ಹುಣಸಗಿ

ಯಾದಗಿರಿ | ದಲಿತ ಐಕ್ಯತಾ ಸಮಾವೇಶಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಚಾಲನೆ: ಕರಪತ್ರ ಬಿಡುಗಡೆ

ದಲಿತ ಸಮುದಾಯದ ಹಕ್ಕುಗಳು, ಸ್ವಾಭಿಮಾನ ಮತ್ತು ಸಾಮಾಜಿಕ ಸಮಾನತೆಯ ಪರವಾದ ಹೋರಾಟವನ್ನು ಸಂಘಟಿತಗೊಳಿಸುವ ಉದ್ದೇಶದಿಂದ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ರಾಜ್ಯ ಸಮಿತಿಯು ಆಯೋಜಿಸಿರುವ ದಲಿತರ ಐಕ್ಯತಾ ಸಮಾವೇಶಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಸಮಾವೇಶದ ಕರಪತ್ರಗಳನ್ನು...

ಯಾದಗಿರಿ | ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಮೊರಾರ್ಜಿ ಶಾಲಾ ವಿದ್ಯಾರ್ಥಿಗಳ ಗೆಲುವು

ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರೌಢಶಾಲಾ ವಿಭಾಗದ ಬಾಲಕರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಹುಣಸಗಿ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಗೆಲುವು ಸಾಧಿಸಿ ವಿಭಾಗಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಶಾಲೆಯ ಕ್ರೀಡಾ...

ಯಾದಗಿರಿ | ಬರದ ಹೊಡೆತಕ್ಕೆ ಬೆಳೆ ನಷ್ಟ, ಸಾಲದ ಹೊರೆ; ರೈತ ಆತ್ಮಹತ್ಯೆ

ಮಳೆ ಕೈಕೊಟ್ಟು ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಹಿನ್ನೆಲೆಯಲ್ಲಿ ಸಾಲದ ಹೊರೆ ಹೆಚ್ಚಾಗಿ ಮನನೊಂದ ರೈತರೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸಗಿ ತಾಲೂಕಿನ ವ್ಯಾಪ್ತಿಯಲ್ಲಿ ವರದಿಯಾಗಿದೆ. ಯಡಹಳ್ಳಿ ಗ್ರಾಮದ ದೇವಿಂದ್ರಪ್ಪ ಕೃಷ್ಣಪ್ಪ...

ಯಾದಗಿರಿ | ಬಾಲ ಕಾರ್ಮಿಕರ ಬಳಕೆ ಕಂಡುಬಂದರೆ ಕಠಿಣ ಕ್ರಮ: ಪಿಎಸ್‌ಐ ರಾಹುಲ್ ಪವಾಡೆ ಎಚ್ಚರಿಕೆ

14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡು ದುಡಿಸಿಕೊಳ್ಳುವುದು ಕಾನೂನುಬಾಹಿರವಾಗಿದ್ದು, ಬಾಲ ಕಾರ್ಮಿಕರನ್ನು ಕೆಲಸಕ್ಕೆ ಬಳಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್‌ಐ ರಾಹುಲ್ ಪವಾಡೆ ಎಚ್ಚರಿಕೆ ನೀಡಿದರು. ಹುಣಸಗಿ ಪಟ್ಟಣದಲ್ಲಿ ಪೊಲೀಸ್‌...

ಯಾದಗಿರಿ | ಏಳೆಂಟು ತಿಂಗಳ ಬಳಿಕ ಕ್ರಮ: ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾದ ಇಬ್ಬರು ಶಿಕ್ಷಕರ ಅಮಾನತು

ಆರ್‌ಎಸ್‌ಎಸ್ ಪಥಸಂಚಲನ ಹಾಗೂ ಸಂಘಟನೆಯ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಸರ್ಕಾರಿ ಸೇವಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಹುಣಸಗಿ ತಾಲೂಕಿನ ಇಬ್ಬರು ಸರ್ಕಾರಿ ಶಿಕ್ಷಕರನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಯಾದಗಿರಿ ಡಿಡಿಪಿಐ...

ಯಾದಗಿರಿ | ವಿಚಾರಣೆಗೆ ಹೋದ ವ್ಯಕ್ತಿ ಸಾವು: ಪೊಲೀಸರ ವಿರುದ್ಧ ಕುಟುಂಬಸ್ಥರ ಗಂಭೀರ ಆರೋಪ

ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಾರಾಯಣಪುರ ಪೊಲೀಸ್ ಠಾಣೆಗೆ ವಿಚಾರಣೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಸೋಮವಾರ ಹುಣಸಗಿ ಕೊಡೇಕಲ್ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸ್ ಸಿಬ್ಬಂದಿಯ ಹಲ್ಲೆಯಿಂದಲೇ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು...

ಯಾದಗಿರಿ | ಸಾಲದ ಒತ್ತಡ; ಬೈಲಾಪುರ ತಾಂಡಾದ ವ್ಯಕ್ತಿ ಆತ್ಮಹತ್ಯೆ

ಖಾಸಗಿ ಫೈನಾನ್ಸ್ ಸಂಸ್ಥೆಗಳಿಂದ ಪಡೆದ ಸಾಲದ ಕಂತು ಪಾವತಿ ವಿಚಾರದಲ್ಲಿ ಉಂಟಾದ ಆರ್ಥಿಕ ಹಾಗೂ ಮಾನಸಿಕ ಒತ್ತಡದಿಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸಗಿ ತಾಲ್ಲೂಕಿನ ಬೈಲಾಪುರ ತಾಂಡಾದಲ್ಲಿ ನಡೆದಿದೆ. ತಾಂಡಾದ ನಿವಾಸಿ ಅನೀಲ...

ಯಾದಗಿರಿ | ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಹುಣಸಗಿ ಬಂದ್‌; ಎಡಗೈ ಸಮುದಾಯದಿಂದ ತೀವ್ರ ಪ್ರತಿಭಟನೆ

ಪರಿಶಿಷ್ಟ ಜಾತಿ ಒಳಗಿನ ಮಾದಿಗ ಸಮುದಾಯಕ್ಕೆ ಸಂಪೂರ್ಣ ಒಳಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಹಾಗೂ ನೇಮಕಾತಿಗಳಲ್ಲಿ ಒಳಮೀಸಲಾತಿ ಅನ್ವಯಿಸದೇ ಹುದ್ದೆಗಳನ್ನು ಭರ್ತಿ ಮಾಡುವ ಸರ್ಕಾರದ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿ ಬುಧವಾರ ಹುಣಸಗಿಯಲ್ಲಿ ಬಂದ್...

ಯಾದಗಿರಿ | ರೈತನ ಹೊಲದಲ್ಲಿ ಆಕಸ್ಮಿಕ ಬೆಂಕಿ: ಸ್ಪಿಂಕ್ಲರ್ ಪೈಪ್‌ಗಳು ಬೆಂಕಿಗಾಹುತಿ

ಹುಣಸಗಿ ತಾಲೂಕಿನ ಕಲ್ ದೇವನಹಳ್ಳಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ರೈತನ ಸಜ್ಜೆ ಬೆಳೆ ಹಾಗೂ ಸ್ಪಿಂಕ್ಲರ್ ಪೈಪುಗಳಿಗೆ ಹಾನಿಯಾಗಿರುವ ಘಟನೆ ನಡೆದಿದೆ. ಗ್ರಾಮದ ರೈತ ಎಲ್ಲಪ್ಪ ತಂದೆ ಚಂದಪ್ಪ ಛಲವಾದಿ...

ಯಾದಗಿರಿ | ಮಹಾನ್ ಯೋಗಿ ವೇಮನರ ಜಯಂತಿ ಆಚರಣೆ

ಮಹಾನ್ ಯೋಗಿ ವೇಮನರ ಜಯಂತಿಯನ್ನು ಹುಣಸಗಿ ತಾಲೂಕ ಆಡಳಿತದ ವತಿಯಿಂದ ಸೋಮವಾರ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಶಿರಸ್ತೇದಾರರಾದ ರಂಗಪ್ಪ ನಾಯಕ ಮಾತನಾಡಿ, 'ಯೋಗಿ ವೇಮನರ ಜೀವನ ಆದರ್ಶಗಳು...

ಯಾದಗಿರಿ | ದೇವಪ್ಪ ಅಬ್ಲಿ ಭಾರತೀಯ ಸೇನೆಗೆ ಆಯ್ಕೆ; ಗ್ರಾಮಸ್ಥರಿಂದ ಅದ್ದೂರಿ ಮೆರವಣಿಗೆ

ಹುಣಸಗಿ ತಾಲೂಕಿನ ಮಂಜಲಾಪುರಹಳ್ಳಿಯ ಯುವಕ ದೇವಪ್ಪ ಅಬ್ಲಿ ಭಾರತೀಯ ಸೇನೆಗೆ ಆಯ್ಕೆಯಾಗಿದ್ದು, ಗ್ರಾಮದಲ್ಲಿ ಹೆಮ್ಮೆ ಮತ್ತು ಸಂತಸದ ವಾತಾವರಣ ಮೂಡಿಸಿದೆ. ಬಡತನದ ನಡುವೆಯೂ ಗುರಿ ತಲುಪಿ ಸಾಧನೆ ಮಾಡಿರುವ ದೇವಪ್ಪ ಸ್ಥಳೀಯ ಯುವಕರಿಗೆ...

ಯಾದಗಿರಿ | ನಾಪತ್ತೆಯಾದವಳ ಮೃತದೇಹ ಕಾಲುವೆಯಲ್ಲಿ ಪತ್ತೆ

ನಾಪತ್ತೆಯಾದ ವಿದ್ಯಾರ್ಥಿನಿ ಶನಿವಾರ ಗೋಗಿ ಸಮೀಪದ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಮೃತರನ್ನು ಸೌಜನ್ಯ (18) ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಸೌಜನ್ಯ ಕಾಲೇಜು ವಿದ್ಯಾರ್ಥಿನಿ ದೀಪಾವಳಿ ಅಮಾವಾಸ್ಯೆ ದಿನ ಮನೆಯಿಂದ ನಾಪತ್ತೆಯಾಗಿದ್ದಳು....

ಈ ಹೊತ್ತಿನ ಪ್ರಮುಖ ಸುದ್ದಿ