ಬೆಂಗಳೂರು ಸಂಚಾರ ಪೊಲೀಸ್ ವಿಭಾಗದಿಂದ ವಿಶೇಷ ಕಾರ್ಯಾಚರಣೆ: ₹90,000 ದಂಡದ ಮೊತ್ತ ಸಂಗ್ರಹ

Date:

Advertisements

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸ್ ವಿಭಾಗದಿಂದ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಆಗಸ್ಟ್‌ 18ರಿಂದ 24ರವರೆಗೆ ₹90,000 ದಂಡದ ಮೊತ್ತವನ್ನು ಸಂಗ್ರಹಿಸಲಾಗಿದೆ.

ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ವಾಹನ ಚಾಲಕರು ಮತ್ತು ಸವಾರರ ವಿರುದ್ದ, ಅತಿವೇಗ ವಾಹನ ಚಲಾಯಿಸುವವರ ವಿರುದ್ಧ ನಗರದ 53 ಸಂಚಾರ ಪೊಲೀಸ್ ಠಾಣೆಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ವಿಶೇಷ ಕಾರ್ಯಾಚರಣೆಯಲ್ಲಿ ಹಲವು ಪ್ರಕರಣಗಳನ್ನು ದಾಖಲು ಮಾಡಲಾಗಿದೆ.

47,749 ವಾಹನಗಳನ್ನು ವಿವಿಧ ಮಾದರಿಯಲ್ಲಿ ಪರಿಶೀಲಿಸಲಾಗಿದೆ. ಈ ಪೈಕಿ 667 ವಾಹನಗಳನ್ನು ಮದ್ಯಪಾನ ಮಾಡಿ ಚಾಲನೆ ಮಾಡುತ್ತಿರುವುದು ಕಂಡುಬಂದಿದ್ದು, ಬೆಂಗಳೂರು ಸಂಚಾರ ಪೊಲೀಸರಿಂದ ಪ್ರಕರಣ ದಾಖಲಿಸಲಾಗಿದೆ.

Advertisements

ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಜಮೀನನಲ್ಲಿ ಕಟ್ಟಿದ್ದ ಜಾನುವಾರುಗಳ ಕಳ್ಳತನ: ಕಂಗಾಲಾದ ರೈತ

ಅತಿವೇಗದಿಂದ ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಕಾರ್ಯಚರಣೆಯಲ್ಲಿ 90 ಪ್ರಕರಣಗಳನ್ನು ದಾಖಲು ಮಾಡಿದ್ದು, ಒಟ್ಟಾರೆಯಾಗಿ 90000 ರೂಪಾಯಿ ದಂಡ ಸಂಗ್ರಹವಾಗಿದೆ.

ಬೆಂಗಳೂರು ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವ ಮತ್ತು ಅತಿವೇಗ ವಾಹನ ಚಲಾಯಿಸುವವರ ಹಾವಳಿಯನ್ನು ತಡೆಗಟ್ಟಲು ಹಾಗೂ ರಸ್ತೆ ಸುರಕ್ಷತೆಗಾಗಿ ಮುಂದಿನ ದಿನಗಳಲ್ಲಿಯೂ ಕೂಡ ಇಂತಹ ಕಾರ್ಯಾಚರಣೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ʼದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದು ನನಗೆ ಖುಷಿʼ ಎಂದ ಬಾನು ಮುಷ್ತಾಕ್

ದಸರಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿರುವುದು ಖಂಡಿತಾ ನನಗೆ ಖುಷಿಯ ವಿಚಾರ...

ಬೀದರ್‌ | ಕನ್ನಡ ಉಳಿಯಬೇಕಾದರೆ ಎಸ್‌ಇಪಿ ಜಾರಿಯಾಗಲಿ : ಪುರುಷೋತ್ತಮ ಬಿಳಿಮಲೆ

ʼಶಿಕ್ಷಣಕ್ಕೆ ಭದ್ರತೆ, ಜೀವನ, ಬದುಕು, ಅನ್ನ, ನೆಮ್ಮದಿ ಸೇರಿದಂತೆ ನಾನಾ ಅರ್ಥಗಳಿವೆ....

ರಾಯಚೂರು | ಬಾಣಂತಿ, ಮಗು ಸಾವು

ಹೆರಿಗೆಯ ವೇಳೆ ತೀವ್ರ ರಕ್ತಸ್ರಾವವಾಗಿ ತಾಯಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿದ...

ಉಡುಪಿ | ಶಾಸಕರಿಂದ ಸೌಹಾರ್ದತೆಗೆ ದಕ್ಕೆ ತರುವ ಹೇಳಿಕೆ, ಕಾನೂನು ಕ್ರಮ ಕೈಗೊಳ್ಳಿ – ಎಸ್ ಡಿ ಪಿ ಐ

ಮೈಸೂರು ಸಂಸ್ಥಾನದ ಇತಿಹಾಸದ ಗಂಧಗಾಳಿ ತಿಳಿಯದ ಮತ್ತು ಸದಾ ಹಿಂದುತ್ವದ ಅಮಲಿನಲ್ಲಿರುವ...

Download Eedina App Android / iOS

X