“ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ಹಿಂದೂ–ಮುಸ್ಲಿಂ ಸಮುದಾಯದವರು ಶಾಂತ ರೀತಿಯಿಂದ ಆಚರಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಬೇಕು” ಎಂದು ಡಿವೈಎಸ್ಪಿ ಕೆ. ವಿ. ಗುರುಶಾಂತಪ್ಪ ಹೇಳಿದರು.
ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಅಂಬೇಡ್ಕರ್ ಸಂಕಿರಣದಲ್ಲಿ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
“ಹಬ್ಬದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಯಾರಾದರೂ ಕಾನೂನು ಕೈಗೆತ್ತಿಕೊಂಡರೆ, ಜನರಿಗೆ ತೊಂದರೆ ನೀಡಿದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ಗಣೇಶ ಹಬ್ಬದಂದು ಮೂರ್ತಿ ಪ್ರತಿಷ್ಠಾಪನೆ ಮಾಡಲು ಪೆಂಡಾಲ್ ಹಾಕುವವರು, ಪುರಸಭೆ, ಪೊಲೀಸರು, ಅಗ್ನಿಶಾಮಕದಳ, ಜೆಸ್ಕಾಂನಿಂದ ಅನುಮತಿ ಪಡೆಯುವುದು ಕಡ್ಡಾಯ. ಪೆಂಡಾಲ್‌ನಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು. ಅನುಮತಿ ಪಡೆದವರು, ಜವಾಬ್ದಾರಿಯಿಂದ ನಡೆದುಕೊಂಡು ಹಬ್ಬವನ್ನು ಸುಗಮವಾಗಿ ನಡೆಸಬೇಕು” ಎಂದು ಹೇಳಿದರು.
“ಯಾವುದೇ ಮೆರವಣಿಗೆ ಇದ್ದರೂ ರಾತ್ರಿ 10ರೊಳಗೆ ಮುಗಿಸಬೇಕು. ಜೋರಾದ ಸಂಗೀತದ ಧ್ವನಿವರ್ಧಕ ಬಳಸಬಾರದು. ಸರ್ಕಾರ ನಿಯಮಾವಳಿ ಪ್ರಕಾರವೇ ಹಬ್ಬವನ್ನು ಆಚರಿಸಬೇಕು ಎಂದರು. ಪಟ್ಟಣದ ಮುಸ್ಲಿಂ ಸಮುದಾಯದವರು, ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ₹5 ಲಕ್ಷ ಮೌಲ್ಯದ ಗಾಂಜಾ ಜಪ್ತಿ : ಇಬ್ಬರ ಬಂಧನ
ಈ ಸಂದರ್ಭದಲ್ಲಿ ಶಿಗ್ಗಾವಿ ಠಾಣೆಯ ಪಿಎಸ್ಐ. ವಿ. ಬಿ ಹೀರೆಮಠ, ತಾಲ್ಲೂಕು ಆಡಳಿತ ಅಧಿಕಾರಿ ಯಲ್ಲಪ್ಪ ಗೊಂಣ್ಣೆನವರ, ಅಗ್ನಿಶಾಮಕದಳ ವೆಂಕಟೇಶ್ ಡಿ. ಎ, ಹೇಸ್ಕಾಂ ಅಧಿಕಾರಿ ಬಸವರಾಜ ಬಂಡಿವಡ್ಡರ, ಪುರಸಭೆ ಅಧಿಕಾರಿ ಅಬ್ದುಲ್ ಕಂಜಾಜೀ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಗ್ಗಾವಿ ಗಣಪತಿ ಕಮಿಟಿಯ ಸದಸ್ಯರು, ಹಾಗೂ ಊರಿನ ಗುರು ಹಿರಿಯರ ಉಪಸ್ಥಿತರಿದ್ದರು.