆ ವಾಸ್ತವಾಂಶ ಏನು ಗೊತ್ತಿದೆ? ಅವರು ಬಂಗಾರಪೇಟೆಯಲ್ಲಿ ಇರೋದು. ಅವರಿಗೆ ಗೊತ್ತಿಲ್ಲ ಅಂತ ಕಾಣುತ್ತದೆ. ಪ್ರಚಾರಕ್ಕೆ ಎಸ್, ಎನ್ ನಾರಾಯಣಸ್ವಾಮಿ ನಾ ಕರೆದಿಲ್ಲ ಎನ್ನುವ ಪ್ರಶ್ನೆಗೆ ಅದು ದೊಡ್ಡ ಲೆವೆಲ್ ಗೆ ಬಿಟ್ಟಿದ್ದು. ನಮಗೆ ಅವರಿಗೆ ಅಜಗಜಾಂತರ, ಆ ದೊಡ್ಡ ಲೆವೆಲ್ ನಲ್ಲಿ ನಾವು ಯಾಕೆ ಮಾತನಾಡಬೇಕು” ಎಂದರು.

“ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎಂಎಲ್ ಸಿ ಅನಿಲ್ ಕುಮಾರ್ ರವರು ದಲಿತ ಸಮುದಾಯ ಮತ್ತು ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣಾ ಪ್ರಚಾರ ಸಮಯದಲ್ಲಿಯೂ ಸಹ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಎಲ್ಲಾ ಪ್ರಚಾರದಲ್ಲಿ ನಮ್ಮ ಸುತ್ತಮುತ್ತಲಿನ ದಲಿತ ಸಮುದಾಯ ಮುಖಂಡರು, ನಾಯಕರು ಇದ್ದಾರೆ ಇಲ್ಲ ಎನ್ನುವವರು ದಾಖಲೆ ಸಮೇತ ತೋರಿಸುವೆ, ಇದಕ್ಕೆ ನಾನೇ ಸಾಕ್ಷಿ ಎಂದರು. ಎಲ್ಲಾ ಸಮುದಾಯದವರು ಸೇರಿ ಮನೆ ಮನೆ ಭೇಟಿ ನೀಡಿ ಕೆಲಸ ಮಾಡಿದ್ದೇವೆ. ನಮ್ಮ ಪಕ್ಷದಲ್ಲಿಯೇ ಇದ್ದ ಕೆಲವರಿಂದ ಸ್ವಲ್ಪ ತೊಂದರೆಯಾಗಿ ಹಿನ್ನಡೆಯಾಗ ಬೇಕಾಯಿತು. ಇನ್ನು ಮುಂದಿನ ದಿನಗಳಲ್ಲಿ ಅಂತಹವರನ್ನ ಗುರುತಿಸಿ ಸರಿಪಡಿಸಿಕೊಂಡು ಮುನ್ನಡೆಯುತ್ತೇವೆ. ಸೋಲಿಗೆ ಕಾರಣ ಯಾರು ಎಂಬುದು ಜನತೆಗೆ ತಿಳಿದಿದೆ. ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ ಅನಿಲ್ ಕುಮಾರ್, ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ರವರು ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಈ ಎಲೆಕ್ಷನ್ ನಲ್ಲಿ ಮೈತ್ರಿ ಪಕ್ಷದವರು ದುಡ್ಡು ಜಾಸ್ತಿ ಕೊಟ್ಟು ಮತ ಹಾಕಿಸಿ ಕೊಂಡಿದ್ದಾರೆ. ಕೆಲವು ವಾರ್ಡ್ ಗಳಲ್ಲಿ ಗ್ಯಾರಂಟಿ ಕೆಲಸ ಮಾಡಿದರೆ, ಇನ್ನು ಕೆಲವು ವಾರ್ಡ್ ಗಳಲ್ಲಿ ದುಡ್ಡು ಕೆಲಸ ಮಾಡಿದೆ, ಹತ್ತು, ಹದಿನೈದು ಪಟ್ಟು ದುಡ್ಡು ಕೆಲಸ ಮಾಡಿದ್ದರಿಂದ ಕೆಲವರು ಗೆದ್ದಿದ್ದಾರೆ. ಕೆಲವು ಕಡೆ ಫ್ರಿಡ್ಜ್ ಸೇರಿ ಅನೇಕ ಗಿಪ್ಟ್ ಕೊಟ್ಟಿದ್ದಾರೆ” ಎಂದರು.

Advertisements

“2023 ರ ಎಂಎಲ್ಎ ಚುನಾವಣೆ, 2024 ರ ಎಂಪಿ ಚುನಾವಣೆ ಇದೀಗ ನಡೆದ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕ ಮತ ಬಂದಿದೆ. ತಾಲ್ಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಇದ್ದಿದ್ದು, ನಮ್ಮ ಸಮುದಾಯಕ್ಕೆ ಮೀಸಲು ಆಗಿರಿಲ್ಲ, ಆದರೆ ಶಾಸಕರು, ಎಂಎಲ್‌ಸಿ ಅವರು ದಲಿತ ಸಮುದಾಯಕ್ಕೆ ಅವಕಾಶ ಮಾಡಿಕೊಟ್ಟು ಗುರುತಿಸಿದ್ದಾರೆ. ಅದರಲ್ಲೂ ಸಹ ಈ ಒಂದು ತಾಲ್ಲೂಕು ಅಧ್ಯಕ್ಷ ಸ್ಥಾನವನ್ನು ವಕ್ಕಲೇರಿ ರಾಜಪ್ಪ ನವರಿಗೆ ಕೊಟ್ಟಿದ್ದರು ಅವರು ಬೇಡ ಅಂತ ಹೇಳಿದ ಮೇಲೆ ನನಗೆ ಈ ಅವಕಾಶ ಸಿಕ್ಕಿದೆ. ದಲಿತ ಸಮುದಾಯ ಶಾಸಕರು, ಎಂಎಲ್ ಸಿ ಅವರು ಪ್ರಾತಿನಿತ್ಯ ಕೊಟ್ಟಿಲ್ಲ ಎನ್ನುವರು ಸೂಕ್ಷ್ಮವಾಗಿ ಗಮನಿಸಬೇಕು ಎಂದರು. ಖಾದ್ರಿಪುರ ಬಾಬು, ಕ್ಯಾಲನೂರು ಬಾಬ ಸಾಬಿ, ದರಖಾಸ್ತು ಸಮಿತಿ ಸದಸ್ಯರಾಗಿ, ಅಟ್ರಾಸಿಟಿ ಸಮಿತಿ ಸದಸ್ಯರಾಗಿ ದೊಡ್ಡಯ್ಯುರು ರವೀಂದ್ರ, ಬೈರಂಡಹಳ್ಳಿ ನಾಗೇಶ್, ದೇವರಹಳ್ಳಿ ಶ್ರೀನಿವಾಸ್ ಮದ್ದೇರಿ ಸೊಸೈಟಿ ಉಪಾಧ್ಯಕ್ಷರಾಗಿ, ಕೋಲಾರ ಗಂಗಮ್ಮನಪಾಳ್ಯ ರಾಮಯ್ಯ ನಗರಸಭೆ ನಾಮಿನಿ ಸದಸ್ಯರಾಗಿ, ಕೋಲಾರ ಗಾಂಧಿನಗರ ಅನಿಲ್ ( ಅಯ್ಯ) ಕುಡಾ ನಾಮಿನಿ ಸದಸ್ಯರಾಗಿ, ಮೊದಲ ಬಾರಿಗೆ ಕುಡಾ ಅಧ್ಯಕ್ಷರಾಗಿ ಅನಿಫ್ ನಾಮಿನಿಯಾಗಿದ್ದಾರೆ. ಕೋಮುಲ್ ನಲ್ಲಿ ಶಂಷೀರ್ ನಾಮಿನಿ ಸದಸ್ಯರಾಗಿ, ಮಠಪುರ ಕವಿತಾ ಮುನಿರಾಜು ಸೀತಿ ಗ್ರಾಪಂ ಅಧ್ಯಕ್ಷರಾಗಿ, ವೇಮಗಲ್ ಸೊಸೈಟಿ ನಿರ್ದೇಶಕಾಗಿ ವಿ.ಪಿ ರವಿಕುಮಾರ್ ಎಂಬುವರಿಗೆ ದಲಿತ ಸಮುದಾಯಕ್ಕೆ ಶಕ್ತಿ ಮೀರಿ ಪ್ರತಿನಿತ್ಯ ನೀಡಿದ್ದರು, ಬೇರೆಯವರು ಪ್ರತಿನಿತ್ಯ ನೀಡಿಲ್ಲ ಎನ್ನುವುದು ಸರಿಲ್ಲ ಎಂದು ಪರೋಕ್ಷವಾಗಿ ವಕ್ಕಲೇರಿ ರಾಜಪ್ಪ ನವರಿಗೆ ಟಾಂಗ್ ನೀಡಿದ್ದಾರೆ.ಟೀಕಿಸುವವರಿಗೆ ಮುಂದಿನ ದಿನಗಳಲ್ಲಿ ಉತ್ತರ ನೀಡುತ್ತೆವೆ” ಎಂದು ಕಿಡಿಕಾರಿದರು.

ಕೋಲಾರ ಗ್ರಾಮಾಂತರ ಎಸ್.ಸಿ ಬ್ಲಾಕ್ ಅಧ್ಯಕ್ಷ ಬೆಟ್ಟಹೊಸಪುರ ಮಾತನಾಡಿ, “ನಮ್ಮಲ್ಲಿರುವ ವ್ಯಕ್ತಿಗಳನ್ನು ಮೈತ್ರಿ ಪಕ್ಷದವರು ನಿಲ್ಲಿಸಿಕೊಂಡಿರುವುದು, ನಮ್ಮಲ್ಲಿ ಇದ್ದವರೆ ಇವತ್ತು ಅಲ್ಲಿ ಇರುವುದು, ನೀವೆಲ್ಲ ಎಲ್ಲಿಂದ ಬಂದವರು ಅಂತ ಎಲ್ಲರಿಗೂ ಗೊತ್ತಿದೆ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ಗೆ ಟಾಂಗ್ ನೀಡಿ, ನಮ್ಮ ಅಭ್ಯರ್ಥಿಗಳು ಅತಿ ಕಡಿಮೆ ಮತದಿಂದ ಸೋತಿದ್ದಾರೆ. ಯಾರು ಯಾರೋ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧ ಪಡೆದವರೆಲ್ಲ ಇವತ್ತು ಟೀಕೆ ಮಾಡುವವರು ಆಗಿದ್ದಾರೆ.‌ ಅಂತವರಿಗೆಲ್ಲ ಮುಂದಿನ ಉತ್ತರ ನೀಡುತ್ತೇವೆ” ಎಂದರು.‌

ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಪಟ್ಟಣ ಪಂಚಾಯತಿ ಹಾಲಿ ಕೌನ್ಸಿಲರ್ ಶಶಿಕಲಾ ನಾಗೇಶ್ ಮಾತನಾಡಿ, “ಕಾಂಗ್ರೆಸ್‌ ಸರ್ಕಾರ ಎಂದರೆ ಅದು ಬಡವರ ಪರ ನಿಂತಿರುವ ಸರ್ಕಾರ, ಇದೇ ಗ್ರಾಮದ ಸುದರ್ಶನ್ ರವರು ಪಟ್ಟಣ ಪಂಚಾಯತಿ ಜೊತೆಗೆ ಚುನಾವಣೆ ಆಗಬೇಕಂತಲೂ ಎಷ್ಟು ಶ್ರಮ ಪಟ್ಟಿದ್ದಾರೆ ಅಂತ ನಾವು ತುಂಬಾ ಹತ್ತಿರದಿಂದ ನೋಡಿದ್ದೇವೆ. ಪಟ್ಟಣ ಪಂಚಾಯತಿಯಲ್ಲಿ ನಮ್ಮದೇ ಸರ್ಕಾರ ಬರುತ್ತದೆ ಅಂತ ತುಂಬಾ ಆಸೆ ಇತ್ತು ಆದರೆ ಮತದಾರರು ಕೆಲವು ವಾರ್ಡ್ ಗಳಲ್ಲಿ ಅಭಿವೃದ್ಧಿ ಮಾಡಲು ಸೋತು, ಬೇರೆಯದಕ್ಕೆ ಕೈ ಹಿಡಿದಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ಮೊದಲು ಶಾಸಕ ಕೊತ್ತೂರು ಮಂಜುನಾಥ್ ರವರನ್ನು ನೀವೇ ಅಲ್ವಾ ಕರೆದುಕೊಂಡು ಬಂದು ಕೋಲಾರದಲ್ಲಿ ಓಡಾಡಿಸಿದ್ದು. ಈಗ ನೀವೆ ದೂರ ಹೋಗಿರುವುದು ಯಾಕೆ ಅದಕ್ಕೆ ಮೊದಲು ಉತ್ತರ ಕೊಡಿ ವಕ್ಕಲೇರಿ ರಾಜಪ್ಪನವರಿಗೆ ಪ್ರಶ್ನೆ ಹಾಕಿದ್ದಾರೆ. ನೀವೆಲ್ಲ ಜೊತೆಯಲ್ಲಿ ಇದ್ದುಕೊಂಡು ಯುವಕರಿಗೆ ಮಾರ್ಗದರ್ಶನ ನೀಡಿ ನೀವೆ ಈಗ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂಎಲ್‌ಸಿ ಅನಿಲ್ ಕುಮಾರ್ ರವರಿಂದ ದೂರ ಇರಲು ಕಾರಣ ಏನು ಅದಕ್ಕೆ ಉತ್ತರ ಕೊಟ್ಟು ತದನಂತರ ನಿಮ್ಮ ವೈಯಕ್ತಿಕ ಟೀಕೆ ಮಾಡಿ ನಾವು ಬೇಡ ಅಂತ ಹೇಳುವುದಿಲ್ಲ” ಎಂದು ಟಾಂಗ್ ನೀಡಿದರು.

ಇದನ್ನೂ ಓದಿ: ಕೋಲಾರ | ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿ, ದೇವರಾಜ ಅರಸು ಜನ್ಮ ದಿನಾಚರಣೆ

“ಕಾಂಗ್ರೆಸ್ ಪಕ್ಷದಲ್ಲಿ ಕೆಲವು ಹಿತಾಸಕ್ತಿಗಳು ಕೆಲಸ ಮಾಡಿವೆ ಮುಂದಿನ ದಿನಗಳಲ್ಲಿ ಎಲ್ಲವನ್ನು ಬಹಿರಂಗವಾಗಿ ಹೇಳುತ್ತೇವೆ. ಒಬ್ಬ ಕೋಲಾರ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕರು ನನಗೆ ಕರೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಡಿ ಅಂತ ಹೇಳುತ್ತಾರೆ. ಇಲ್ಲಿ ಏನಾಗಿದೆ ವ್ಯವಸ್ಥೆ ಎಂಬುದಕ್ಕೆ ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಆ ಒಂದು ಪಟಾಲಂ ಗುಂಪು ಯಾವ ರೀತಿ ಕೆಲಸ ಮಾಡಿದೆ ಅಂತ ಎಲ್ಲವೂ ಗೊತ್ತಿದೆ. ಕಾಂಗ್ರೆಸ್ ಪಕ್ಷ ಸೋಲಲು ಜೊತೆಯಲ್ಲಿ ಇದ್ದುಕೊಂಡು ಏನೆಲ್ಲ ತಂತ್ರಗಾರಿಕೆ ನಡೆಸಿದ್ದಾರೆ ಎಂಬುದು ಗೊತ್ತಾಗಿದೆ ಮುಂದಿನ ದಿನಗಳಲ್ಲಿ ಉತ್ತರ ಸಿಗುತ್ತದೆ” ಎಂದರು.

“ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ ಸಿ ಅನಿಲ್ ಕುಮಾರ್, ಮತ್ತು ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಪಟ್ಟಣ ಪಂಚಾಯತಿಯಲ್ಲಿ ಯಾವ ರೀತಿ ಕೆಲಸ ಮಾಡಿದೆ ಅಂತ ಇಡಿ ಕ್ಷೇತ್ರಕ್ಕೆ ಗೊತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಬಹುಮತ ಸಿಗದಿದ್ದರು ಸಹ 2023 ರ ವಿಧಾನಸಭೆ, 2024 ರ ಲೋಕಸಭೆ, ಮತ್ತು ಇದೀಗ 2025 ರ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮತಗಳನ್ನು ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಸುಭದ್ರವಾಗಿದೆ. ಕಾಣದ ಕೈಗಳು ಕೆಲಸ ಮಾಡಿದ ಹಿನ್ನಲೆ ಈ ರೀತಿಯ ಸಮಸ್ಯೆ ಆಗಿದೆ ವಿನಃ ಬೇರೆ ಯಾವ ರೀತಿಯಲ್ಲಿಯೂ ಕಾಂಗ್ರೆಸ್ ಪಕ್ಷ ಹಿಂದೆ ಸರಿದಿಲ್ಲ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸೊಸೈಟಿ ಮಾಜಿ ಅಧ್ಯಕ್ಷ ಶೈಲಜಾ ಪಿ ವೆಂಕಟೇಶ್, ಕೌನ್ಸಿಲರ್ ಪುರಹಳ್ಳಿ ಗಂಗಪ್ಪ, ನಾಚಹಳ್ಳಿ‌ ದೇವರಾಜ್, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಬಸವಾದಿ ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಎಸ್. ವಿ. ಸಂಕನೂರು

"12ಣೆ ಶತಮಾನದಲ್ಲಿ ಶರಣೆಯರು ಮಹಿಳೆಯರಿಗೆ ಸ್ವತಂತ್ರವಾಗಿ ಬದುಕಬೇಕು ಎಂಬ ಆಶಯವನ್ನು ಹೊಂದಿದ್ದರು....

ಶ್ರೀರಂಗಪಟ್ಟಣ | ಪರಿಸರಸ್ನೇಹಿ ಗಣಪನ ಪ್ರತಿಷ್ಠಾಪನೆಗಾಗಿ ಜಾಗೃತಿ ಜಾಥಾ

ಗೌರಿ ಗಣೇಶನ ಹಬ್ಬದ ಪ್ರಯುಕ್ತ ರೋಟರಿ ಶ್ರೀರಂಗಪಟ್ಟಣ ಹಾಗೂ ಅಚೀವರ್ಸ್ ಅಕಾಡೆಮಿ...

ಬೆಂಗಳೂರು | ನವರಂಗ ಸರ್ಕಲ್‌ನಲ್ಲಿ ಸಂಚಾರ ದಟ್ಟಣೆ: ಹೈರಾಣಾದ ವಾಹನ ಸವಾರರು, ಪ್ರಯಾಣಿಕರು

ಬೆಂಗಳೂರು ನಗರದ ನವರಂಗ ಸರ್ಕಲ್‌ನಲ್ಲಿ ಬೆಳಿಗ್ಗೆ 11ರಿಂದಲೂ ವಾಹನ ಸಂಚಾರ ದಟ್ಟಣೆ...

ಡಿ ಕೆ ಶಿವಕುಮಾರ್ ಬಳಿಕ ಕಾಂಗ್ರೆಸ್ ಶಾಸಕ ರಂಗನಾಥ್‌ರಿಂದ ಆರ್‌ಎಸ್‌ಎಸ್ ಗೀತೆ ಗುಣಗಾನ!

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಳಿಕ ಇದೀಗ ಕಾಂಗ್ರೆಸ್ ಶಾಸಕ...

Download Eedina App Android / iOS

X