ಯುವ ಪೀಳಿಗೆಯನ್ನು ಸೈಬರ್ ವಂಚನೆ, ಆನ್‌ಲೈನ್ ಜೂಜಾಟ ಹಾಗೂ ಗೇಮಿಂಗ್ ವ್ಯಸನದ ದುಷ್ಪರಿಣಾಮಗಳಿಂದ ರಕ್ಷಿಸುವ ಉದ್ದೇಶದಿಂದ ಸೆಪ್ಟೆಂಬರ್ 15 ರವರಗೆ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಸಂಘಟನೆ ವತಿಯಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಸಂಘಟನೆಯ ವಿಜಯನಗರ ಜಿಲ್ಲಾಧ್ಯಕ್ಷ ಸೈಯದ್ ತನ್ವೀರ್ ಹೇಳಿದರು.
ನಗರದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಯುವಕರು ಸೈಬರ್ ವಂಚನೆ, ಆನ್‌ಲೈನ್ ಜೂಜಾಟ, ಬೆಟ್ಟಿಂಗ್ ಹಾಗೂ ಗೇಮಿಂಗ್ ವ್ಯಸನದಿಂದ ಹೆಚ್ಚುತ್ತಿರುವ ಅಪಾಯಗಳ ಆತಂಕಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಇವು ಕೇವಲ ಮನರಂಜನೆ ಎಂಬ ನೆಪದಲ್ಲಿ ಪ್ರವೇಶಿಸಿ, ಜೀವನವನ್ನು ಹಾಳುಮಾಡುವುದು, ಕುಟುಂಬದ ಉಳಿತಾಯವನ್ನು ನಾಶಮಾಡುವುದು, ಜನರನ್ನು ಸಾಲದ ಬಲೆಗೆ ಸಿಲುಕಿಸುವುದು ಹಾಗೂ ಆತ್ಮಹತ್ಯೆಗಳ ಮಟ್ಟಿಗೆ ಕರೆದೊಯ್ಯುತ್ತಿರುವುದು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಅಭಿಯಾನದ ಅಂಗವಾಗಿ ಜಾಗೃತಿ ಭಾಷಣಗಳು, ಪೋಸ್ಟರ್‌ಗಳ ಪ್ರದರ್ಶನ, ಸಾಮಾಜಿಕ ಮಾಧ್ಯಮ ಸವಾಲು, ಜಿಲ್ಲಾ ಮಟ್ಟದ ಬೀದಿ ನಾಟಕಗಳು, ವಿಚಾರ ಸಂಕಿರಣಗಳು ಹಾಗೂ ರ್ಯಾಲಿಗಳ ಮೂಲಕ ಸಂದೇಶ ಹಂಚಲಾಗುವುದು ಹಾಗೂ ಅಭಿಯಾನದ ಮೂಲಕ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

ವ್ಯಸನ ಸಮಸ್ಯೆ ಕೇವಲ ವ್ಯಕ್ತಿಗಷ್ಟೇ ಸೀಮಿತವಾಗಿರುವುದಿಲ್ಲ; ಅದು ಕುಟುಂಬ, ಸಮಾಜ ಮತ್ತು ರಾಷ್ಟ್ರದ ಭವಿಷ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಯುವ ಸಮುದಾಯದ ಭವಿಷ್ಯವನ್ನು ಗಟ್ಟಿಗೊಳಿಸಲು ಸಮಾಜ ಸುಧಾರಕ ಸಂಘಟನೆಗಳು ಹಾಗೂ ಯುವ ಸಂಘಟನೆಗಳು ಕೈಜೋಡಿಸಿ ನಡೆಯಲಿರುವ ಅಭಿಯಾನಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಕರೆ ನೀಡಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಾಣಂತಿ, ಮಗು ಸಾವು
ಈ ವೇಳೆ ರಾಯಚೂರು ಜಿಲ್ಲಾಧ್ಯಕ್ಷ ಡಾ. ವಾಸೀಮ್ ಅಹ್ಮದ್,
ಜಿಲ್ಲಾ ಕಾರ್ಯದರ್ಶಿ ಸಾದ್ ಮನಿಯಾರ್, ಸ್ಥಾನೀಯ ಅಧ್ಯಕ್ಷರು ಓವೈಸ ಅಹ್ಮದ್ ಸಜ್ಜಾದ, ಸಿಂಧನೂರು ಸ್ಥಾನೀಯ ಅಧ್ಯಕ್ಷರು ಅಬುಲೈಸ ನಾಯ್ಕ ,ಮೋಹಮ್ಮದ್ ನಾಸಿರ್, ಅನ್ಸರ್ ಖತೀಬ್, ಇನ್ನಿತರರು ಹಾಜರಿದ್ದರು.
