ಉಡುಪಿ ಜಿಲ್ಲೆಯ ಕಾರ್ಕಳದ ಕುಂಟಲ್ಪಾಡಿಯಲ್ಲಿ ಮದ್ಯರಾತ್ರಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪರೀಕ್ಷಿತ್ ಸಂಜೀವ್ ಗೌಡ ಬಂಧಿತ ಆರೋಪಿ. ನವೀನ್ ಪೂಜಾರಿ ಕೊಲೆಯಾದ ವ್ಯಕ್ತಿ.
ಆರೋಪಿಗೂ ಕೊಲೆಯಾದ ವ್ಯಕ್ತಿಗೂ ಪರಿಚಯ ಇತ್ತು. ಇಬ್ಬರೂ ವಿವಾಹಿತರಾಗಿದ್ದು ಬೇರೆ ಬೇರೆ ಕಾರಣಗಳಿಂದ ಪತ್ನಿಯೊಂದಿಗೆ ಮುನಿಸಿಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಈ ಮಧ್ಯೆ ಆರೋಪಿ ಪರೀಕ್ಷಿತ್ ಸಂಜೀವ್ ಗೌಡನ ಗೆಳತಿಯೊಂದಿಗೆ ಕೊಲೆಯಾದ ನವೀನ್ ಪೂಜಾರಿ ಪರಿಚಯ ಮಾಡಿಕೊಂಡಿದ್ದು ಇತ್ತೀಚೆಗೆ ಆತ್ಮೀಯತೆ ಬೆಳೆದಿದೆ. ಅವರಿಬ್ಬರು ಮತ್ತಷ್ಟು ಕ್ಲೋಸ್ ಆಗುತ್ತಿರುವುದನ್ನು ಸಹಿಸದ ಆರೋಪಿ ರಾತ್ರಿ ವೇಳೆ ಇರಿದು ಕೊಂದಿದ್ದಾನೆ.
ಈ ಸಂಬಂಧ ಸಾಕ್ಷ್ಯಗಳನ್ನು ಕಲೆಹಾಕಿ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದೇವೆ. ಸದ್ಯ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಉಡುಪಿ ಎಸ್ಪಿ ಹರಿರಾಂ ಶಂಕರ್ ಹೇಳಿದ್ದಾರೆ.