ಸಾಲ್ವಾ ಜುಡುಮ್ ತೀರ್ಪಿನ ಕುರಿತು ವಿರೋಧ ಪಕ್ಷದ ಉಪರಾಷ್ಟ್ರಪತಿ ಅಭ್ಯರ್ಥಿ ಬಿ. ಸುದರ್ಶನ್ ರೆಡ್ಡಿ ಅವರ ಮೇಲೆ ಗೃಹ ಸಚಿವ ಅಮಿತ್ ಶಾ ಅವರ ದಾಳಿಯನ್ನು ದುರದೃಷ್ಟಕರ ಎಂದು ಹಲವು ನಿವೃತ್ತ ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಅಮಿತ್ ಶಾ ಅವರು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶ ಸುದರ್ಶನ್ ರೆಡ್ಡಿ ಅವರು ಮಾವೋವಾದವನ್ನು ‘ಬೆಂಬಲಿಸುತ್ತಾರೆ’ ಎಂದು ಆರೋಪಿಸಿದ್ದರು.
ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶರಾದ ಕುರಿಯನ್ ಜೋಸೆಫ್, ಮದನ್ ಬಿ. ಲೋಕೂರ್ ಮತ್ತು ಜೆ. ಚೆಲಮೇಶ್ವರ್ ಸೇರಿದಂತೆ 18 ನಿವೃತ್ತ ನ್ಯಾಯಾಧೀಶರ ತಂಡ ಸಚಿವರೊಬ್ಬರ ಸುಪ್ರೀಂ ಕೋರ್ಟ್ನ ತೀರ್ಪಿನ “ಪೂರ್ವಾಗ್ರಹ ಪೀಡಿತ ತಪ್ಪು ವ್ಯಾಖ್ಯಾನ”ವು ಅದರ ನ್ಯಾಯಾಧೀಶರ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಾಲ್ವಾ ಜುಡುಮ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ತೀರ್ಪನ್ನು ಸಾರ್ವಜನಿಕವಾಗಿ ತಪ್ಪಾಗಿ ಅರ್ಥೈಸಿಕೊಂಡಿರುವ ಹೇಳಿಕೆ ದುರದೃಷ್ಟಕರ. ತೀರ್ಪು ಎಲ್ಲಿಯೂ, ಸ್ಪಷ್ಟವಾಗಿ ಅಥವಾ ಅದರ ಪಠ್ಯದ ಪರಿಣಾಮಗಳ ಮೂಲಕ, ನಕ್ಸಲ್ವಾದ ಅಥವಾ ಅದರ ಸಿದ್ಧಾಂತವನ್ನು ಅನುಮೋದಿಸುವುದಿಲ್ಲ ಎಂದು 18 ಮಾಜಿ ನ್ಯಾಯಾಧೀಶರು ಸಹಿ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಹೇಳಿಕೆಗೆ ಸಹಿ ಹಾಕಿದ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಾಧೀಶರು ಎ ಕೆ ಪಟ್ನಾಯಕ್, ಅಭಯ್ ಓಕಾ, ಗೋಪಾಲ ಗೌಡ, ವಿಕ್ರಮ್ಜಿತ್ ಸೇನ್, ಕುರಿಯನ್ ಜೋಸೆಫ್, ಮದನ್ ಬಿ ಲೋಕೂರ್ ಮತ್ತು ಜೆ ಚೆಲಮೇಶ್ವರ್ ಅವರುಗಳು ಭಾರತದ ಉಪರಾಷ್ಟ್ರಪತಿ ಹುದ್ದೆಯ ಪ್ರಚಾರವು ಸೈದ್ಧಾಂತಿಕವಾಗಿರಬಹುದು, ಆದರೆ ಅದನ್ನು ನಾಗರಿಕವಾಗಿ ಮತ್ತು ಘನತೆಯಿಂದ ನಡೆಸಬಹುದು. ಯಾವುದೇ ಅಭ್ಯರ್ಥಿಯ ಸಿದ್ಧಾಂತ ಎಂದು ಕರೆಯಲ್ಪಡುವ ಟೀಕೆಯನ್ನು ತ್ಯಜಿಸಬೇಕು ಎಂದು ನಿವೃತ್ತ ನ್ಯಾಯಾಧೀಶರು ತಿಳಿಸಿದ್ದಾರೆ.
ಭಾರತದ ಉಪರಾಷ್ಟ್ರಪತಿ ಹುದ್ದೆಯ ಮೇಲಿನ ಗೌರವದಿಂದ, ಅವಮಾನ ಮಾಡುವುದನ್ನು ತಡೆಯುವುದು ಬುದ್ಧಿವಂತ ನಡೆ ಎಂದು ನಿವೃತ್ತ ನ್ಯಾಯಾಧೀಶರು ಹೇಳಿದ್ದಾರೆ. ಸುಪ್ರೀಂ ಕೋರ್ಟ್ನ ಏಳು ನಿವೃತ್ತ ನ್ಯಾಯಾಧೀಶರಲ್ಲದೆ, ಮೂವರು ಹೈಕೋರ್ಟ್ಗಳ ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಗೋವಿಂದ್ ಮಾಥುರ್, ಎಸ್. ಮುರಳೀಧರ್ ಮತ್ತು ಸಂಜಿಬ್ ಬ್ಯಾನರ್ಜಿ ಕೂಡ ಹೇಳಿಕೆಗೆ ಸಹಿ ಹಾಕಿದ್ದಾರೆ.