ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ‘ಬಾಯಲ್ಲಿ ಬೆಲ್ಲ, ಎದೆಯಲ್ಲಿ ಕತ್ತರಿ’ಯಾಗದಿರಲಿ…

Date:

Advertisements
ಜೋಳಿಗೆ ಬಿಟ್ಟು ಏನೂ ಇಲ್ಲದ, ಊಳಲು ಭೂಮಿ ಇಲ್ಲದ, ಶಿಕ್ಷಣ ಪಡೆಯಲು ನೆಲೆ ಇಲ್ಲದ, ಶಿಕ್ಷಣವಿದ್ದರೂ ಉದ್ಯೋಗವಿಲ್ಲದ, ಊರಿಂದೂರಿಗೆ ಜೀವನ ನಿರ್ವಹಣೆಗಾಗಿಯೇ ಅಲೆಯಬೇಕಾಗಿದೆ. ಈ ಜನರ ಹಿತವನ್ನು ಈ ಸರ್ಕಾರ ಕಾಪಾಡದಿದ್ದರೆ ಅಲೆಮಾರಿಗಳು ಈ ರಾಜ್ಯದ ಆಡಳಿತ ಶಾಪಗ್ರಸ್ತ ಸಮುದಾಯವಾಗಿ ನಮ್ಮ ನಡುವೆ ಬದುಕಬೇಕಾಗುತ್ತದೆ. 

ಒಳಮೀಸಲಾತಿಯನ್ನು ಸರ್ಕಾರ ತಾತ್ವಿಕವಾಗಿ ಒಪ್ಪಿ ಅಧಿಕಾರಾರೂಢ ಮತ್ತು ಜನಸಂಖ್ಯಾಧಾರಿತವಾಗಿ ಶೇಕಡಾವಾರು ಹಂಚಿಕೆಯಾಗಿರುವುದನ್ನು ಮೊದಲಿಗೆ ಸ್ವಾಗತಿಸುತ್ತೇನೆ. ಈ ಮೂಲಕ ಬಹುಕಾಲದಿಂದ ತಾರತಮ್ಯದ ಬಗೆಗೆ ಆಗಾಗ ಏಳುತ್ತಿದ್ದ ಅಸಹನೆ, ದ್ವೇಷದಿಂದಾವೃತವಾಗಿದ್ದ ಎಡಪಣಕಟ್ಟು ಬಲಪಣಕಟ್ಟುಗಳ ಜಟಾಪಟಿಗೆ ಅಂತಿಮ ತೆರೆ ಎಳೆದಿದ್ದೂ ಸ್ವಾಗತಾರ್ಹ. ಮೂರನೆಯ ಭಾಗವಾಗಿ ಸೃಶ್ಯ ಜಾತಿಗಳ ಮೀಸಲಾತಿ ಜತೆ ಅಲೆಮಾರಿ ಸಮುದಾಯಗಳನ್ನೂ ಸೇರಿಸಿದ್ದು, ಅವರಿಗೆ ಪ್ರತ್ಯೇಕ ಮೀಸಲಾತಿ ಶೇಕಡಾ ನಿಗದಿ ಮಾಡದೇ ಇರುವುದು ಇಡೀ ಒಳಮೀಸಲಾತಿಯಲ್ಲಿ ತಪ್ಪಿದ ತಾಳ ಎಂದೇ ಹೇಳಬೇಕಾಗುತ್ತದೆ. ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಆರಂಭವಾಗಿ ಸಂವಿಧಾನಾತ್ಮಕ ಹೋರಾಟ ಮಾಡಿದುದರಿಂದ ಇವೆಲ್ಲವೂ ಇಂದು ಸಿದ್ಧಿಸಲು ಸಾಧ್ಯವಾಗಿದೆ. 1874ರಿಂದ ಮೈಸೂರು ಸಂಸ್ಥಾನ ದೇಶದಲ್ಲೇ ಮೊದಲಿಗೆ ಮೀಸಲಾತಿ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

1902ರಂದು ಶಾಹು ಮಹಾರಾಜರು ಕೊಲ್ಲಾಪುರದಲ್ಲಿ ಮೀಸಲಾತಿ ನೀಡಿದರು. 20% ಜನಸಂಖ್ಯೆ ಇರುವ ಬ್ರಾಹ್ಮಣರಿಗೆ 80% ಮೀಸಲಾತಿ ಇದೆ. ಇತರರಿಗೆ 1918 ಲೆಸ್ಲಿ ಮಿಲ್ಲರ್‌ ಆಯೋಗ ದೇಶದ ಮೊದಲ ಮೀಸಲಾತಿ ಆಯೋಗ ಇದು ಸಾಮಾಜಿಕ ನ್ಯಾಯದ ನ್ಯಾಯಿಕ ಸ್ವರೂಪಕ್ಕೆ ಕಾರಣವಾದ ವರದಿ.

ಆ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಸುಖರಾಜ್ಯವನ್ನಾಗಿ ಮಾಡಿದ ಮೈಸೂರು ಸಂಸ್ಥಾನ ಮುಂದೆ ಸಂವಿಧಾನದ ಮೀಸಲಾತಿಗೆ ಮಾದರಿಯಾದುದು ವಿಶೇಷ.

Advertisements

ಡಾ. ನಾಗನಗೌಡ ಆಯೋಗ, ಕೇಂದ್ರದಲ್ಲಿ ರೌಕಾ ಕಾಳೇಲ್ಕರ್‌ ವರದಿಗಳು ಮಂಡನೆ ಆಗಲಿಕ್ಕೆ ಸಾಧ್ಯವಾಗಲಿಲ್ಲ. ದೇವರಾಜ ಅರಸು ಕಾಲದಲ್ಲಿ ರೂಪುಗೊಂಡ ಹಾವನೂರು ವರದಿ ಕರ್ನಾಟಕದ ಜನಜಾತಿಗಳಿಗೆ ಒಂದು ಶಕೆ ತೆರೆಯಿತು. ಜಾತಿ, ಬುಡಕಟ್ಟು ಸಮುದಾಯ ಮತ್ತು ಅಲೆಮಾರಿಗಳ ವಿಭಜನೆ ಸ್ಪಷ್ಟವಾಗಿ ಒಟ್ಟು ಸಾಮಾಜಿಕ ಸಂರಚನೆ ಅರ್ಥಮಾಡಿಕೊಂಡು ಮೀಸಲಾತಿ ಹಂಚುವ ವೈಜ್ಞಾನಿಕ ವಿಧಾನವನ್ನು ಮಂಡಿಸಿದ ವರದಿ. ಆದರೆ ಪ್ರಬಲ ಜಾತಿಗಳ ದ್ವೇಷಕ್ಕೆ ಕಾರಣವಾದರೂ ಅದು ಅರಸು ಅವರಿಂದ ಜಾರಿಯಾಗಿ ಬಹಳ ದೊಡ್ಡ ಪರಿಣಾಮವನ್ನು ರಾಜ್ಯದ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ನೆಲೆಗಳಲ್ಲೂ ಉಂಟುಮಾಡಿದಂತಾದರೂ; ಮುಂದೆ ಇದರ ಪರಿಣಾಮವನ್ನು ಕಡಿಮೆ ಮಾಡಲು ವೆಂಕಟಸ್ವಾಮಿ ಆಯೋಗ, ಅದನ್ನೂ ಶಸ್ತ್ರಚಿಕಿತ್ಸೆ ಮಾಡಲು ಚಿನ್ನಪ್ಪ ರೆಡ್ಡಿ ಆಯೋಗ ಮುಂತಾದವಾಗಿ ಮೀಸಲಾತಿ ಎಂದರೆ ರಾಜ್ಯದ ಎಲ್ಲರೂ ಪಡೆಯುವ ಅದರಲ್ಲೂ ಪ್ರಬಲರಾದವರು ಪಡೆಯುವ ಸವಲತ್ತಾಗಿ ಪರಿಣಮಿಸಿತು.

ಈ ನಡುವೆ, ಕೇಂದ್ರದ ಮಂಡಲ್‌ ಕಮಿಷನ್‌ಗೆ ಮಾದರಿ ನಮ್ಮ ಹಾವನೂರು ಆಯೋಗ ಎಂಬುದು ನಮ್ಮ ಹೆಗ್ಗಳಿಕೆ. ಆ ಕಾರಣದಿಂದಲೇ ದಕ್ಷಿಣ ಆಫ್ರಿಕಾ ಸಂವಿಧಾನ ರಚನೆಗೆ ನೆಲ್ಸನ್‌ ಮಂಡೇಲಾ ಅವರು ಆಹ್ವಾನಿಸಿದ್ದು, ನಮ್ಮ ಎಲ್‌.ಜಿ ಹಾವನೂರು ಮತ್ತು ರವಿವರ್ಮ ಕುಮಾರ್‌ ಅವರನ್ನು ಎಂಬುದೂ ಕೂಡ ನಮ್ಮ ಹೆಗ್ಗಳಿಕೆ. ಮುಂದೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚನೆಯಾಯಿತು. ಕರ್ನಾಟಕ ಜಾತಿಗಣತಿಗೆ ದೇಶದಲ್ಲೇ ಮಾದರಿ ವರ್ಗಗಳ ಆಯೋಗ ರಚನೆಯಾಯಿತು. ಕರ್ನಾಟಕ ಜಾತಿ ಗಣತಿಗೆ ದೇಶದಲ್ಲೇ ಮಾದರಿ(ಪೈಲಟ್)‌ ಸರ್ವೆಗಾಗಿ ಸುಪ್ರಿಂ ಕೋರ್ಟ್‌ ನಿರ್ದೇಶನದಂತೆ ಗಣತಿ ಮಾಡಲು ಎರಡು ದಶಕದ ಚರಿತ್ರೆಯನ್ನು ಹಾಯ್ದು ಬಂದಿದೆ. ಇದಕ್ಕೆ ಪರ ವಿರೋಧ ಎಲ್ಲವೂ ಇದ್ದವು.

ಪ್ರೊ. ರವಿವರ್ಮಕುಮಾರ್‌, ಡಾ. ಸಿ.ಎಸ್. ದ್ವಾರಕಾನಾಥ್‌, ಕಾಂತರಾಜ ಮುಂತಾದವರ ನೇತೃತ್ವದಲ್ಲಿ ಕಾಲ ಕಾಲದ ಅನೇಕ ಅಂಶಗಳ ಜತೆ ಬೆಳೆದು ಬಂದ ಚಿಂತನೆಯ ಫಲವಾಗಿ ಇಂದು ರಾಜ್ಯದ ಸಮಗ್ರ ಮೀಸಲಾತಿಯ ಸಮಸ್ಯೆ ನಮ್ಮೆದುರಿಗಿದೆ.

ಈ ಲೇಖನ ಓದಿದ್ದೀರಾ?: ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಈಗ ಒಳಮೀಸಲಾತಿಯಲ್ಲಿ ಆದ ಬೆಳವಣಿಗೆಯ ಎಲ್ಲ ಒಳ್ಳೆಯ ಅಂಶಗಳನ್ನು ಸ್ವಾಗತಿಸುತ್ತ ಪ್ರಧಾನವಾಗಿ ಅಲೆಮಾರಿಗಳ ಮೀಸಲಾತಿಯ ಬಗೆಗಿನ ಶೇ.1ರಷ್ಟು ಅವರಿಗೆ ಪ್ರತ್ಯೇಕಿಸಿ ಕೊಡದಿದ್ದರೆ ಅವರು ಪರಿಶಿಷ್ಟರಲ್ಲಿ ಪರಿಶಿಷ್ಟರಾಗಿ ಉಳಿಯುತ್ತಾರೆ. ಮೀಸಲಾತಿಯಲ್ಲಿ ಪ್ರಬಲ ಜಾತಿಗಳ ದಾಳಿಗೆ ಸಿಕ್ಕ ಸಣ್ಣಪುಟ್ಟ ಅಲಕ್ಷಿತ ಜಾತಿಗಳ ಬಗೆಗೆ ಕೇಳುವವರೂ ಇಲ್ಲ, ಅವರ ಹಕ್ಕು ಬಾಧ್ಯತೆಗಳನ್ನು ಗಮನಿಸುವವರೂ ಇಲ್ಲ. ಅವರುಗಳು ಮೊದಲೇ ತಬ್ಬಲಿಗಳು. ಶಿಕ್ಷಣ ಇಲ್ಲ. ಏಕೆಂದರೆ ಒಂದು ಕಡೆ ನೆಲೆಯಾಗಿ ನಿಲ್ಲಲಿಕ್ಕೆ ಸಾಧ್ಯ ಇಲ್ಲ. ಒಬ್ಬ ದುರಗಿಮುರಗಿ, ಬುಡಬುಡಕಿ, ದೆಕ್ಲರು, ಮೊಂಡ, ದೊಂಬ ಮುಂತಾದ 48 ಜಾತಿಗಳು ಬೇರೆಯವರ ಜತೆ ಪೈಪೋಟಿ ಮಾಡಲು ಸಾಧ್ಯವೇ ಇಲ್ಲ. ಅವರಿಗೆ ಸಿಗಬೇಕಾದುದನ್ನು ಅವರಿಗೆ ಸಿಗುವಂತೆ ಮಾಡುವವರು ಯಾರು?

ಜಾತಿಗಣತಿ ಈ ರೂಪ ಪಡೆಯಲು ಸನ್ಮಾನ್ಯ ಸಿದ್ದರಾಮಯ್ಯನವರೇ ಕಾರಣ. ಆರಂಭಕ್ಕೆ, 22.5 ಕೋಟಿ ಹಣ ಬಿಡುಗಡೆ ಮಾಡುವ ಮೂಲಕ ಆರಂಭಿಸಿದ್ದು ಮೊದಲಿಗೆ ಮುಖ್ಯಮಂತ್ರಿ ಆಗಿದ್ದಾಗಲೇ ಕಾಂತರಾಜ ವರದಿ ಜಾರಿಯಾಗಿದ್ದರೆ ಕರ್ನಾಟಕದ ರಾಜಕೀಯ ಚಿತ್ರಣವೇ ಬೇರೆಯಾಗುತ್ತಿತ್ತು. ಆದರೆ ಈಗ ದೇವೇಗೌಡರಿಗೆ ಉತ್ತರ ಕೊಡುವ ಮತ್ತು ಲಿಂಗಾಯತ ಸ್ವತಂತ್ರ ಧರ್ಮ ವಿಚಾರಗಳಿಂದ ಉತ್ತಮ ಆಡಳಿತ ನೀಡಿಯೂ ದಿಕ್ಕು ತಪ್ಪಿಸಿದ್ದರಿಂದ ಮುಂದೆ ಅಧಿಕಾರದಿಂದಲೇ ವಂಚಿತವಾಗಬೇಕಾಯಿತು.

ಈಗ ಅಲೆಮಾರಿಗಳ ಹಿತವನ್ನು ಸನ್ಮಾನ್ಯ ಸಿದ್ದರಾಮಯ್ಯನವರು ಕಾಪಾಡಲೇಬೇಕು. ಏಕೆಂದರೆ ಅವರಿಗೆ ಸಾಮಾಜಿಕ ನ್ಯಾಯದ ಒಳಸುಳಿಗಳು ಚೆನ್ನಾಗಿ ಗೊತ್ತಿವೆ. ಜತೆಗೆ ಮೀಸಲಾತಿ ಇಲ್ಲದಿದ್ದರೆ ಅಲೆಮಾರಿಗಳು ಏನಾಗುತ್ತಾರೆಂದು ಅವರಿಗೆ ತಿಳಿದಿದೆ. ಆದ್ದರಿಂದ ಜೋಳಿಗೆ ಬಿಟ್ಟು ಏನೂ ಇಲ್ಲದ, ಊಳಲು ಭೂಮಿ ಇಲ್ಲದ, ಶಿಕ್ಷಣ ಪಡೆಯಲು ನೆಲೆ ಇಲ್ಲದ, ಶಿಕ್ಷಣವಿದ್ದರೂ ಉದ್ಯೋಗವಿಲ್ಲದ, ಊರಿಂದೂರಿಗೆ ಜೀವನ ನಿರ್ವಹಣೆಗಾಗಿಯೇ ಅಲೆಯಬೇಕಾಗಿದೆ. ಈ ಜನರ ಹಿತವನ್ನು ಈ ಸರ್ಕಾರ ಕಾಪಾಡದಿದ್ದರೆ ಅಲೆಮಾರಿಗಳು ಈ ರಾಜ್ಯದ ಆಡಳಿತ ಶಾಪಗ್ರಸ್ತ ಸಮುದಾಯವಾಗಿ ನಮ್ಮ ನಡುವೆ ಬದುಕಬೇಕಾಗುತ್ತದೆ. ಅವರಿಗೆ 1% ಪ್ರತ್ಯೇಕಿಸಿ ಕೊಡಲು ಆಗಿದ್ದರೆ ಅದು ಸಾಮಾಜಿಕ ನ್ಯಾಯ ಎಂದಿಗೂ ಆಗುವುದಿಲ್ಲ.

ನ್ಯಾಯಮೂರ್ತಿಗಳಾದ ನಾಗಮೋಹನದಾಸ್‌ ಅವರು ಅವರುಗಳ ಸ್ಥಿತಿಗತಿಗಳನ್ನು ಕಂಡೇ ಮೊದಲಿಗೆ ಅವರಿಗೆ 1% ಮೀಸಲನ್ನು ಮುಡುಪಾಗಿಟ್ಟಿದ್ದರು. ಅದನ್ನು ದಯವಿಟ್ಟು ಅವರಿಗೇ ಮೀಸಲಿಟ್ಟ ಒಳಮೀಸಲಾತಿಯ ಪ್ರಕ್ರಿಯೆಯನ್ನು ಶಾಂತಯುತವೂ, ಸಾಮಾಜಿಕ ನ್ಯಾಯಪರವೂ ಅಲೆಮಾರಿಗಳ ಪರವೂ ಮಾಡಬೇಕಾದ ಅನಿವಾರ್ಯತೆ ರಾಜ್ಯದ ಆಡಳಿತದೆದುರು ಇದೆ. ಉಳಿದ ಜಾತಿಗಳ ಹಂಚಿಕೆಗಳಂತೆ ಈ 1% ಪ್ರತ್ಯೇಕಿಸದಿದ್ದರೆ ಆಗಬಹುದಾದ ಅನಾಹುತಗಳು ಅಲೆಮಾರಿಗಳಿಗಷ್ಟೇ ಅಲ್, ನಮಗೂ ಗೊತ್ತೇ ಇದೆ. ಜಾತಿ ಜಾತಿಗಳ ನಡುವೆ ವಂಚಿಸುವುದನ್ನು ಬಿಟ್ಟರೆ ಉದಾರವಾದಿ ನೀತಿ ಇಲ್ಲವೇ ಇಲ್ಲ. ಅವೆಲ್ಲ ವೇದಿಕೆಯಲ್ಲಿ ‘ಬಾಯಲ್ಲಿ ಬೆಲ್ಲ, ಎದೆಯಲ್ಲಿ ಕತ್ತರಿ’ ಎಂಬ ಮೈಲಾರಲಿಂಗನ ತತ್ವಪದದಂತೆ! ಈ ಸಮಸ್ಯೆಯನ್ನು ಮಾನ್ಯ ಮುಖ್ಯಮಂತ್ರಿಗಳು ಫಲಪ್ರದ ಮಾಡಲಿ ಎಂದು ಹಾರೈಸುತ್ತೇನೆ.      

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ. ರಾಜಪ್ಪ ದಳವಾಯಿ
ಪ್ರೊ. ರಾಜಪ್ಪ ದಳವಾಯಿ
ಕನ್ನಡ ಪ್ರಾಧ್ಯಾಪಕರು. ಮೈಸೂರು ವಿಶ್ವವಿದ್ಯಾಲಯದಿಂದ ಎಂಎ ಪದವಿ. ಕನ್ನಡದಲ್ಲಿ ಸಂಸ್ಕೃತಿ ನಿರ್ವಚನ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ. ಗಿರೀಶ್ ಕಾರ್ನಾಡರ ನಾಟಕಗಳಲ್ಲಿ ಪುರಾಣ ಚಾರಿತ್ರಿಕ ವಾಸ್ತವ ಎಂಬ ವಿಷಯದ ಮೇಲಿನ ಅಧ್ಯಯನಕ್ಕೆ ದ್ರಾವಿಡ ವಿಶ್ವವಿದ್ಯಾಲಯದಿಂದ ಎಂಫಿಲ್ ಪದವಿ ಪಡೆದಿದ್ದಾರೆ. 'ಕವಿರಾಜ ಮಾಗ౯: ಬಹುಶಿಸ್ತೀಯ ಅಧ್ಯಯನ' ವಿಷಯದ ಸಂಶೋಧನೆಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ದಿಂದ ಡಿ.ಲಿಟ್. ಪದವಿ ಪಡೆದಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಸರಾ ಉದ್ಘಾಟನೆಗೆ ಬಾನು ಯೋಗ್ಯ ಆಯ್ಕೆ; ಪ್ರಗತಿಪರರ ಮೆಚ್ಚುಗೆ

ಕನ್ನಡದ ಕಥಾಸಂಕಲನಕ್ಕೆ 2025ರ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬೂಕರ್‌ ಪ್ರಶಸ್ತಿ ಪುರಸ್ಕೃತ...

ದಸರಾ | ಬಾನು ಮುಷ್ತಾಕ್‌ಗೆ ವಿರೋಧ; ಮಹಿಳಾ ವಿರೋಧಿಗಳ ಹಳಹಳಿಕೆ

ಕೆ ಎಸ್ ನಿಸಾರ್ ಅಹಮದ್ ಅವರು ನಾಡಹಬ್ಬ ಉದ್ಘಾಟನೆ ಮಾಡಿದಾಗ ಇವರೆಲ್ಲ...

ನಿರ್ಲಕ್ಷ್ಯಕ್ಕೆ ಗುರಿಯಾಗಿ ದುಸ್ಥಿತಿಗೆ ಬಿದ್ದ ರಾಜ್ಯ ಹೆದ್ದಾರಿ; ಶಾಸಕರ ವಿರುದ್ಧ ಸಾರ್ವಜನಿಕರ ಆಕ್ರೋಶ

ಕಲಬುರಗಿ ಜಿಲ್ಲೆಯ ರಾಜ್ಯ ಹೆದ್ದಾರಿ 125, ಶಹಾಬಾದ್ ತಾಲೂಕಿನಿಂದ ಜೇವರ್ಗಿಯ ರಾಷ್ಟ್ರೀಯ...

ತಹಶೀಲ್ದಾರ್ ಕೋರ್ಟ್ ವ್ಯಾಜ್ಯ 90 ದಿನ ಮೀರಿದರೆ ಶಿಸ್ತು ಕ್ರಮ: ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ

ತಹಶೀಲ್ದಾರ್ ನ್ಯಾಯಾಲಯಗಳಲ್ಲಿನ ತಕರಾರು ಪ್ರಕರಣಗಳು ನಿಗದಿತ ದಿನಗಳ ಒಳಗೆ ವಿಲೇವಾರಿ ಆಗದಿದ್ದರೆ...

Download Eedina App Android / iOS

X