ವಾಯು ಮಾಲಿನ್ಯ | ಭಾರತೀಯರ ಬದುಕುವ ಅವಧಿ ಕುಸಿತ!

Date:

Advertisements

ವಾಯು ಮಾಲಿನ್ಯವು ಭಾರತದಲ್ಲಿ ಸರಾಸರಿ ಜೀವಿತಾವಧಿಯನ್ನು 3.5 ವರ್ಷಗಳಷ್ಟು ಕಡಿಮೆ ಮಾಡುತ್ತಿದೆ. ಇದು ಮಕ್ಕಳ ಮತ್ತು ತಾಯಿಯ ಅಪೌಷ್ಟಿಕತೆಯ ಪರಿಣಾಮಕ್ಕಿಂತ ಸುಮಾರು ಎರಡು ಪಟ್ಟು, ಅಸುರಕ್ಷಿತ ನೀರು, ನೈರ್ಮಲ್ಯದ ಪ್ರಭಾವಕ್ಕಿಂತ ಐದು ಪಟ್ಟು ಅಧಿಕ ಎಂದು ಚಿಕಾಗೋ ವಿಶ್ವವಿದ್ಯಾಲಯದ(EPIC) ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ ನಡೆಸಿದ ಅಧ್ಯಯನವು ತಿಳಿಸಿದೆ.

ಮಕ್ಕಳ ಮತ್ತು ತಾಯಿಯ ಅಪೌಷ್ಟಿಕತೆಯು ಸರಾಸರಿ ಜೀವಿತಾವಧಿಯಲ್ಲಿ 1.6 ವರ್ಷಗಳನ್ನು ಕಡಿಮೆ ಮಾಡುತ್ತದೆ. ತಂಬಾಕು ಬಳಕೆ 1.5 ವರ್ಷಗಳು ಮತ್ತು ಅಸುರಕ್ಷಿತ ನೀರು, ನೈರ್ಮಲ್ಯ ಸುಮಾರು 8.4 ತಿಂಗಳುಗಳ ಜೀವಿತಾವಧಿ ಕಡಿಮೆಯಾಗಲು ಕಾರಣವಾಗುತ್ತದೆ ಎಂದು ಅಧ್ಯಯನವು ಹೇಳಿದೆ.

ಇದನ್ನು ಓದಿದ್ದೀರಾ? ಹರಿಯಾಣವನ್ನು ಕಾಡುತ್ತಿದೆ ಮಾಲಿನ್ಯ; ಆದರೂ, ಯಾಕೆ ಚುನಾವಣಾ ವಿಷಯವಾಗಿಲ್ಲ?

ವಾಯು ಗುಣಮಟ್ಟ ಜೀವನ ಸೂಚ್ಯಂಕದ (AQLI) ದತ್ತಾಂಶದ ಪ್ರಕಾರ ಉತ್ತರ ಭಾರತವು ವಿಶ್ವದ ಅತ್ಯಂತ ಕಲುಷಿತ ಪ್ರದೇಶವಾಗಿ ಉಳಿದಿದೆ. 544.4 ಮಿಲಿಯನ್ ಜನರು ಅಥವಾ ಭಾರತದ ಜನಸಂಖ್ಯೆಯ 38.9% ಜನರು ತೀವ್ರ ಮಾಲಿನ್ಯ ಪರಿಸ್ಥಿತಿ ಇರುವ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2023ರ ಡೇಟಾವನ್ನು ಆಧರಿಸಿ ವಿಶ್ಲೇಷಣೆ ಮಾಡಲಾಗಿದೆ.

ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ AQLI ದತ್ತಾಂಶದ ಪ್ರಕಾರ, ದೆಹಲಿ-NCR ನಿವಾಸಿಗಳು PM2.5 ಮಾಲಿನ್ಯದಿಂದಾಗಿ 8.2 ವರ್ಷಗಳ ಜೀವಿತಾವಧಿಯನ್ನು ಕಳೆದುಕೊಳ್ಳುತ್ತಾರೆ. ಬಿಹಾರ (5.6 ವರ್ಷಗಳು), ಹರಿಯಾಣ (5.3 ವರ್ಷಗಳು), ಮತ್ತು ಉತ್ತರ ಪ್ರದೇಶ (5 ವರ್ಷಗಳು) ನಂತರದ ಸ್ಥಾನಗಳಲ್ಲಿವೆ.

ಜನಸಂಖ್ಯೆಯ ಸುಮಾರು 46% ಜನರು ರಾಷ್ಟ್ರೀಯ ವಾರ್ಷಿಕ PM2.5 ಮಾನದಂಡವನ್ನು ಮೀರಿದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಕಣಗಳ ಸಾಂದ್ರತೆಯನ್ನು ಕಡಿಮೆ ಮಾಡುವುದರಿಂದ ಪ್ರದೇಶಗಳಲ್ಲಿ ವಾಸಿಸುವ ಜನರ ಜೀವಿತಾವಧಿಗೆ 1.5 ವರ್ಷಗಳನ್ನು ಸೇರಿಸಬಹುದು ಎಂದು ವಿಶ್ಲೇಷಣೆ ಹೇಳುತ್ತದೆ.

ಅತ್ಯಂತ ಸ್ವಚ್ಛ ಪ್ರದೇಶಗಳಲ್ಲಿಯೂ ಸಹ, ಮಾಲಿನ್ಯವನ್ನು ಆ ಮಟ್ಟಕ್ಕೆ ಇಳಿಸಿದರೆ ಜೀವಿತಾವಧಿ 9.4 ತಿಂಗಳು ಹೆಚ್ಚಾಗಬಹುದು. 2022ರಲ್ಲಿ ಸ್ವಲ್ಪ ಇಳಿಕೆದಿದ್ದ ಮಾಲಿನ್ಯವು ದಕ್ಷಿಣ ಏಷ್ಯಾದಲ್ಲಿ 2023ರಲ್ಲಿ 2.8% ರಷ್ಟು ಹೆಚ್ಚಾಗಿದೆ ಎಂದು ಅಧ್ಯಯನವು ವರದಿ ಮಾಡಿದೆ. ಈ ಪ್ರದೇಶವು ವಿಶ್ವದಲ್ಲೇ ಅತ್ಯಂತ ಕಲುಷಿತ ಪ್ರದೇಶವಾಗಿ ಉಳಿದಿದೆ, ಜೀವಿತಾವಧಿಯನ್ನು ಸರಾಸರಿ 3 ವರ್ಷಗಳಷ್ಟು ಮತ್ತು ಹೆಚ್ಚು ಪೀಡಿತ ಪ್ರದೇಶಗಳಲ್ಲಿ 8 ವರ್ಷಗಳಿಗಿಂತ ಹೆಚ್ಚು ಕಡಿಮೆಯಾಗುತ್ತದೆ ಎಂದು ವರದಿ ಉಲ್ಲೇಖಿಸಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರ್‌ಎಸ್‌ಎಸ್‌ನ ಕೈಗಳಿಗೆ ಮಹಾತ್ಮ ಗಾಂಧಿಯ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್‌

ಆರ್‌ಎಸ್‌ಎಸ್ ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ...

RSS ಕುರಿತ ₹100 ನಾಣ್ಯ & ಅಂಚೆ ಚೀಟಿ ಬಿಡುಗಡೆ, ಸಂವಿಧಾನಕ್ಕೆ ಎಸಗಿದ ಘೋರ ಅಪಚಾರ: ಸಿಪಿಐ(ಎಂ)

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ...

ಕರೂರ್ ದುರಂತ: 41 ಜನರ ಸಾವಿನ ನಂತರ ಟಿವಿಕೆ ರ‍್ಯಾಲಿ ತಾತ್ಕಾಲಿಕ ಸ್ಥಗಿತ

ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ನಾಯಕ ವಿಜಯ್ ಅವರು ಬುಧವಾರ ತಮ್ಮ...

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಶೇ. 3 ರಷ್ಟು ತುಟ್ಟಿಭತ್ಯೆ ಹೆಚ್ಚಳ; ಸಚಿವ ಸಂಪುಟ ಅನುಮೋದನೆ

ಕೇಂದ್ರ ಸಂಪುಟ ಬುಧವಾರ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು...

Download Eedina App Android / iOS

X