ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಾಪೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎರಡು ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ಭೂಮಿ ಪೂಜೆ ಕಾರ್ಯಕ್ರಮವನ್ನು ಶಾಸಕ ಅಶೋಕ ಪಟ್ಟಣ ಅವರು ನೆರವೇರಿಸಿದರು.
ಅಂದಾಜು ಮೊತ್ತ 24 ಲಕ್ಷ ರೂ. ಹಾಗೂ 14.45 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಎರಡು ಶಾಲಾ ಕೊಠಡಿಗಳ ನಿರಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಶೋಕ ಪಟ್ಟಣ ಅವರು, “ಶಾಲೆಗೆ ಅಗತ್ಯವಿರುವ ಗೇಟ್ ನಿರ್ಮಾಣ ಹಾಗೂ ಇತ್ತೀಚೆಗೆ ನಿರ್ಮಿಸಲಾದ ಕಾರ್ಯಕ್ರಮ ಭವನಕ್ಕೆ ಮೆಟ್ಟಿಲುಗಳನ್ನು ಕೂಡ ನಿರ್ಮಿಸಿ ಕೊಡಲಾಗುತ್ತದೆ,” ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ (SDMC) ಅಧ್ಯಕ್ಷರು, ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಾಲಾಪೂರ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಶಿಕ್ಷಕರಿಂದ ಶಾಲಾ ಅಭಿವೃದ್ಧಿ ಕಾರ್ಯ
ಸಾಲಾಪೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಕಲ್ಲುಗಳು ಹಾಗೂ ಗಿಡಗಂಟಿಗಳು ಬೆಳೆದು, ವಿಧ್ಯಾರ್ಥಿಗಳು ಪ್ರಾರ್ಥನೆ ಮಾಡಲು ಮತ್ತು ಆಟವಾಡಲು ತೊಂದರೆ ಅನುಭವಿಸುತ್ತಿದ್ದರು. ಈ ಪರಿಸ್ಥಿತಿಯನ್ನು ಗಮನಿಸಿದ ಶಿಕ್ಷಕರು ಗ್ರಾಮಸ್ಥರ ಸಹಕಾರದೊಂದಿಗೆ , ಸ್ವಂತ ಹಣದಲ್ಲಿ ಸುಮಾರು ₹35,000ರಿಂದ ₹40,000 ವೆಚ್ಚ ಮಾಡಿ ಜೆಸಿಬಿ ಮೂಲಕ ಮೈದಾನವನ್ನು ಸಮತಟ್ಟುಗೊಳಿಸಿದ್ದಾರೆ.
ಈ ಕಾರ್ಯಕ್ಕೆ ಗ್ರಾಮಸ್ಥರೂ ಕೈಜೋಡಿಸಿದ್ದು, ಈಗ ಶಾಲಾ ಮೈದಾನವು ಮಕ್ಕಳಿಗೆ ಓಡಾಡಲು, ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಹಾಗೂ ಪ್ರಾರ್ಥನೆ ಮಾಡಲು ಸುಗಮವಾಗಿದೆ.
ಶಿಕ್ಷಕರ ಸೇವಾಭಾವನೆಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದು, ಅವರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.