ಕರ್ನಾಟಕದ ಹುಟ್ಟು ಎಂದರೆ ಕನ್ನಡದ ಹುಟ್ಟು. ನುಡಿಯಿಂದ ನಾಡು, ನಾಡಿಂದ ನಡೆಗೆ ಜಾಡು. ನಿರ್ದಿಷ್ಟ ಭೌಗೋಳಿಕ ಎಲ್ಲೆಗಳನ್ನು ಗುರುತಿಸಿಕೊಂಡ ನಾಡೊಂದು ರಾಜಕೀಯ ಆಡಳಿತ ಸ್ವರೂಪ ಪಡೆದ ಕೂಡಲೇ ಅದು ರಾಜ್ಯ, ಸಾಮ್ರಾಜ್ಯ, ದೇಶ. ಇಂದಿನ ನಮ್ಮ ಕರ್ನಾಟಕ ಕೂಡ ಬೆಳೆದು ಬಂದಿರುವುದು ಹಾಗೆಯೇ. ಇದುವರೆವಿಗಿನ ಇತಿಹಾಸದಲ್ಲಿ ಇದರ ಹೆಜ್ಜೆ ಗುರುತುಗಳನ್ನು ಕಾಣುವುದು ಕ್ರಿ.ಶ. ನಾಲ್ಕನೇ ಶತಮಾನದ ಆದಿಯಿಂದ. ಗಂಡುಮೆಟ್ಟಿನ ನಾಡು ಎಂದು ಹೆಸರಾಗಿರುವ ಇಂದಿನ ಚಿತ್ರದುರ್ಗದ ಚಂದ್ರವಳ್ಳಿ ತಟಾಕ ಪ್ರದೇಶದಲ್ಲಿ ಮಯೂರ ಶರ್ಮನೆಂಬ ಮಹತ್ವಾಕಾಂಕ್ಷಿ ಕಟ್ಟಿದ ಮೊದಲ…

ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ
ಚಿತ್ರದುರ್ಗ ಮೂಲದ ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪನವರು ವಿಶ್ರಾಂತ ಪ್ರಾಂಶುಪಾಲರು. ತುಮಕೂರು ವಿಜ್ಞಾನ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದರು. ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಂದರ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರು. ಆರ್ಥಿಕ ಮತ್ತು ಶೈಕ್ಷಣಿಕ ಚಿಂತಕರು. ಜಾಗತೀಕರಣ ಮತ್ತು ಭಾರತದ ಅಭಿವೃದ್ಧಿ ಕುರಿತ ‘ಬೋಧಿವೃಕ್ಷದ ಕೆಳಗೆ’, ‘ಬೆಳಗಿನಬೆರಗು’, ‘ಅಮೃತ ಭಾರತ’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.