ಮಂತ್ರಾಲಯದ ಸದ್ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಪ್ರಪ್ರಥಮ ಅಂತಾರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಹಿರಿಯ ಸಾಹಿತ್ಯ ಸೇವಕ, ಸಂಶೋಧಕ, ಸಂಘಟಕ ಡಾ.ಕೈವಾರ ಶ್ರೀನಿವಾಸ್ ಅವರಿಗೆ ಪ್ರತಿಷ್ಠಿತ ʼಕನ್ನಡಸಿರಿ ಪ್ರಶಸ್ತಿʼ ಪ್ರದಾನ ಮಾಡಲಾಯಿತು.
ಸಮ್ಮೇಳನದ ಉದ್ಘಾಟನೆಯನ್ನು ಪೀಠಾಧಿಪತಿ ಸುಬುದೇಂದ್ರ ತೀರ್ಥ ಮಹಾಸ್ವಾಮಿಗಳು ನೆರವೇರಿಸಿದರು.
ಡಾ. ಕೈವಾರ ಶ್ರೀನಿವಾಸ್ ಅವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ʼಮನೆಯಂಗಳದಲ್ಲಿ ನುಡಿಸಿರಿ, ಶಾಲೆಯಂಗಳದಲ್ಲಿ ನುಡಿಸಿರಿ, ಕಸಾಪ ನಡಿಗೆ, ವನಸಿರಿ ನುಡಿಸಿರಿ, ತತ್ವಾಮೃತ ಉದ್ಯಾನವನದಲ್ಲಿ ಸಂಧ್ಯಾರಾಗ ಗಾನಸಿರಿʼ ಕಾರ್ಯಕ್ರಮಗಳ ಮೂಲಕ ಕನ್ನಡವನ್ನು ಜನಜೀವನದ ನಿತ್ಯೋತ್ಸವವಾಗಿ ಹರಡಿದ ಶ್ರಮಕ್ಕೆ ಈ ಗೌರವ ಸಂದಿದೆ. ಅವರು ಗುಡಿಬಂಡೆ ಸಿರಿ, ಚಿಕ್ಕಬಳ್ಳಾಪುರ ಸಿರಿ, ಕೈವಾರ ಸಿರಿ, ಚಿಕ್ಕಬಳ್ಳಾಪುರ ಜಿಲ್ಲಾ ಕಸಾಪ ಹೆಜ್ಜೆ ಗುರುತುಗಳು ಮುಂತಾದ ಅನೇಕ ಕೃತಿಗಳ ಕತೃ. ಜತೆಗೆ ಭೂತಾನ್ ದೇಶದ ಸಾಂಸ್ಕೃತಿಕ ಉತ್ಸವದಲ್ಲಿ ʼಮ್ಯಾನ್ ಆಫ್ ದಿ ಇಯರ್ʼ, ಚಾಮರಾಜನಗರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ʼಗಡಿಸೇನಾನಿʼ, ಗುರುಕುಲ ಪ್ರತಿಷ್ಠಾನದಿಂದ ʼಸಾಹಿತ್ಯ ರತ್ನʼ ಅಲ್ಲದೆ ಕನ್ನಡ ಸೇವಾಮಾಣಿಕ್ಯ, ಕನ್ನಡ ಪಯಸ್ವಿನಿ, ಕನ್ನಡ ಸೇವಾರತ್ನ, ಹೆಮ್ಮೆಯ ಕನ್ನಡಿಗ, ಕೃಷ್ಣದೇವರಾಯ ಪ್ರಶಸ್ತಿ, ಬಲಿಜ ತರಂಗಿಣಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಅನೇಕ ಸಂಘ-ಸಂಸ್ಥೆಗಳ ನೂರಾರು ಗೌರವ ಸನ್ಮಾನಗಳಿಗೂ ಕೂಡ ಭಾಜನರಾಗಿದ್ದಾರೆ.
ಸಮ್ಮೇಳನದಲ್ಲಿ ಮುಂದಿನ ಅಂತಾರಾಜ್ಯ ಸಮ್ಮೇಳನವನ್ನು ಗೋವಾ ಸಮುದ್ರದ ನಡುವೆ ಹಡಗಿನಲ್ಲಿ ಆಯೋಜಿಸಲಾಗುವುದೆಂದು ಚಿಕ್ಕಮಗಳೂರು ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಘೋಷಣೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಬಿಜೆಪಿ ಮುಖಂಡ ರವೀಂದ್ರ ಲೋಣಿ ಮಾತಿಗೆ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತಿರುಗೇಟು
ವಿಶೇಷ ಅತಿಥಿಗಳಾಗಿ ಅಯೋಧ್ಯ ರಾಮಲಲ್ಲಾ ಶಿಲ್ಪಿ ಡಾ.ಅರುಣ್ ಯೋಗಿರಾಜ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ, ಗೌರವ ಕಾರ್ಯದರ್ಶಿ ಮದನಗೌಡ, ಸಮ್ಮೇಳನಾಧ್ಯಕ್ಷ ಡಾ.ಪ್ರದೀಪ್ ಕುಮಾರ್ ಹೆಬ್ರಿ, ಆಂಧ್ರ ಘಟಕದ ಅಧ್ಯಕ್ಷ ವಕೀಲ ಅಂಜನ್ ಕುಮಾರ್, ತೆಲಂಗಾಣ ಘಟಕದ ಅಧ್ಯಕ್ಷ ಡಾ.ಗುಡಗುಂಟಿ ವಿಠ್ಠಲ್ ಜೋಶಿ, ಚಿಕ್ಕಮಗಳೂರು ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್, ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ, ಗೋವಾ ಘಟಕದ ಅಧ್ಯಕ್ಷ ಡಾ.ಸಿದ್ದಣ್ಣ ಸಂಗಪ್ಪ ಮೇಟಿ ಮುಂತಾದ ಗಣ್ಯರು ಇದ್ದರು.