ಹಾವೇರಿ | ಗುಣಾತ್ಮಕ ಶಿಕ್ಷಣಕ್ಕಾಗಿ ಕಲಿಕೆ: ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಮಸುಂದರ ಅಡಿಗ

Date:

Advertisements

“ಎಲ್. ಬಿ.ಎ.ಫ್.ಲ್ ಎನ್ ಕಾರ್ಯಕ್ರಮಗಳ ಪರಿಣಾಮ ಮುಂದಿನ ದಿಗಳಲ್ಲಿ ಕಾಣಬಹುದು. ಆಂಗ್ಲ ಭಾಷಾ ವಿಷಯ ಕುರಿತಾಗಿ ವಿಷಯ ವೇದಿಕೆಗಳಲ್ಲಿ ಪರಿಣಾಮಕಾರಿ ಚರ್ಚೆಗಳಾಗಿ ತರಗತಿಯ ಕೋಣೆಗಳಲ್ಲಿ ಅನುಷ್ಠಾನಗೊಳ್ಳುತ್ತಿರುವುದು ತುಂಬಾ ಸಂತೋಷಕರ ವಿಷಯವಾಗಿದೆ. ಗುಣಾತ್ಮಕ ಶಿಕ್ಷಣ ಕಲಿಕೆ ಇರಲಿ” ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಮಸುಂದರ ಅಡಿಗ ಹೇಳಿದರು.

ಹಾವೇರಿ ಜಿಲ್ಲೆಯ ರಾಣಿಬೆನ್ನೂರ ತಾಲ್ಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಆಂಗ್ಲ ಭಾಷಾ ಶಿಕ್ಷಕರ ವೇದಿಕೆ ಹಾಗೂ ಕಾಕೋಳ ಶ್ರೀ ಬೀರೇಶ್ವರ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ನಡೆದ ಒಂದು ದಿನದ ಇಂಗ್ಲಿಷ್ ಭಾಷಾ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

“ಆರಂಭದಿಂದಲೇ ಪರೀಕ್ಷೆ ತಯಾರಿ ನಡೆಸಬೇಕು. ಪರೀಕ್ಷಾ ಭಯವನ್ನು ಹೋಗಲಾಡಿಸಿ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರ ಮೇಲಿದೆ” ಎಂದರು.

Advertisements

ಹಾವೇರಿ ಜಿಲ್ಲಾ ಇಂಗ್ಲೀಷ್ ಭಾಷಾ ಶಿಕ್ಷಕರ ವೇದಿಕೆಯ ಗೌರವಾಧ್ಯಕ್ಷರಾದ ಎಸ್. ಆರ್. ತೆವರಿ ಮಾತನಾಡಿ, “ಮಕ್ಕಳು, ಶಿಕ್ಷಕರು ಹಾಗೂ ಪಾಲಕರ ನಡುವೆ ಉತ್ತಮ ಕಲಿಕಾ ವಾತಾವರಣ ನಿರ್ಮಾಣವಾಗಬೇಕು. ಗುಣಮಟ್ಟದ ಶಿಕ್ಷಣ ನಮ್ಮ ಮೊದಲ ಧ್ಯೇಯವಾಗಬೇಕು ಎಲ್. ಬಿ.ಎ ಆಧಾರಿತವಾಗಿ ತರಗತಿಯ ಮಕ್ಕಳನ್ನು ಆಧುನಿಕ ಸ್ಪರ್ಧಾತ್ಮಕ ಜಗತ್ತಿಗೆ ತಯಾರಿಗೊಳಿಸಬೇಕಾದ ಜವಾಬ್ದಾರಿ ಶಿಕ್ಷಕರಾದ ನಮ್ಮ ಮೇಲಿದ” ಎಂದರು.

ತಾಲ್ಲೂಕು ಆಂಗ್ಲ ಭಾಷಾ ಶಿಕ್ಷಕರ ವೇದಿಕೆಯ ಅಧ್ಯಕ್ಷರಾದ ಜಗದೀಶ ಮಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, “ಮಕ್ಕಳಲ್ಲಿ ಆಂಗ್ಲ ಭಾಷೆಯ ಬಗ್ಗೆ  ಇರುವ ಭೀತಿಯನ್ನು ಕಡಿಮೆ ಮಾಡಬೇಕು. ಪರೀಕ್ಷೆಗೋಸ್ಕರ ಇಂಗ್ಲಿಷ್ ಭಾಷೆಯನ್ನು ಅಧ್ಯಯನ ಮಾಡದೆ ಜ್ಞಾನದ ಹಂಬಲಕ್ಕಾಗಿ ಭಾಷೆಯನ್ನು ಕಲಿಯಬೇಕು” ಎಂದು ಸಲಹೆ ನೀಡಿದರು.

 ಬೀರೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಆರ್ ಡಿ ಗೋಡಿಹಾಳ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಮಾತನಾಡಿದರು. ನಿವೃತ್ತ ಶಿಕ್ಷಕರಾದ ಎಸ್ ಟಿ ಬಾತಿ, ರವಿ ಹರಪನಹಳ್ಳಿ , ಶೈಲಜಾ ಸಂಗಾಪುರ, ಕಾರ್ಯದರ್ಶಿ ಲೋಕೇಶ್ ಲಮಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಓದಿದ್ದೀರಾ? ಹಾವೇರಿ | ನಿರಂತರ ಮಳೆಯಿಂದ ಬೆಳ್ಳುಳ್ಳಿ ಬೆಳೆ ಹಾನಿ: ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ‌ ಸಂತ್ರಸ್ತ ರೈತರು

ಈ ಸಂದರ್ಭದಲ್ಲಿ ಎಸ್ ಡಿ ಚಹ್ವಾಣ ಸರ್ವರನ್ನು ಸ್ವಾಗತಿಸಿದರು. ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎಸ್ ಎಚ್ ಕಮ್ಮಾರ, ಸೂರಲಿಂಗಯ್ಯ, ಎಸ್.ಎಂ. ಸಂಗಾಪುರ, ಆನಂದ ದೇವರಮನಿ , ಕೆ ಬಿ ಸಾಂವಂತಲವರ,  ವಾಗೀಶ್ ವಾಲಿ, ಎಸ್ ಬಿ ಉಜಿನಿ  ಕುಬೇಂದ್ರ ನಾಯಕ, ಅಕ್ಕಮ್ಮ ಮಣ್ಣಮ್ಮನವರ, ಶಿವಲೀಲಾ ಮಳಲಿ, ವಿನೋದಾ ಎಸ್ ಕೆ , ಗೀತಾ ಮಲ್ಲರಡ್ಡೆರ ಮುಂತಾದ ಶಿಕ್ಷಕರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ( ಕಭೀ) ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ...

ಉಡುಪಿ‌ | ಹುಡುಗಿಯ ವಿಚಾರಕ್ಕೆ ಜಗಳ, ಕೊಲೆಯಲ್ಲಿ ಅಂತ್ಯ, ಆರೋಪಿಯ ಬಂಧನ

ಉಡುಪಿ‌ ಜಿಲ್ಲೆಯ ಕಾರ್ಕಳದ ಕುಂಟಲ್ಪಾಡಿಯಲ್ಲಿ ಮದ್ಯರಾತ್ರಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ...

ವಿಜಯಪುರ ಬಿಸಿಎಂ ವಸತಿನಿಲಯಕ್ಕೆ ಅಧಿಕಾರಿಗಳ ಭೇಟಿ: ಸಮಸ್ಯೆ ಬಗೆಹರಿಸುವ ಭರವಸೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದ ಬಿಸಿಎಂ ವಸತಿನಿಲಯಕ್ಕೆ ಉಪತಹಶೀಲ್ದಾರ್ ಎನ್...

ಹಾವೇರಿ | ಗಣೇಶ ಚತುರ್ಥಿ: ಪ್ರಾಣಿ ವಧೆ ಹಾಗೂ ಮೀನು-ಮಾಂಸ ಮಾರಾಟ ನಿಷೇಧ

"ಗಣೇಶ ಚತುರ್ಥಿ ಪ್ರಯುಕ್ತ ಆಗಸ್ಟ್ 27 ರಂದು ಬುಧವಾರ ಪ್ರಾಣಿ ವಧೆ...

Download Eedina App Android / iOS

X