ಗದಗ್‌ನ ರಹಮತ್ ನಗರದ ಬಳಿ ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ಹೊಂಡದಲ್ಲಿ ಬಿದ್ದು, ಮಂಗಳವಾರ ಸಾವನ್ನಪ್ಪಿದ್ದಾರೆ. ಮೃತ ಬಾಲಕರ ಕುಟುಂಬಸ್ಥರನ್ನು ಸಚಿವ ಎಚ್.ಕೆ ಪಾಟೀಲ್ ಭೇಟಿ ಮಾಡಿದ್ದು, ಸಾಂತ್ವನ ಹೇಳಿದ್ದಾರೆ.
ಜಾನುವಾರು ಮೇಯಿಸಲು ತೆರಳಿದ್ದ ಮೂವರು ಬಾಲಕರು ಕಾಲು ಜಾರಿ ಹೊಂಡದಲ್ಲಿ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋದ ಮಹಿಳೆಯೂ ನೀರಿಗೆ ಬಿದ್ದಿದ್ದಾರೆ. ಅವರ ಕೂಗಾಟ ಕೇಳಿ ಸಮೀಪವಿದ್ದವರೂ ರಕ್ಷಣೆಗೆ ಧಾವಿಸಿದ್ದಾರೆ. ಒಬ್ಬ ಬಾಲಕ ಮತ್ತು ಮಹಿಳೆಯನ್ನು ರಕ್ಷಿಸಿದ್ದಾರೆ. ಆದರೆ, ಇಬ್ಬರು ಬಾಲಕರು ಅಸುನೀಗಿದ್ದಾರೆ.