ದಕ್ಷಿಣ ಕನ್ನಡ | ಭೀಕರ ರಸ್ತೆ ಅಪಘಾತ, 5 ಮಂದಿ ಸ್ಥಳದಲ್ಲೇ ಸಾವು

Date:

Advertisements

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಹತ್ತಿರದ ತಲಪಾಡಿ ಟೋಲ್ ಗೇಟ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಕೆಸಿ ರೋಡ್‌ನಿಂದ ಬರುತ್ತಿದ್ದ ರಿಕ್ಷಾ ಮತ್ತು ಬಸ್ ಮಧ್ಯೆ ಅಪಘಾತ ನಡೆದಿದ್ದು, ರಿಕ್ಷಾದಲ್ಲಿದ್ದ ಕೆಸಿ ರೋಡ್ ಮೂಲದವರೆನ್ನಲಾದ ಐವರು ಮೃತಪಟ್ಟಿದ್ದಾರೆ.

ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು ಮಗು ಸೇರಿದೆ ಎನ್ನಲಾಗುತ್ತಿದೆ. ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಬಸ್ಸು ಕಾಸರಗೋಡಿನಿಂದ ಮಂಗಳೂರು ಬಸ್ ನಿಲ್ದಾಣಕ್ಕೆ ಬರುತ್ತಿತ್ತು. ಅಪಘಾತದ ರಭಸಕ್ಕೆ ಕಾಸರಗೋಡು ಕಡೆಗೆ ಮುಖಮಾಡಿ ನಿಂತಿದೆ‌‌. ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಕ್ಷಿಣ ಕನ್ನಡ | ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ ಆರೋಪ; ಹಿಂದು ಜಾಗರಣ ವೇದಿಕೆ ನಾಯಕ ಸಮಿತ್ ವಿರುದ್ಧ ಎಫ್‌ಐಆರ್

ಯುವತಿಯೊಬ್ಬರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರ ಯತ್ನಿಸಿ, ಕೊಲೆ ಬೆದರಿಕೆ...

ತಮಿಳುನಾಡು | ನಟ ವಿಜಯ್‌ ರ‍್ಯಾಲಿಯಲ್ಲಿ ಕಾಲ್ತುಳಿತ: 10 ಮಂದಿ ಸಾವು

ತಮಿಳುನಾಡಿನ ಕರೂರಿನಲ್ಲಿ ನಟ-ರಾಜಕೀಯ ಪಕ್ಷದ ನಾಯಕ ವಿಜಯ್ ಅವರ ತಮಿಳಗ ವೆಟ್ಟ್ರಿ...

ಪುತ್ತೂರು | ಬಿಜೆಪಿ ನಾಯಕನ ಪುತ್ರನಿಂದ ಅತ್ಯಾಚಾರ–ವಂಚನೆ ಪ್ರಕರಣ; ಡಿಎನ್‌ಎ ವರದಿ ಬೆಳಕಿಗೆ

ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿ, ಆಕೆ ಗರ್ಭಿಣಿಯಾದ ಬಳಿಕ ವಂಚಿಸಿದ...

ಮಂಗಳೂರು | ಕೊಂಕಣಿ ಭಾಷಾ ಮಂಡಳ್‌ನ ರಾಜ್ಯಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ ಆಯ್ಕೆ

ಕೊಂಕಣಿ ಭಾಷಿಗರ ಸಂಘಟನೆಯಾದ ಕರ್ನಾಟಕ ಕೊಂಕಣಿ ಭಾಷಾ ಮಂಡಳ್‌ನ ನೂತನ ಅಧ್ಯಕ್ಷರಾಗಿ...

Download Eedina App Android / iOS

X