ಜೂಜಾಟ ಅಡ್ಡ ಮೇಲೆ ಪೊಲೀಸರ ದಾಳಿ ನಡೆಸಿದ ವೇಳೆ ಅವರಿಂದ ತಪ್ಪಿಸಿಕೊಳ್ಳಲು ಓಡಿ ಹೋದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹುಣಸಿಗಿ ತಾಲೂಕಿನ ವಜ್ಜಲ ಗ್ರಾಮದಲ್ಲಿ ನಡೆದಿದೆ.
ಮಹಾಂತೇಶ ಮಲ್ಲಣ್ಣ ಮಡಿವಾಳರ (35) ಮೃತರು. ಜೂಜಾಟ ಆಡುತ್ತಿದ್ದ ಬಗ್ಗೆ ಹುಣಸಗಿ ಠಾಣೆಯ ಪಿಎಸ್ಐ ರಾಹುಲ ಪಾವಡೆ ನೇತ್ರತ್ವದಲ್ಲಿ ಗ್ರಾಮದ ಕೊಂಡಮ್ಮಾಯಿ ದೇವಸ್ಥಾನದ ಬಳಿ ಜೂಜಾಟ ಅಡ್ಡ ಮೇಲೆ ಕಾರ್ಯಾಚರಣೆ ನಡೆಸಿದಾಗ ಅವರಿಂದ ತಪ್ಪಿಸಿಕೊಳ್ಳಲು ಓಡಿ ಹೋದಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದು ಮೃತರ ಕುಟುಂಬಸ್ಥರು, ಸಂಬಂಧಿಕರು ಪೊಲೀಸ್ ಠಾಣೆಯ ಎದುರು ಕೆಲ ಹೊತ್ತು ಪ್ರತಿಭಟನೆ’ ನಡೆಸಿದರು. ಹುಣಸಗಿ ಸಿಪಿಐ ರವಿಕುಮಾರ ಮನವರಿಕೆ ಮಾಡಿದರೂ ಕುಟುಂಬಸ್ಥರು ಪ್ರತಿಭಟನೆ ಕೈಬಿಡಲಿಲ್ಲ. ಬಳಿಕ ಸ್ಥಳಕ್ಕೆ ಡಿವೈಎಸ್ಪಿ ಜಾವೇದ್ ಇನಾಮದಾರ ಆಗಮಿಸಿ ತಿಳಿ ಹೇಳಿದ ಬಳಿಕ ಪ್ರತಿಭಟನೆ ಕೈ ಬಿಡಬಿಟ್ಟರು.
ಇದನ್ನೂ ಓದಿ : ಬೀದರ್ | ʼಕೈಗೆ ಬಂದ ತುತ್ತುʼ ಕಸಿದ ಅತಿವೃಷ್ಟಿ : ಬೆಳೆ ಪರಿಹಾರದ ನಿರೀಕ್ಷೆಯಲ್ಲಿ ರೈತರು!
ಮೃತನ ಪತ್ನಿ ವಿಜಯಲಕ್ಷ್ಮಿ ನೀಡಿದ ದೂರಿನಂತೆ ಹುಣಸಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐದು ಜನ ಬಂಧಿತ ಆರೋಪಿಗಳಿಂದ 77,210 ನಗದು ಹಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.