ವಿಜಯಪುರ ಜಿಲ್ಲೆಯ ಕೊರವಾರ ಗ್ರಾಮದಲ್ಲಿ ಫಸಲ್ ಭೀಮಾ ಯೋಜನೆಯಲ್ಲಿ ಮಧ್ಯವರ್ತಿಗಳಿಂದ ರೈತರಿಗೆ ಆಗಿರುವ ಅನ್ಯಾಯ ಹಾಗೂ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣುರಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, “ಕಳೆದ ವರ್ಷ ದೇವರ ಹಿಪ್ಪರಗಿ ತಾಲೂಕಿನ ಕೊರವಾರ ಗ್ರಾಮದಲ್ಲಿ ರೈತರಿಗೆ ಗೊತ್ತಾಗದಂತೆ, ಫಸಲ್ ಭೀಮಾ ಯೋಜನೆಯಲ್ಲಿ ಅಧಿಕಾರಿಗಳು ಶ್ಯಾಮಿಲಾಗಿ 25 ಲಕ್ಷಕ್ಕೂ ಅಧಿಕ ಹಣವನ್ನು ಮಧ್ಯವರ್ತಿ ಶಿವರಾಜ ಅಗರಖೇಡ ಎಂಬ ವ್ಯಕ್ತಿಯಿಂದ ರೈತರಿಗೆ ಅನ್ಯಾಯವಾಗಿದೆ. ಈ ಅನ್ಯಾಯವನ್ನು ತಡೆದು ಅದರಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಿ, ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ಹೋರಾಟ ಮಾಡಿದರೂ ಕೂಡ ಪ್ರಯೋಜನವಾಗಿಲ್ಲ. ಕೂಡಲೇ ಈ ಕುರಿತು ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.
“ಫಸಲ್ ಭೀಮಾ ಯೋಜನೆ ರೈತರ ಅನುಕೂಲಕ್ಕಾಗಿ, ರೈತರ ಅತ್ಯುತ್ತಮ ತಡೆಯುವುದಕ್ಕಾಗಿ ಕೇಂದ್ರ ಸರ್ಕಾರ ಮಾಡಿರುವ ಅತ್ಯುತ್ತಮ ಯೋಜನೆಯಾಗಿದೆ. ಈ ರೀತಿ ಮೋಸವಾದರೆ ಮುಂದೆ ರೈತರು ಸರ್ಕಾರದ ಮೇಲೆ ಸಂಪೂರ್ಣ ನಂಬಿಕೆ ಕಳೆದುಕೊಳ್ಳುತ್ತಾರೆ. ಕೂಡಲೇ ಕಾರವಾರದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಾಧ್ಯಕ್ಷ ಪ್ರಕಾಶ್ ತೇಲಿ ಮಾತನಾಡಿ, “ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಐದು ಕೋಟಿ ಕಡಲೆ ಸಂಬಂಧಿಸಿದಂತೆ 60.40 ಅನುಪಾತದಲ್ಲಿ ರೈತರಿಗೆ ಹಾಕಿಸುವುದಾಗಿ ಹೇಳಿ, ಜಿಲ್ಲೆಯ ಬೇರಡೆಗೆ ಬರದ ಪರಿಹಾರ ಅಲ್ಲಿಗೆ ಹೇಗೆ ವಿಶೇಷವಾಗಿ ಬಂದಿದೆ ಎಂಬುದು ಅನೇಕ ರೈತರಿಗೆ ಸಂಶಯವಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ನಮ್ಮ ದೇಶದ ಭವಿಷ್ಯ ಅಕ್ಕ ತಂಗಿಯರ ಕೈಯಲ್ಲಿದೆ: ಸಚಿವ ಡಾ. ಎಚ್. ಕೆ. ಪಾಟೀಲ
“ಗೋಲಗೇರಿ ವ್ಯಾಪ್ತಿಯ ಕ್ಷೇತ್ರದಲ್ಲಿ ಒಟ್ಟು ಕಳಲೆ ಬಿತ್ತನೆ ಎಷ್ಟು? ಜಿಪಿಎಸ್ ಮಾಡಿರುವವರ ಮಾಹಿತಿ, ಜಿಪಿಎಸ್ ಫೋಟೊ, ತೂಕದ ವಿಡಿಯೊ ಒದಗಿಸಬೇಕು ಹಾಗೂ ಇಲ್ಲಿ ಯಾವುದೇ ರೈತರಿಗೆ ಅನ್ಯಾಯವಾಗಬಾರದು. ಮಧ್ಯವರ್ತಿಗಳಿಗೆ ದುಡ್ಡು ಮಾಡುವ ವ್ಯಾಪಾರ ಇದಾಗಬಾರದು. ಇದರಿಂದ ರೈತರಿಗೆ ಅನ್ಯಾಯವಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ತಾಲೂಕು ಅಧ್ಯಕ್ಷ ಹನುಮೇಶ ಜಮಖಂಡಿ, ಉಪಾಧ್ಯಕ್ಷ ಬಸವಣ್ಣಪ್ಪ ತೇಲಿ, ರಾಮ ಸಿಂಗ ರಜಪತ, ಸಂಗಪ್ಪ ಟಕ್ಕೆ, ನಾಜೀರ್ ನಂದರಗಿ, ಖಾದರ್ ವಾಲಿಕಾರ, ಬಸವರಾಜ ಮಸೂತಿ ಇದ್ದರು.
https://shorturl.fm/Yjy5g