ಮಂಡ್ಯ ಜಿಲ್ಲೆಯಲ್ಲಿ ಹ್ಯಾಂಡ್ ಬಾಲ್ ಅಸೋಸಿಯೇಷನ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಹ್ಯಾಂಡ್‌ಬಾಲ್ ಅಸೋಸಿಯೇಷನ್ ನೇತೃತ್ವದಲ್ಲಿ ನಡೆದ 2025-26ನೇ ಸಾಲಿನ 39ನೇ ರಾಷ್ಟ್ರೀಯ ಸಬ್-ಜೂನಿಯರ್ ಬಾಲಕಿಯರ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಗಂಗಾವತಿಯ ಜಾಗೃತಿಗೆ ಬೆಳ್ಳಿ ಪದಕ ಪಡೆದು ಕೊಪ್ಪಳ ಜಿಲ್ಲೆಗೆ ಹೆಸರು ತಂದಿದ್ದಾಳೆ.
ಎವ್‌ಬಿಎಐ ಹಾಗೂ ಕೆಎಸ್‌ಎಚ್‌ಬಿಎ ಕ್ರೀಡಾಕೂಟದಲ್ಲಿ ದೇಶದ 27 ರಾಜ್ಯಗಳ ತಂಡಗಳು ಭಾಗವಹಿಸಿವೆ. ಕರ್ನಾಟಕವನ್ನು ಪ್ರತಿನಿಧಿಸಿದ ಗಂಗಾವತಿಯ ಸ್ವಾತಿ ಹಾಗೂ ರಾಮು ಅವರ ಪುತ್ರಿ ಜಾಗೃತಿ ಶ್ರೇಷ್ಠ ಪ್ರದರ್ಶನ ನೀಡಿ ತಂಡದೊಂದಿಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಜಾಗೃತಿಗೆ ಬೇತಲ್ ಶಿಕ್ಷಣ ಸಂಸ್ಥೆಯ ಯಮನೂರ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಹ್ಯಾಂಡ್ ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಮುಖ್ಯ ತರಬೇತುದಾರರಾಗಿ ಮಾರ್ಗದರ್ಶನ ನೀಡಿದ್ದಾರೆ. ರಾಜ್ಯ ಹಾಗೂ ಕೊಪ್ಪಳ ಜಿಲ್ಲೆಯ ಕೀರ್ತಿ ತಂದ ಮಗಳ ಯಶಸ್ಸು ಕಂಡು ತಾಯಿ-ತಂದೆ, ಶಾಲೆಯ ಶಿಕ್ಷಕರು ಹಾಗೂ ಸಹಪಾಠಿಗಳು ಹರ್ಷಿತರಾಗಿ ಜಾಗೃತಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಇದನ್ನೂ ಓದಿ: ಕೊಪ್ಪಳ | ಆಟೋ ಪಲ್ಟಿ : 65 ವರ್ಷದ ಮಹಿಳೆ ಸಾವು
ಈ ಸಾಧನೆಗಾಗಿ ಕೊಪ್ಪಳ ಜಿಲ್ಲಾ ಹ್ಯಾಂಡ್‌ಬಾಲ್ ಅಸೋಸಿಯೇಷನ್‌ನ ಅಧ್ಯಕ್ಷ ಕೆ ದುರ್ಗೇಶ್ ಹೊಸಕೇರಿ ಹಾಗೂ ಸದಸ್ಯರು ಜಾಗೃತಿಗೆ ಅಭಿನಂದನೆ ಸಲ್ಲಿಸಿದ್ದಾರೆ.