ವಿಜಯಪುರ ಜಿಲ್ಲೆ ಇಂಡಿ ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತ ಮತ್ತು ಬಸ್ ನಿಲ್ದಾಣದಲ್ಲಿ ಬಿಜೆಪಿಯ ಮತಗಳ್ಳತನದ ವಿರುದ್ಧ ಅಭಿಯಾನ ಆರಂಭಿಸಲಾಗಿದೆ.
ಈ ವೇಳೆ ತಾಲೂಕು ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅವಿನಾಶ ಬಗಲಿ ಮಾತನಾಡಿ, “ಮತಗಳ್ಳತನ ಕರ್ನಾಟಕ ಜನರ ವಿರುದ್ಧ ನಡೆದ ಹೀನ ಅಪರಾಧ. ರಾಜ್ಯ ಸರ್ಕಾರ ಈ ಅಪರಾಧದ ಬಗ್ಗೆ ತನಿಖೆ ನಡೆಸಬೇಕು. ಜನರಿಗೆ ನ್ಯಾಯ ಕೊಡಿಸಬೇಕು. ದೇಶದ ಎಲ್ಲ ರಾಜಕೀಯ ಪಕ್ಷಗಳು ಪ್ರಶ್ನೆ ಮಾಡುತ್ತಿದ್ದು, ಈ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಬೇಕು. ಕರ್ನಾಟಕದಲ್ಲಿ ಸಿಕ್ಕ ಮಾಹಿತಿ, ಕುತಂತ್ರಕ್ಕೆ ಸಾಕ್ಷಿಯಾಗಿದೆ. ಚುನಾವಣಾ ಆಯೋಗ ಬಿಜೆಪಿಗೆ ಅಲ್ಲ. ಸಂವಿಧಾನಕ್ಕೆ ಕೆಲಸ ಮಾಡಬೇಕು” ಎಂದರು.
ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೇದ್ ಮೊಮಿನ್, ತಾಲೂಕು ಎಸ್ ಸಿ ಘಟಕದ ಅಧ್ಯಕ್ಷ ಬಾಬು ಗುಡಿಮಿ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಥೋಡ, ಭೀಮಾಶಂಕರ ಮೊರಮನ, ಪುರಸಭಾ ಸದಸ್ಯ ಆಯುಬ್ ಭಾಗವಾನ, ಸುಧೀರ್ ಕರಕಟ್ಟಿ, ಶಹೀನಶಹ ಜಾಗೀರದಾರ, ಸತೀಶ್ ಹತ್ತಿ, ಸುನಿಲ ಆತನೂರ, ಮೆಹಬೂಬ್ ಜಾಗಿರದಾರ, ರಯಿಸ ಅಷ್ಟೇಕರ, ಸುಭಾಷ್ ಬಾಬರ, ಸಂಜೀವ ರಾಥೋಡ, ಸಂತೋಷ ಪರಸೇನವರ, ಶಿವು ಬಡಿಗೇರ, ನಾಗೇಶ ತಳಕೇರಿ, ಇಮ್ರಾನ್ ಮುಜಾವರ, ಶಹಜಿ ಶಿಂದೆ, ಪೈಝಾನ್ ಹವಲ್ದಾರ ಹಾಗೂ ರಾಹುಲ್ ಮಡ್ಡಿಮನಿ ಇದ್ದರು.
ಇದನ್ನೂ ಓದಿ: ವಿಜಯಪುರ | ವಿವಿಧ ಬೇಡಿಕೆ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ