ಚಿನ್ನದ ಗಣಿಗೆ ಪ್ರಸಿದ್ಧವಾದ ಹಟ್ಟಿ ಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಟಾರ್ಚ್ ಬೆಳಕಿನಲ್ಲಿ ಹೆರಿಗೆ ನಡೆಸಬೇಕಾದ ದುಸ್ಥಿತಿ ಎದುರಾದ ಘಟನೆ ನಡೆದಿದೆ.
ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ವೇಳೆ ಗರ್ಭಿಣಿಯೋರ್ವರಿಗೆ ಪ್ರಸವ ವೇದನೆ ಕಾಣಿಸಿಕೊಂಡಿದ್ದು, ವೈದ್ಯರು ಹಾಗೂ ಸಿಬ್ಬಂದಿ ಟಾರ್ಚ್ ಹಿಡಿದು ಹೆರಿಗೆ ನೆರವೇರಿಸಬೇಕಾದ ದುಸ್ಥಿತಿ ಎದುರಾಯಿತು.
ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ಸಮಯದಲ್ಲಿ ಗರ್ಭಿಣಿ ಮಹಿಳೆಗೆ ಪ್ರಸವ ವೇದನೆ ಆರಂಭವಾಗಿತ್ತು. ತಕ್ಷಣ ಆಸ್ಪತ್ರೆ ತಲುಪಿದ ಆಕೆಗೆ ಕತ್ತಲಿನಲ್ಲೇ ವೈದ್ಯರು ಹಾಗೂ ಸಿಬ್ಬಂದಿ ತುರ್ತು ಪರಿಸ್ಥಿತಿಯಲ್ಲಿ ಟಾರ್ಚ್ ಹಿಡಿದು ಶಸ್ತ್ರಚಿಕಿತ್ಸೆ ನಡೆಸಿ, ಹೆರಿಗೆ ನೆರವೇರಿಸುವ ಪರಿಸ್ಥಿತಿ ನಿರ್ಮಾಣವಾಯಿತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹಾವು ಕಡಿತ : ರೈತ ಸಾವು
ಆಸ್ಪತ್ರೆಯಲ್ಲಿ ಸರಿಯಾದ ವಿದ್ಯುತ್ ವ್ಯವಸ್ಥೆಯೇ ಇಲ್ಲ. ವಿದ್ಯುತ್ ಹೋದರೆ ಪರ್ಯಾಯ ವ್ಯವಸ್ಥೆ ಇರಬೇಕು. ಚಿನ್ನದ ಗಣಿಯಲ್ಲಿ ಈ ರೀತಿ ಘಟನೆ ಆಗುತ್ತಿದೆ ಅಂದರೆ ಹೇಳಲು ಮುಜುಗರವಾಗುತ್ತಿದೆ,” ಎಂದು ಸ್ಥಳೀಯ ನಿವಾಸಿ ಲಾಲ್ ಪೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕಗೊಂಡಾಗ ಪರ್ಯಾಯವಾಗಿ ವ್ಯವಸ್ಥೆ ಯುಪಿಎಸ್ ಇದೆ. ಆದಿನ ಯುಪಿಎಸ್ ಕೆಟ್ಟ ಹೋಗಿದ್ದ ಕಾರಣ ಹಾಗೂ ಹೆರಿಗೆ ಸಮಯದಲ್ಲಿ ವಿದ್ಯುತ್ ಸಂಪರ್ಕಗೊಂಡ ಕಾರಣಕ್ಕೆ ಘಟನೆ ಆಗಿದೆ ಎಂದು ಆಸ್ಪತ್ರೆ ಸಿಬ್ಬಂದಿಯೋರ್ವರು ಮಾಹಿತಿ ನೀಡಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಸರ್ಕಾರಿ ಆಸ್ಪತ್ರೆಗೆ ಸೂಕ್ತವಾದ ವ್ಯವಸ್ಥೆ ಕಲ್ಪಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
