ಗದಗ | ನಮ್ಮ ದೇಶದ ಭವಿಷ್ಯ ಅಕ್ಕ ತಂಗಿಯರ ಕೈಯಲ್ಲಿದೆ: ಸಚಿವ ಡಾ. ಎಚ್. ಕೆ. ಪಾಟೀಲ

Date:

Advertisements

“ನಮ್ಮ ದೇಶದ ಭವಿಷ್ಯ ಅಕ್ಕ ತಂಗಿಯರ ಕೈಯಲ್ಲಿದೆ ಎಂಬ ಮಾತು ಹೇಳಲು ಅತಿಶಯೋಕ್ತಿ ಅಂದರು ಪರವಾಗಿಲ್ಲ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಕೆ. ಪಾಟೀಲ್ ಹೇಳಿದರು.

ಗದಗ ಪಟ್ಟಣದ ತೊಂಟದ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪದ ಶಿವಶರಣೆ ಮುಕ್ತಾಯಕ್ಕ ವೇದಿಕೆಯಲ್ಲಿ ಜಿಲ್ಲಾ ಕದಳಿ ಮಹಿಳಾ ಸಮ್ಮೇಳನದ ಉದ್ಘಾಟಿಸಿ ಅವರು ಮಾತನಾಡಿದರು.

“ಇತಿಹಾಸದ ಮನುಕುಲದಲ್ಲಿ ಮಹಿಳೆಗೆ ಸ್ವತಂತ್ರ ಆಗಬೇಕು, ಸಮಾನತೆ ಆಗಬೇಕು ಎಂದು ಹೇಳುತ್ತಲೇ ಬಂದಿದ್ದಾರೆ. 12ನೇ ಶತಮಾನದ ಅನುಭವ ಮಂಟಪದಲ್ಲಿ ಮಾತ್ರ ಮಹಿಳೆಗೆ ಸಮಾನತೆ ಸಾಧ್ಯವಾಗಿದೆ. ನಂತರದಲ್ಲಿ ಸಮಾಜದಲ್ಲಿ ಸಮಾನತೆ ಇತ್ತೀಚೆಗೆ ಬರುತ್ತಿತೆ. ಇಸ್ಲಾಂ ಧರ್ಮದಲ್ಲಿ ಸ್ವಾತಂತ್ರದ ಕೂಗನ್ನು ಮಹಿಳೆಯರು ಜೋರು ಮಾಡುತ್ತಿದ್ದಾರೆ” ಎಂದರು.

Advertisements

“ಭಾರತೀಯ ಪರಂಪರೆಯಲ್ಲಿ 12ನೇ ಶತಮಾನದಲ್ಲಿಯೇ ಮಹಿಳೆಯರು ಸ್ವವಲಂಬಿಯಾಗಬೇಕು ಎಂಬ ಮಾತುಗಳು ಕೇಳಿ ಬರುತ್ತವೆ. ಬಸಣ್ಣನಿಂದ ಇಲ್ಲಿಯವರೆಗೂ ಎಂಟು ನೂರು ವರ್ಷಗಳು ಕಳೆದರೂ ಮಹಿಳೆಗೆ ಸ್ವತಂತ್ರ ಕೊಟ್ಟಿಲ್ಲ. ದೊಡ್ಡ ದೊಡ್ಡ ಭಾಷಣಗಲ್ಲಿ ಮಹಿಳೆಯರಿಗೆ ಸ್ವತಂತ್ರ ಅಷ್ಟೇ ಇದೆ. ನಿಜವಾಗಿಯೂ ಮಹಿಳೆಗೆ ಸ್ವತಂತ್ರ ಸಿಕ್ಕಿಲ್ಲ” ಎಂದರು.

“ಇವತ್ತಿಗೂ ಶ್ರೇಣಿಕೃತ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಸಮಾನತೆಯಿಲ್ಲ. ಮೂವತ್ತು ನಲವತ್ತೂ ವರ್ಷದ ಹಿಂದೆ ರಾಜಕೀಯ ಪ್ರವೇಶ ಮಾಡುವುದಕ್ಕೆ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಗೆ ಅವಕಾಶವಿರಲಿಲ್ಲ. ರಾಜೀವ್ ಗಾಂಧಿ ನಂತರದಲ್ಲಿ ಮಹಿಳೆಯರಿಗೆ ರಾಜಕೀಯದಲ್ಲಿ ಅವಕಾಶ ಸಿಕ್ಕಿತು” ಎಂದು ಹೇಳಿದರು.

“ಬಡತನದ ಅಡಚಣೆಯನ್ನು ಮೊದಲು ಮನೆಯ ಮಹಿಳೆ ಮೇಲೆ ಪರಿಣಾಮ ಬಿರುತ್ತದೆ. ಮಹಿಳೆಯನ್ನು ಸ್ವವಲಂಬಿಯಾಗಿ ಬದುಕಲು ನಮ್ಮ ಗೃಹಲಕ್ಷ್ಮೀ ಯೋಜನೆಯ ಎರಡು ಸಾವಿರ ರೂ ಸಹಾಯವಾಗಿದೆ” ಎಂದರು.

“ನಮ್ಮ ಸಮಾಜದಲ್ಲಿ ಶಾಂತಿಯನ್ನು ಕಳೆದುಕೊಂಡಿದ್ದೇವೆ. ಹಿಂದೆ ಬಡತನ ಜೊತೆಗೆ ಎಲ್ಲವು ಕೊರತೆ ಇತ್ತು. ಆದರೆ ಶಾಂತಿ ನೆಲೆಸಿತ್ತು. ಇದಕ್ಕೆ ಪರಿಹಾರವಾಗಿ ಮಹಿಳೆಯರು ಆಧ್ಯಾತ್ಮಿಕ ಕಡೆಗೆ ಸಾಗಬೇಕು. ಆಧ್ಯಾತ್ಮಿಕತೆ ಪುರುಷರಲ್ಲಿ ಇಲ್ಲ, ಮಹಿಳೆಯರಲ್ಲಿ ಆದ್ಯಾತ್ಮಿಕತೆ ಇದೆ. ಇದು ಪುರುಷರ ಮೇಲೆ ಪ್ರಭಾವಿಸಬೇಕು” ಎಂದರು.

“ಬಸವಣ್ಣವರ ವಚನಗಳನ್ನು ಭಾಷಣಕ್ಕೆ ಮಾತ್ರ ಬಳಸಿಕೊಂಡಿದ್ದೇವೆ. ಆತ್ಮವಲೋಕನ ಮಾಡಿಕೊಳ್ಳಬೇಕು. ಇವ ನಮ್ಮ, ಇವ ನಮ್ಮ” ಎನ್ನುವ ಮಾತು ನಮ್ಮ ನಮ್ಮವರನ್ನೇ ಎನ್ನುವದಿಲ್ಲ. ಹಾಗಾಗಿ ಸಮಾಜದಲ್ಲಿ ಕ್ರಾಂತಿಕಾರಿಕ ಬದಲಾವಣೆ ಅವಶ್ಯಕತೆ ಇದೆ” ಎಂದರು.

ಈ ಸುದ್ದಿ ಓದಿದ್ದೀರಾ? ಹಾವೇರಿ | ನಿರಂತರ ಮಳೆಯಿಂದ ಬೆಳ್ಳುಳ್ಳಿ ಬೆಳೆ ಹಾನಿ: ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ‌ ಸಂತ್ರಸ್ತ ರೈತರು

ಈ ಸಮ್ಮೇಳನದಲ್ಲಿ ದಿವ್ಯ ಸಾನಿಧ್ಯ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು ಡಾ. ಸಿ. ಸೋಮಶೇಖರ, ಸಮ್ಮೇಳನದ ಸರ್ವಾಧ್ಯಕ್ಷರು ಶರಣೆ ಗಿರಿಜಕ್ಕ ಧರ್ಮರೆಡ್ಡಿ, ನಿಕಟಪೂರ್ವ ಸಮ್ಮೇಳನದ ಸರ್ವಾಧ್ಯಕ್ಷರು ಶಿವಶರಣೆ ಡಾ. ನಿಲ್ಲಮ್ಮತಾಯಿ ಅಸುಂಡಿ, ಕೆ. ಎ. ಬಳಿಗಾರ, ಸುಧಾ ಎಸ್. ಹುಚ್ಚಣ್ಣವರ, ಸುಶೀಲಾ ಸೋಮಶೇಖರನ್ನೂ ಅನೇಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

ತುಮಕೂರು | ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ : ಡಿಕೆಶಿ ವಿರುದ್ಧ ಕೆ. ಎನ್ ರಾಜಣ್ಣ ವಾಗ್ದಾಳಿ

ಡಿ.ಕೆ.ಶಿವಕುಮಾ‌ರ್ ಅಧಿವೇಶನದಲ್ಲಿ ಆರ್‌ಎಸ್ಎಸ್ ಗೀತೆ ಹಾಡಿದ ಬಗ್ಗೆ  ಮಾಜಿ ಸಚಿವ ಕೆ...

Download Eedina App Android / iOS

X