ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಆರೋಪದಡಿ ನಾಲ್ಕು ಲಾರಿಗಳನ್ನು ಸುಳ್ಯ ಪೊಲೀಸರು ವಶ ಪಡಿಸಿಕೊಂಡ ಘಟನೆ ಜಾಲ್ಕೂರು ಗ್ರಾಮದ ಅಡ್ಕಾರಿನಲ್ಲಿ ನಡೆದಿದೆ.
ಮುರೂರು ಕಡೆಯಿಂದ ಸುಳ್ಯ ಮಾರ್ಗವಾಗಿ ಮಡಿಕೇರಿ ಕಡೆಗೆ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ
ಈ ಬಗ್ಗೆ ಸುಳ್ಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ಲಾರಿಗಳನ್ನು ವಶಪಡಿಸಿದ್ದು, ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
