ನಾವು ಒಟ್ಟಾಗಿ ವಸುದೈವ ಕುಟುಂಬಕಂ ಧ್ಯೇಯವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಾಕಷ್ಟು ಅಭಿವೃದ್ಧಿ ಹಾಗೂ ಪ್ರಗತಿಯನ್ನು ಸಾಧಿಸಬಹುದು ಎಂದು ಹಿರಿಯ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ ಅವರು ಅಭಿಪ್ರಾಯ ಪಟ್ಟರು.
ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದಲ್ಲಿ 77ನೇ ಸ್ವಾತಂತ್ಯ್ರೋತ್ಸವದದಲ್ಲಿ ಧ್ವಜಾರೋಹಣ ನೆರವೇರಿಸಿ ಎಲ್ಲರಿಗೂ ಶುಭಾಶಯ ಕೋರಿ, ಮಾತನಾಡುತ್ತಾ, ದೇಶದ ಸ್ವಾತಂತ್ಯ್ರಕ್ಕೋಸ್ಕರ ಹೋರಾಡಿದ ರಾಣಿ ಚೆನ್ನಮ್ಮಾ, ಸಂಗೊಳ್ಳಿ ರಾಯಣ್ಣ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ, ಸರ್ದಾರ್ ವಲ್ಲಭ ಬಾಯಿ ಪಟೇಲ್, ನೇತಾಜಿ ಸುಭಾಶ್ ಚಂದ್ರ ಬೋಸ್ ಹಲವರನ್ನು ಸ್ಮರಿಸಿದರು.
“ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯಗಳಿಗೆ ಪ್ರಾಧಾನ್ಯತೆ ಕೊಡುವುದರಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ಶಿಸ್ತು ಕಾಯ್ದುಕೊಳ್ಳಲು ಸಾಧ್ಯ. ಜನಸಂಖ್ಯೆ ಒಂದು ಶಾಪವೆಂದು ಪರಿಗಣಿಸದೆ ದುಡಿಯುವ ಕೈಗಳಿಗೆ ಉದ್ಯೋಗ ನೀಡಿದರೆ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ” ಎಂದರು.
ಮಕ್ಕಳಲ್ಲಿ ದೇಶಪ್ರೇಮ ಮೂಡಿಸಲು ಕರೆ ಕೊಟ್ಟರು. ಭಾರತದ ಹಿರಿಮೆ ಗರಿಮೆಯನ್ನು ವಿಸ್ತರಿಸಿ ಭಾರತ ವಿಶ್ವಗುರು ಆಗಲು ಶ್ರಮಿಸುವಂತೆ, ಸಂಕಲ್ಪ ತೊಡುವಂತೆ ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? 77 ವರ್ಷಗಳಿಂದ ಭಾರತ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ: ಸಭಾಪತಿ ಬಸವರಾಜ ಹೊರಟ್ಟಿ
ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಸಚಿನ ಶಂಕರ ಮಗದುಮ, ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ, ಅನಂತ ರಾಮನಾಥ ಹೆಗಡೆ, ಸಿ ಎಮ್ ಪೂನಚ್ಚ, ಜಿ ಬಸವರಾಜ, ರಾಮಚಂದ್ರ ಡಿ ಹುದ್ದಾರ, ಕೇಂದ್ರ ಸರ್ಕಾರದ ಸಾಲಿಸಿಟರ ಜನರಲ್, ರಾಜ್ಯ ಸರ್ಕಾರ ವಕೀಲರು ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ವಕೀಲರ ಸಂಘದ ಪದಾಧಿಕಾರಿಗಳು, ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಕ ಮಹಾ ವಿಲೇಖಾನಾಧಿಕಾರಿ ರೋಣ ವಾಸುದೇವ ಹಾಗೂ ಅಧಿಕ ಮಹಾ ವಿಲೇಖಾನಾಧಿಕಾರಿ (ನ್ಯಾಯಾಂಗ) ವೆಂಕಟೇಶ ಹುಲಗಿ ಇದ್ದರು.