‘ಧೋನಿ ಪಕ್ಷಪಾತಿ’; ‘ಟೀಮ್ ಇಂಡಿಯಾ’ ಮಾಜಿ ಕ್ಯಾಪ್ಟನ್‌ ವಿರುದ್ಧ ಮನೋಜ್ ತಿವಾರಿ ಗಂಭೀರ ಆರೋಪ

Date:

Advertisements

ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಮನೋಜ್ ತಿವಾರಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಜೀವನದ ಬಗ್ಗೆ ಮಾತನಾಡಿದ್ದಾರೆ. “ತಮ್ಮನ್ನು ಎಂ.ಎಸ್‌ ಧೋನಿ ಇಷ್ಟಪಡುತ್ತಿರಲಿಲ್ಲ. ಅವರು ಕ್ಯಾಪ್ಟನ್ ಆಗಿದ್ದಾಗ ನನಗೆ ಸರಿಯಾದ ಬೆಂಬಲ ನೀಡಲಿಲ್ಲ. ಅವರ ಧೋರಣೆಯಿಂದಾಗಿ ಭಾರತೀಯ ತಂಡದಲ್ಲಿ ಹೆಚ್ಚಿನ ಅವಕಾಶಗಳು ದೊರೆಯಲಿಲ್ಲ” ಎಂದು ತಿವಾರಿ ಹೇಳಿಕೊಂಡಿದ್ದಾರೆ.

2015ರ ಜುಲೈನಲ್ಲಿ ಜಿಂಬಾಬ್ವೆ ವಿರುದ್ಧ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ ತಿವಾರಿ ಬಳಿಕ ಕ್ರಿಕೆಟ್‌ ವೃತ್ತಿಯಿಂದ ದೂರ ಉಳಿದಿದರು. ಟೀಮ್‌ ಇಂಡಿಯಾದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ತಿವಾರಿ, 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್‌ ಸರಣಿಗಳಲ್ಲಿ ಭಾರತದ ತಂಡದ ಗೆಲುವಿಗೆ ನೆರವಾಗಿದ್ದರು. ಅವರು ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಯ 5ನೇ ಪಂದ್ಯದಲ್ಲಿ ಅದ್ಭುತ ಶತಕ ಗಳಿಸಿ ಭಾರತವು ಐದು ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ಗೆಲ್ಲಲು ಸಹಾಯ ಮಾಡಿದರು. ಬಳಿಕ, 2012ರ ಜುಲೈನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆಯುವ ಮೂಲಕ ಭಾರತವು 6 ವಿಕೆಟ್‌ಗಳ ಜಯ ದಾಖಲಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಇಂತಹ ಉತ್ತಮ ಪ್ರದರ್ಶನ ನೀಡಿದರೂ, ತಮಗೆ ಆಗ ಟೀಮ್ ಇಂಡಿಯಾ ನಾಯಕನಾಗಿದ್ದ ಎಂ.ಎಸ್‌ ಧೋಮಿ ಅಗತ್ಯ ಬೆಂಬಲ ನೀಡಲಿಲ್ಲ. ತಮ್ಮನ್ನು ಕಡೆಗಣಿಸಿದರು ಎಂದು ತಿವಾರಿ ಬೇಸರ ವ್ಯಕ್ತಪಡಿಸಿದ್ದಾರೆ.

“ಎಲ್ಲರೂ ಎಂ.ಎಸ್ ಧೋನಿ ಅವರನ್ನು ಇಷ್ಟಪಡುತ್ತಾರೆ. ಧೋನಿ ತಮ್ಮ ನಾಯಕತ್ವವನ್ನು ಸಾಬೀತು ಮಾಡಿದ್ದಾರೆ. ಅವರ ನಾಯಕತ್ವದ ಗುಣಗಳು ತುಂಬಾ ಉತ್ತಮವಾಗಿತ್ತು ಎಂಬುದನ್ನು ನಾನು ಯಾವಾಗಲೂ ಹೇಳುತ್ತೇನೆ. ಆದರೆ, ಅದೇಕೋ, ನನ್ನ ವಿಷಯದಲ್ಲಿ ಅವರು ಬೇರೆಯದ್ದೇ ರೀತಿಯಲ್ಲಿದ್ದರು. ಅವರು ನನ್ನನ್ನು ಇಷ್ಟಪಡುತ್ತಿರಲಿಲ್ಲ. ಅದು ಯಾಕೆ ಎಂಬುದೂ ಗೊತ್ತಿಲ್ಲ. ಈ ಪ್ರಶ್ನೆಗೆ ಉತ್ತರಿಸಬಲ್ಲವರು ಧೋನಿ ಮಾತ್ರ. ಆ ಸಮಯದಲ್ಲಿ, ಅವರು ನಿಜವಾಗಿಯೂ ಇಷ್ಟಪಟ್ಟ ಮತ್ತು ಪೂರ್ಣ ಬೆಂಬಲ ನೀಡಿದ ಒಂದೆರಡು ವ್ಯಕ್ತಿಗಳಿದ್ದರು. ಬಹಳಷ್ಟು ಜನರಿಗೆ ಇದು ಗೊತ್ತಿದೆ. ಆದರೆ, ಯಾರೂ ಕೂಡ ಮುಂದೆ ಬಂದು ಅದರ ಬಗ್ಗೆ ಮಾತನಾಡುವುದಿಲ್ಲ” ಎಂದು ತಿವಾರಿ ಹೇಳಿದ್ದಾರೆ.

Advertisements

“ಧೋನಿ ಅವರು ನನ್ನನ್ನು ಕಡೆಗಣಿಸಿತ್ತು, ಇಷ್ಟಪಡದೇ ಇದ್ದದ್ದು ಯಾಕೆ ಎಂಬುದಕ್ಕೆ ಈವರೆಗೆ ಯಾವುದೇ ಉತ್ತರ ಸಿಕ್ಕಿಲ್ಲ. ಇದಲ್ಲದೆ, ಆ ಸಮಯದಲ್ಲಿ ಕೋಚ್ ಅಥವಾ ಆಯ್ಕೆದಾರರು ಅಥವಾ ನಾಯಕನನ್ನು ಕರೆದು ಉತ್ತರ ಕೇಳುವಷ್ಟು ಸಾಧ್ಯತೆಯೂ ಇರಲಿಲ್ಲ. ನಾನು ಎಂಎಸ್ ಧೋನಿಯನ್ನು ಭೇಟಿಯಾದಾಗಲೆಲ್ಲಾ, 100 ರನ್ ಗಳಿಸಿದ ನಂತರ ನನಗೆ ಅವಕಾಶ ನೀಡದಿರಲು ಮುಖ್ಯ ಕಾರಣಗಳೇನು ಎಂಬುದಾಗಿ ಕೇಳುತ್ತೇನೆ. ಆದರೆ, ಉತ್ತರ ದೊರೆತಿಲ್ಲ” ಎಂದು ತಿವಾರಿ ವಿವರಿಸಿದ್ದಾರೆ.

“ಧೋನಿ ತಮಗೆ ಬೇಕಾದ ಆಟಗಾರರಿಗೆ ಹೇಗೆ ಬೆಂಬಲ ನೀಡುತ್ತಿದ್ದರು ಎಂಬುದರ ಬಗ್ಗೆ ವಿಭಿನ್ನ ಅಭಿಪ್ರಾಯ ಹೊಂದಿರುವ ಅನೇಕ ಆಟಗಾರರಿದ್ದಾರೆ. ನನ್ನ ಅನುಭವದಲ್ಲಿ, ನನಗೆ ಏನಾಯಿತು ಎಂಬುದರ ಬಗ್ಗೆ ನನ್ನ ಅನುಭವವನ್ನು ಹಂಚಿಕೊಳ್ಳಬಲ್ಲೆ. ಅವರು ನಿಜವಾಗಿಯೂ ಎಲ್ಲ ಆಟಗಾರರಿಗೆ ಬೆಂಬಲ ನೀಡಿದ್ದರೆ, ಆ ನಿರ್ದಿಷ್ಟ ಪಂದ್ಯದಲ್ಲಿ ಮತ್ತು ಒಂದು ನಿರ್ದಿಷ್ಟ ಅವಧಿಯಲ್ಲಿ ನಾನು ನೀಡಿದ ಉತ್ತಮ ಪ್ರದರ್ಶನಕ್ಕಾಗಿ ಅವರು ಖಂಡಿತವಾಗಿಯೂ ನನ್ನನ್ನು ಬೆಂಬಲಿಸುತ್ತಿದ್ದರು” ಎಂದು ತಿವಾರಿ ಹೇಳಿದ್ದಾರೆ.

ಈ ಲೇಖನ ಓದಿದ್ದೀರಾ?: ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಮನೋಜ್ ತಿವಾರಿ ಭಾರತೀಯ ಕ್ರಿಕೆಟ್‌ ತಂಡದಲ್ಲಿ 12 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಒಂದು ಶತಕ ಮತ್ತು ಒಂದು ಅರ್ಧಶತಕ ಸೇರಿದಂತೆ 26.09 ಸರಾಸರಿಯಲ್ಲಿ 287 ರನ್ ಗಳಿಸಿದ್ದಾರೆ. 3 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು, ಸೀಮಿತ ಬ್ಯಾಟಿಂಗ್ ಅವಕಾಶದಿಂದಾಗಿ, ಹೆಚ್ಚಿನ ಸಾಧನೆ ಮಾಡಲಾಗಿಲ್ಲ.

ತಿವಾರಿ ಭಾರತೀಯ ತಂಡದಲ್ಲಿ ಎಂದಿಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಮೈದಾನಕ್ಕೆ ಇಳಿದಿಲ್ಲ. ಆದರೂ, ಬಂಗಾಳದ ರೆಡ್-ಬಾಲ್ ಕ್ರಿಕೆಟ್‌ನಲ್ಲಿ 148 ಪಂದ್ಯಗಳಲ್ಲಿ 10,195 ರನ್ ಗಳಿಸಿದ್ದಾರೆ, 303* ಅತ್ಯಧಿಕ ಸ್ಕೋರ್ ಗಳಿಸಿದ್ದಾರೆ. ಅವರು ನಿವೃತ್ತಿಯಿಂದ ಹೊರಬಂದು 2024ರ ರಣಜಿ ಟ್ರೋಫಿಯಲ್ಲಿ ಬಂಗಾಳವನ್ನು ಮುನ್ನಡೆಸಿದ್ದರು. ಬಿಹಾರ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿ, 204 ರನ್‌ಗಳ ಅಂತರದಲ್ಲಿ ಸರಣಿಯನ್ನು ಗೆದ್ದರು. ಐಪಿಎಲ್‌ನಲ್ಲಿ, ಅವರು ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರೈಸಿಂಗ್ ಪುಣೆ ಸೂಪರ್‌ಜೈಂಟ್ ಹಾಗೂ ಪಂಜಾಬ್ ಕಿಂಗ್ಸ್ (ಕೆಎಕ್ಸ್‌ಐಪಿ) ತಂಡಗಳಲ್ಲಿ ಆಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯಾಕಪ್​ಗೆ ಅಚ್ಚರಿಯ ಭಾರತ ತಂಡ ಪ್ರಕಟ; ಹಲವರಿಗೆ ಕೊಕ್‌, ಪ್ರಮುಖರ ಆಗಮನ

ಮಹತ್ವದ ಟಿ20 ಏಷ್ಯಾಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ...

ಏಷ್ಯನ್ ಚಾಂಪಿಯನ್‌ಶಿಪ್‌ | 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಕಂಚು ಗೆದ್ದ ಮನು ಭಾಕರ್

ಕಝಾಕಿಸ್ತಾನದ ಶಿಮ್ಕೆಂಟ್‌ನಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 10 ಮೀಟರ್...

ಬುಲಾ ಚೌಧರಿ ಪದ್ಮಶ್ರೀ ಪದಕ ಕಳವು: ‘ಎಲ್ಲವನ್ನೂ ಕಳೆದುಕೊಂಡೆ’ ಎಂದ ಈಜುಪಟು

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಮ್ಮ ಪೂರ್ವಜರ ಮನೆಯಿಂದ ಪದ್ಮಶ್ರೀ ಪದಕ...

RCBಯದ್ದು ಕಳ್ಳ ಒಪ್ಪಂದ; ಆರ್‌ ಅಶ್ವಿನ್ ಬಹಿರಂಗ ಟೀಕೆ

2025ರ ಐಪಿಎಲ್‌ ಟೂರ್ನಿಗಾಗಿ ನಡೆದ ಮೆಗಾ ಹರಾಜಿನ ಸಮಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್...

Download Eedina App Android / iOS

X