ಲಿಂಗ ತಾರತಮ್ಯ | ಮಹಿಳೆಯರಿಗಿಂತ ಅಧಿಕ ವೇತನ ಪಡೆಯುತ್ತಾರೆ ಪುರುಷ ನರ್ಸ್‌ಗಳು: ಅಧ್ಯಯನ ವರದಿ

Date:

Advertisements

ನರ್ಸಿಂಗ್ ಅನ್ನು ಹೆಚ್ಚಾಗಿ ಮಹಿಳೆಯರ ವೃತ್ತಿ ಎಂಬಂತೆ ನೋಡಲಾಗುತ್ತದೆ. ಆದ್ದರಿಂದಾಗಿ ಪುರುಷರು ನರ್ಸ್‌ಗಳಾಗಿ ಕೆಲಸ ಮಾಡಿದರೆ ಅವರನ್ನು ನೋಡುವ ದೃಷ್ಟಿಕೋನವೇ ಬೇರೆಯದ್ದಾಗಿದೆ. ಆದರೆ ಇವೆಲ್ಲವುದರ ಹೊರತಾಗಿಯೂ ಪುರುಷ ನರ್ಸ್‌ಗಳಿಗೆ ಮಹಿಳೆಯರಿಗಿಂತ ಅಧಿಕ ವೇತನವನ್ನು ನೀಡಲಾಗುತ್ತಿದೆ. ಮಹಿಳೆಯರೇ ಅಧಿಕವಾಗಿರುವ ನರ್ಸಿಂಗ್ ಕ್ಷೇತ್ರದಲ್ಲಿಯೂ ಲಿಂಗ ತಾರತಮ್ಯ ಕಂಡುಬಂದಿದೆ.

BMJ ಮಾಧ್ಯಮದಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, “ಜಾಗತಿಕ ನರ್ಸಿಂಗ್ ಕಾರ್ಯಪಡೆಯಲ್ಲಿ ಮಹಿಳೆಯರು ಹೆಚ್ಚಿನ ಪಾಲನ್ನು ಹೊಂದಿದ್ದಾರೆ. ಆದರೂ ಸರಾಸರಿ, ಪುರುಷರು ಮಹಿಳೆಯರಿಗಿಂತ ಹೆಚ್ಚು ಗಳಿಸುತ್ತಿದ್ದಾರೆ. ನರ್ಸಿಂಗ್ ಕ್ಷೇತ್ರದಲ್ಲಿ ಮಹಿಳೆಯರು ಮತ್ತು ಪುರುಷರ ವೇತನದ ನಡುವೆ ಶೇಕಡ 24ರಷ್ಟು ಅಂತರವಿದೆ” ಎಂದು ಹೇಳಿದೆ.

ಇದನ್ನು ಓದಿದ್ದೀರಾ? ಬಿಎಸ್ಸಿ ನರ್ಸಿಂಗ್ ಶಿಕ್ಷಣಕ್ಕೆ ಸಿಇಟಿ ಕಡ್ಡಾಯ

Advertisements

ನರ್ಸಿಂಗ್ ಕಾರ್ಯಪಡೆಯನ್ನು ಹೆಚ್ಚಿಸುವ ಅಗತ್ಯತೆ ಬಗ್ಗೆ ಕೇಂದ್ರಿಕರಿಸಿ ಅಧ್ಯಯನ ಮಾಡಲಾಗಿದೆ. ಸದ್ಯ ಇರುವ ನರ್ಸ್‌ಗಳಲ್ಲಿ ವಯಸ್ಸಾಗಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ದೀರ್ಘಕಾಲದ ಕಾಯಿಲೆಗಳ ಪ್ರಮಾಣ ಹೆಚ್ಚಾಗುತ್ತಿರುವ ನಡುವೆ ನರ್ಸ್‌ಗಳ ಬೇಡಿಕೆಯೂ ಹೆಚ್ಚಾಗುತ್ತಿದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.

ಈ ಅಧ್ಯಯನದ ಪ್ರಮುಖ ಲೇಖಕಿ ಮತ್ತು ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ (PHFI) ಆರೋಗ್ಯ ವ್ಯವಸ್ಥೆಗಳ ಉಪಾಧ್ಯಕ್ಷೆ ಡಾ. ಪ್ರೀತಿ ಕುಮಾರ್ ಹೇಳುವಂತೆ, “ಆಧುನಿಕ ನರ್ಸಿಂಗ್ ಸಂಸ್ಥಾಪಕಿ ಫ್ಲಾರೆನ್ಸ್ ನೈಟಿಂಗೇಲ್ ಕಾಲದಿಂದಲೂ ನರ್ಸಿಂಗ್ ಸಾಂಪ್ರದಾಯಿಕವಾಗಿ ಮಹಿಳೆಯರೊಂದಿಗೆ ಹೆಚ್ಚಿನ ಸಂಬಂಧವನ್ನು ಹೊಂದಿರುವ ಕ್ಷೇತ್ರ. ದೇಶದಲ್ಲಿ ಪುರುಷ ನರ್ಸ್‌ಗಳು ತುರ್ತು ವಿಭಾಗಗಳು ಮತ್ತು ಐಸಿಯುಗಳಂತಹ ಕೆಲವು ವಿಶೇಷತೆ ಸ್ಥಳಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಪ್ರಸೂತಿ ಮತ್ತು ಮಕ್ಕಳ ಚಿಕಿತ್ಸಾಲಯ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ರೋಗಿಗಳ ಸೌಕರ್ಯ ಮತ್ತು ಲಿಂಗ ಸೂಕ್ತತೆಯಿಂದಾಗಿ ಪುರುಷ ನರ್ಸ್‌ಗಳ ಪ್ರವೇಶ ಸೀಮಿತವಾಗಿದೆ ಮತ್ತು ಈ ಬಗ್ಗೆ ಹೆಚ್ಚಿನ ಉತ್ಸಾಹವಿಲ್ಲ”

“ನರ್ಸಿಂಗ್ ಕ್ಷೇತ್ರದಲ್ಲಿ ಪುರುಷರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಜಾಗೃತಿ ಅಭಿಯಾನಗಳು, ಸಮತೋಲಿತ ನೇಮಕಾತಿ ತಂತ್ರಗಳು, ನರ್ಸಿಂಗ್ ಶಿಕ್ಷಣದಲ್ಲಿ ಪುರುಷರಿಗೆ ಕೋಟಾಗಳು ಮತ್ತು ಆರ್ಥಿಕ ನೆರವು ನೀಡುವುದು ಮೊದಲಾದವುಗಳನ್ನು ಕಾರ್ಯಗತಗೊಳಿಸಬೇಕು” ಎಂದೂ ಅಧ್ಯಯನ ವರದಿ ಅಭಿಪ್ರಾಯಿಸಿದೆ.

ಇನ್ನು ನರ್ಸಿಂಗ್ ವೃತ್ತಿಪರರು ಹೆಚ್ಚಿನ ಆದಾಯದ ದೇಶಗಳಿಗೆ ವಲಸೆ ಹೋಗುವುದು ಜಾಗತಿಕ ಸವಾಲಾಗಿದೆ. ಸುಮಾರು ಶೇಕಡ 13ರಷ್ಟು ನರ್ಸ್‌ಗಳು ತಾವು ಹುಟ್ಟಿದ ಅಥವಾ ತರಬೇತಿ ಪಡೆದ ದೇಶದ ಬದಲಾಗಿ ಬೇರೆ ದೇಶದಲ್ಲಿ ಕೆಲಸ ಮಾಡುತ್ತಾರೆ ಎಂದು ಅಧ್ಯಯನ ವರದಿ ಹೇಳಿದೆ.

ಭಾರತವು 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಅನುಮೋದಿಸಿದೆ. ಪ್ರತಿ ವರ್ಷ ಸುಮಾರು 15,700 ನರ್ಸ್‌ಗಳು ಪದವಿ ಪಡೆಯುತ್ತಿದ್ದಾರೆ.

ದೇಶದಲ್ಲಿ ಕೂಲಿ ಕೆಲಸದಿಂದ ಹಿಡಿದು ವಿವಿಧ ಕ್ಷೇತ್ರಗಳಲ್ಲಿ ವೇತನದ ವಿಚಾರಕ್ಕೆ ಬಂದಾಗ ಲಿಂಗ ತಾರತಮ್ಯ ಇಂದಿಗೂ ಜೀವಂತವಾಗಿಯೇ ಉಳಿದಿದೆ. 2022ರ ವರದಿ ಪ್ರಕಾರ ಭಾರತದಲ್ಲಿ ಒಟ್ಟು ಕಾರ್ಮಿಕ ಆದಾಯದಲ್ಲಿ ಶೇಕಡ 82ರಷ್ಟು ಪುರುಷರು ಪಡೆದರೆ, ಮಹಿಳೆಯರು ಕೇವಲ ಶೇಕಡ 18ರಷ್ಟು ವೇತನವನ್ನು ಪಡೆಯುತ್ತಾರೆ. ಸಮಾನ ವೇತನ ಕಾನೂನು ಇದ್ದರೂ ದೇಶದಲ್ಲಿ ಲಿಂಗದ ಆಧಾರದಲ್ಲಿ ವೇತನ ತಾರತಮ್ಯ ಮುಂದುವರೆದಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಗವಿಕಲರ ಕುರಿತು ಹಾಸ್ಯ: ಕ್ಷಮೆಯಾಚಿಸಲು ಕಾಮಿಡಿಯನ್‌ಗಳಿಗೆ ಸುಪ್ರೀಂ ಸೂಚನೆ

ನೀವು ಮಾತುಗಳನ್ನು ವಾಣಿಜ್ಯೀಕರಣಗೊಳಿಸುವಾಗ ಯಾವುದೇ ಒಂದು ಸಮುದಾಯದ ಭಾವನೆಗಳನ್ನು ನೋಯಿಸಲು ಸಾಧ್ಯವಿಲ್ಲ...

ಲೈಂಗಿಕ ಕಿರುಕುಳ ಆರೋಪ; ಕೇರಳದ ಕಾಂಗ್ರೆಸ್‌ ಶಾಸಕ ಪಕ್ಷದಿಂದ ಅಮಾನತು

ಲೈಂಗಿಕ ಕಿರುಕುಳದ ಆರೋಪಗಳ ತೀವ್ರ ಚರ್ಚೆಯ ನಡುವೆ ಕಾಂಗ್ರೆಸ್ ಶಾಸಕ ರಾಹುಲ್...

ಸಮರ್ಪಕ ಮಾಹಿತಿ ನೀಡದೆಯೇ ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಮಾರಾಟ: ಗ್ರಾಹಕ ಹಕ್ಕು ಉಲ್ಲಂಘನೆ

ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್ ಬೆರೆಸಿ ಮಾರಾಟ ಮಾಡಬೇಕೆಂಬ ಕೇಂದ್ರ ಸರ್ಕಾರದ ಎಥೆನಾಲ್‌...

ಆಧಾರ್ ಕಾರ್ಡ್‌ ಪೌರತ್ವದ ಪುರಾವೆಯಲ್ಲ: ಬಿಜೆಪಿಯ ಅಮಿತ್ ಮಾಳವೀಯ

ಆಧಾರ್ ಕಾರ್ಡ್‌ ಪೌರತ್ವದ ಪುರಾವೆಯಲ್ಲ. ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ...

Download Eedina App Android / iOS

X