ವಿಜಯಪುರ |‌ ಕುರುಬರಿಗೆ ಎಸ್‌ಟಿ ಮೀಸಲಾತಿ ಕಲ್ಪಿಸುವಂತೆ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಆಗ್ರಹ

Date:

Advertisements

ಕುರುಬರಿಗೆ ಎಸ್‌ಟಿ(ಪರಿಶಿಷ್ಟ ಪಂಗಡ) ಮೀಸಲಾತಿಯನ್ನು ಕಲ್ಪಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ನಿಂತು ಎಸ್‌ಟಿ ಮೀಸಲಾತಿ ಕೇಳುವ ಗಟ್ಟಿ ಧ್ವನಿ, ಧೈರ್ಯ ಯಾರಲ್ಲೂ ಇಲ್ಲ. ಬರಿ ಜೈ ಎನ್ನುವುದು, ಶಾಲು, ಹಾರ ಹಾಕಿ ಸನ್ಮಾನಿಸುವುದರಿಂದ ಏನೂ ಪ್ರಯೋಜನವಾಗದು. ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡಿ ಎಂದು ಕೇಳುವ ಧೈರ್ಯ ಸಮಾಜದವರಲ್ಲಿ ಬರಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಮಾದರಿ ಕಲ್ಯಾಣ ಮಂಟಪದಲ್ಲಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲಾ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದರು.

“ನನಗೆ ಸಮಾಜದ ವಿಷಯ ಬಂದಾಗ ಯಾವ ಪಕ್ಷ, ಪಂಗಡ ಸಂಬಂಧವಿಲ್ಲ. ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ ಕುರುಬರಿಗೆ ಎಸ್‌ಟಿ ಮೀಸಲಾತಿ ನೀಡಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಆದರೆ, ಅದನ್ನು ವಾಪಸ್ ಕಳುಹಿಸಿದಾಗ ಮತ್ತೆ ಸಿದ್ದರಾಮಯ್ಯ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಪ್ರಧಾನಿ ಮೋದಿ ಬಳಿ ಕುರುಬರಿಗೆ ಎಸ್‌ಟಿ ಮೀಸಲಾತಿ ಏಕೆ ಆಗಲಿಲ್ಲವೆಂದು ಸಿದ್ದರಾಮಯ್ಯ ಕೇಳಬೇಕಾಗಿದೆ” ಎಂದು ಹೇಳಿದರು.

Advertisements

“ನಾವು ಕುರುಬರು, ನಮಗೆ ಯಾವುದೇ ಎಂಪಿ, ಎಂಎಲ್‌ಎ ಆಗುವುದು ಬೇಡ. ಮೊದಲು ಕುರುಬರು ಎಸ್‌ಟಿ ಮೀಸಲು ಅಡಿ ಸೇರ್ಪಡೆಯಾಗಬೇಕು” ಎಂದು ಕೆಪಿಎಸ್‌ಸಿ ಮಾಜಿ ಸದಸ್ಯರೊಬ್ಬರು ಹೇಳಿದರು.

ಮಾಜಿ ಸಂಸದ ಕೆ ವಿರುಪಾಕ್ಷಪ್ಪ ಮಾತನಾಡಿ, “ಕುರುಬರಿಗೆ ಎಸ್‌ಟಿ ಮೀಸಲಾತಿಗಾಗಿ ಜನಾಂದೋಲನ ಮಾಡುವ ಅಗತ್ಯವಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ದೇಶಕ್ಕೆ ಬರಹಗಾರರ ಕೊಡುಗೆ ಅನನ್ಯ

ಸಿದ್ದನ ಕೊಳ್ಳದ ಶಿವಕುಮಾರ ಸ್ವಾಮೀಜಿ, ಸರೂರ ಹಾಲುಮತ ಗುರುಪೀಠದ ಶಾಂತಮಯ ಶ್ರೀ ಸಂಗೊಳ್ಳಿ ರಾಯಣ್ಣ ವೇದಿಕೆ ಸಂಚಾಲಕ ಪರಮೇಶ ಮಾತಿನ್, ಮುಖಂಡ ಮಂಜುನಾಥ ಲಕ್ಕವಳ್ಳಿ, ವಕೀಲ ಎಚ್ ವೈ ಪಾಟೀಲ, ಶಿಲ್ಪ ಕುದರಗೊಂಡ ಮಾತನಾಡಿದರು.

ಮುಖಂಡರಾದ ಎಸ್ ಎಸ್ ಹುಲ್ಲೂರ, ಸಿದ್ದಣ್ಣ ಮೇಟಿ, ನೀಲಮ್ಮ ಮೇಟಿ, ವಕೀಲರಾದ ಪಿಬಿ ಗೌಡರ, ಬಿಜಿ ಜಗ್ಗಲ, ಬಿ ವೈ ಮೇಟಿ, ರೇವತಿ ಬೂದಿಹಾಳ, ಪಂಚಮಸಾಲಿ ಸಮಾಜದ ಕಾಶಿಬಾಯಿ ರಾಂಪುರ, ಜೆಡಿಎಸ್ ಮುಖಂಡ ಬಸನಗೌಡ ಪಾಟೀಲ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಗಣೇಶನ ವೇಷಧರಿಸಿ ರಕ್ತದಾನದ ಜಾಗೃತಿ

ಮೈಸೂರು ಜೀವಧಾರ ರಕ್ತ ನಿಧಿ ಕೇಂದ್ರದ ವತಿಯಿಂದ ರಾಮಸ್ವಾಮಿ ವೃತದಲ್ಲಿ ವಾಹನ...

ಸಾಕ್ಷಿ ದೂರುದಾರನಿಗೆ ಆಶ್ರಯ: ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಎಸ್‌ಐಟಿ ಶೋಧ

ಸಾಕ್ಷಿ ದೂರುದಾರ ತಾನು ಉಜಿರೆಯಲ್ಲಿರುವ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ...

ಉಡುಪಿ | ಕಾರ್ಕಳದಲ್ಲಿ ವ್ಯಕ್ತಿಯ ಕೊಲೆ, ಪೊಲೀಸರಿಂದ ‌ಪರಿಶೀಲನೆ

ಉಡುಪಿ ಜಿಲ್ಲೆಯ ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ರಸ್ತೆಯ ಪಕ್ಕದಲ್ಲಿ ಸೋಮವಾರ ತಡರಾತ್ರಿ...

ಶಿವಮೊಗ್ಗ | ಜಿಲ್ಲಾಧಿಕಾರಿಗಳಿಂದ, ಸೋಲಿಡಾರಿಟಿ ಯೂತ್ ಮೂಮ್ಮೆಂಟ್ ಜಾಗೃತಿ ಅಭಿಯಾನದ ಪೋಸ್ಟರ್ ಬಿಡುಗಡೆ

ಶಿವಮೊಗ್ಗ ಸೋಲಿಡಾರಿಟಿ ಯೂತ್ ಮೂಮ್ಮೆಂಟ್ ವತಿಯಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು....

Download Eedina App Android / iOS

X