ದೆಹಲಿ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಆಸ್ಪತ್ರೆಗಳ ನಿರ್ಮಾಣದಲ್ಲಿ ಹಗರಣ ನಡೆದಿದೆ ಎಂಬ ಆರೋಪದ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿರುವ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸೌರಭ್ ಭಾರದ್ವಾಜ್ ಅವರ ನಿವಾಸದ ಮೇಲೆ ದಾಳಿ ನಡೆಸಿದೆ. ದೆಹಲಿಯಲ್ಲಿ ಕನಿಷ್ಠ 12 ಸ್ಥಳಗಳಲ್ಲಿ ತನಿಖಾ ಸಂಸ್ಥೆ ಶೋಧ ನಡೆಸುತ್ತಿದೆ.
ಆಸ್ಪತ್ರೆ ನಿರ್ಮಾಣ ಹಗರಣವು ಸುಮಾರು 5,590 ಕೋಟಿ ರೂ.ಗಳಷ್ಟಿದೆ ಎಂದು ಹೇಳಲಾಗಿದೆ. 2018-2019ರಲ್ಲಿ, ಎಎಪಿ ನೇತೃತ್ವದ ದೆಹಲಿ ಸರ್ಕಾರವು 24 ಆಸ್ಪತ್ರೆಗಳ ನಿರ್ಮಾಣಕ್ಕಾಗಿ 5,590 ಕೋಟಿ ರೂ.ಗಳ ಯೋಜನೆಗಳನ್ನು ಅನುಮೋದಿಸಿತ್ತು.
ಇದನ್ನು ಓದಿದ್ದೀರಾ? ಅಬಕಾರಿ ನೀತಿ ಹಗರಣ | ಬಿಆರ್‌ಎಸ್ ನಾಯಕಿ ಕವಿತಾಗೆ ಮಧ್ಯಂತರ ಜಾಮೀನು ನಿರಾಕರಣೆ
ಐಸಿಯು ಆಸ್ಪತ್ರೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕಾಗಿತ್ತು, ಆದರೆ ಮೂರು ವರ್ಷಗಳ ನಂತರವೂ ಕೆಲಸ ಅಪೂರ್ಣವಾಗಿಯೇ ಉಳಿದಿದೆ. 800 ಕೋಟಿ ರೂ. ಖರ್ಚು ಮಾಡಿದರೂ, ಕೇವಲ ಶೇಕಡ 50ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಆರೋಪಿಸಲಾಗಿದೆ.
ಎಲ್‌ಎನ್‌ಜೆಪಿ ಆಸ್ಪತ್ರೆಯ ವೆಚ್ಚವು 488 ಕೋಟಿ ರೂ.ಗಳಿಂದ 1,135 ಕೋಟಿ ರೂ.ಗಳಿಗೆ ಏರಿದೆ. ಹಲವಾರು ಸ್ಥಳಗಳಲ್ಲಿ ಅನುಮೋದನೆಯಿಲ್ಲದೆ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗಿದೆ.
ಆಸ್ಪತ್ರೆ ಮಾಹಿತಿ ನಿರ್ವಹಣಾ ವ್ಯವಸ್ಥೆ (ಎಚ್‌ಐಎಂಎಸ್) 2016ರಿಂದ ಬಾಕಿ ಉಳಿದಿದೆ, ಉದ್ದೇಶಪೂರ್ವಕ ವಿಳಂಬದ ಆರೋಪಗಳಿವೆ. ಈ ಪ್ರಕರಣದಲ್ಲಿ ಭಾರದ್ವಾಜ್ ಜೊತೆಗೆ ಎಎಪಿ ನಾಯಕ ಸತ್ಯೇಂದರ್ ಜೈನ್ ಕೂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.
