ಹಾವು ಕಡಿತದಿಂದ ರೈತ ಸಾವನ್ನಪ್ಪಿದ ಘಟನೆ ದೇವದುರ್ಗ ತಾಲ್ಲೂಕಿನ ಅಮರಾಪುರ ಹೋಬಳಿ ವ್ಯಾಪ್ತಿಯ ನವಿಲಗುಡ್ಡ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೊನ್ನಪ್ಪ ಹನುಮಂತ್ರಾಯ (40) ಮೃತ ರೈತ ಎಂದು ಗುರುತಿಸಲಾಗಿದೆ. ಹೊಲದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಡಿದಿದೆ. ವಿಷ ಆವರಿಸಿದ ಪರಿಣಾಮ ಹೊನ್ನಪ್ಪ ತಲೆ ಸುತ್ತು ಬಿದ್ದು ಮೂರ್ಛೆ ಹೋಗಿದ್ದಾರೆ.
ತಕ್ಷಣ ಸಂಬಂಧಿಕರು ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಮೈಯಲ್ಲಿ ವಿಷ ಹೆಚ್ಚು ಆವರಿಸಿರುವುದರಿಂದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲು ವೈದ್ಯರು ಸಲಹೆ ನೀಡಿದರು. ಆದಾಗ್ಯೂ ಚಿಕಿತ್ಸೆ ಫಲಕಾರಿಯಾಗದೆ ಹೊನ್ನಪ್ಪ ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಸ್‌ಗಳ ಕೊರತೆಯಿಂದ ರಸ್ತೆ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ
ಮೃತ ಹೊನ್ನಪ್ಪ ಅವರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಗ್ರಾಮದ ಜನತೆ ದುಃಖ ವ್ಯಕ್ತಪಡಿಸಿದ್ದಾರೆ.
