ಪ್ರಧಾನಿ ಪದವೀಧರರಾಗದಿರುವುದು ಅಪರಾಧವಲ್ಲ, ಆದರೆ ಸುಳ್ಳು ಹೇಳುವುದು, ಆ ಸುಳ್ಳು ಮರೆಮಾಚಲು ಸಂಸ್ಥೆಗಳನ್ನು ಬಳಸುವುದು ಮಹಾಪರಾಧ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಮೋದಿ ತಾವು 1978ರಲ್ಲಿ ಬಿ ಎ ಪದವಿ ಪಡೆದಿರುವುದಾಗಿ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಒದಗಿಸಲು ಆಗ್ರಹಿಸಿ ನೀರಜ್ ಎಂಬವರು ಹಲವು ವರ್ಷಗಳ ಹಿಂದೆ ಆರ್‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು.
ಇದನ್ನು ಓದಿದ್ದೀರಾ? ಗುಜರಾತ್ ನರಮೇಧದ ಹಿಂದಿದ್ದವರು ಮೋದಿಯೇ ಎಂದು ನಿರಂತರ ಸಮರ ಸಾರಿದ್ದರು ಝಕಿಯಾ ಜಾಫ್ರಿ
ಈ ಅರ್ಜಿಯ ಆಧಾರದಲ್ಲಿ 2016ರ ಡಿಸೆಂಬರ್ 21ರಂದು ಕೇಂದ್ರ ಮಾಹಿತಿ ಆಯೋಗ(ಸಿಐಸಿ) ಪ್ರಧಾನಿ ಮೋದಿ ಅವರ ಪದವಿ ವ್ಯಾಸಂಗಕ್ಕೆ ಸಂಬಂಧಿಸಿದ ವಿವರಗಳನ್ನು ಬಹಿರಂಗಪಡಿಸುವಂತೆ ಆದೇಶಿಸಿತ್ತು.
ಆದರೆ ಈ ಅರ್ಜಿಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ದೆಹಲಿ ವಿಶ್ವವಿದ್ಯಾಲಯ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್, 2017ರ ಜನವರಿ 23ರಂದು ಸಿಐಸಿ ಆದೇಶಕ್ಕೆ ತಡೆ ನೀಡಿ ಆದೇಶಿಸಿತ್ತು. ಹಾಗೆಯೇ ತನಿಖೆ ಮುಂದುವರೆದಿದ್ದು, ಹೈಕೋರ್ಟ್ ಸೋಮವಾರ ಸಿಐಸಿ ಆದೇಶವನ್ನು ರದ್ದುಪಡಿಸಿದೆ.
a Prime Minister not having a Degree is not a Crime.
— Prakash Raj (@prakashraaj) August 26, 2025
But to Lie that you have a Degree and to use institutions to Hide that Lie is a very Big CRIME . #justasking #degreechor
ಪಡೆದ ಅಂಕಗಳು, ಶ್ರೇಣಿ, ಉತ್ತರ ಪತ್ರಿಕೆಗಳು, ವೈಯಕ್ತಿಕ ಮಾಹಿತಿ ಆಗಿದ್ದು, ಈ ವಿವರಗಳನ್ನು ಬಹಿರಂಗಪಡಿಸದಂತೆ ಆರ್‌ಟಿಐ ಕಾಯ್ದೆ ಸೆಕ್ಷನ್ 8(1) ಅಡಿ ರಕ್ಷಣೆ ನೀಡಲಾಗಿದೆ ಎಂದು ಹೈಕೋರ್ಟ್ ಹೇಳಿದೆ. ಹಾಗೆಯೇ ಅಧಿಕಾರದಲ್ಲಿದ್ದುಕೊಂಡು ಕರ್ತವ್ಯ ನಿರ್ವಹಿಸಲು ಶೈಕ್ಷಣಿಕ ಅರ್ಹತೆಗಳು ಶಾಸನಬದ್ಧವಾಗಿ ಅಗತ್ಯವೇನಲ್ಲ ಎಂದು ಹೇಳಿದೆ.
ಈ ವಿಚಾರದಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನಟ ಪ್ರಕಾಶ್ ರಾಜ್, “ಪ್ರಧಾನಿಯೊಬ್ಬರು ಪದವೀಧರ ಆಗದಿರುವುದು ಅಪರಾಧವಲ್ಲ. ಆದರೆ ಪದವೀಧರನೆಂದು ಸುಳ್ಳು ಹೇಳುವುದು, ಆ ಸುಳ್ಳು ಮುಚ್ಚಿಡಲು ಸಂಸ್ಥೆಗಳನ್ನು ಬಳಸಿಕೊಳ್ಳುವುದು, ಕೇವಲ ಅಪರಾಧ ಮಾತ್ರವಲ್ಲ. ಮಹಾಪರಾಧ” ಎಂದು ಬರೆದುಕೊಂಡಿದ್ದಾರೆ.
ಇನ್ನು, “ತಮ್ಮ ಪದವಿ ವಿವರಗಳನ್ನು ಮುಚ್ಚಿಡಲು ನ್ಯಾಯಾಲಯದ ಮೊರೆ ಹೋದ ದೇಶದ ಮೊದಲ ಪ್ರಧಾನಿ ನರೇಂದ್ರ ಮೋದಿ” ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
