‌ರಾಜ್ಯಾದ್ಯಂತ ಬೀದಿನಾಯಿಗಳಿಂದ ಮಾರಣಾಂತಿಕ ದಾಳಿ: ಸುರಕ್ಷತೆ, ನಿಯಂತ್ರಣಕ್ಕೆ ನಾಗರಿಕರ ಆಗ್ರಹ

Date:

ಬಹುತೇಕ ಕಡೆ ಗುಂಪು ಗುಂಪಾಗಿ ಓಡಾಡುವ, ಮಲಗಿರುವ, ಕಚ್ಚಾಡುವ ಬೀದಿನಾಯಿಗಳು ಸರ್ವೇಸಾಮಾನ್ಯವಾಗಿ ಕಾಣಸಿಗುತ್ತವೆ. ಇದು ಕೇವಲ ದಾವಣಗೆರೆ, ಚಿತ್ರದುರ್ಗ ನಗರ ಹಾಗೂ ಜಿಲ್ಲೆಯ ಹಳ್ಳಿಗಳಲ್ಲಿ ಮಾತ್ರವಲ್ಲ ರಾಜ್ಯದ ಬಹುತೇಕ ಕಡೆ ಇದೇ ಸ್ಥಿತಿ ಇದ್ದು, ಮಕ್ಕಳು, ಒಂಟಿ ಮಹಿಳೆಯರು, ದನಗಳು, ಪಶುಗಳು ಬೀದಿನಾಯಿಗಳ ದಾಳಿಗೆ ಬಲಿಯಾಗಿ ತೀವ್ರ ಗಾಯಗೊಂಡ, ಮೃತಪಟ್ಟ ಘಟನೆಗಳು ಸಂಭವಿಸಿವೆ. ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಎಲ್ಲೆಡೆ ನಾಗರಿಕರ ಆಗ್ರಹ ಕೇಳಿಬಂದಿದೆ.

- Advertisement -

ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಲ್ಲಿ ನಿರಾತಂಕವಾಗಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಂಖ್ಯೆ ಮಿತಿಮೀರುತ್ತಿದೆ. ಸ್ಥಳೀಯ ಆಡಳಿತಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿವೆ. ಅಲ್ಲದೆ ದಾಳಿ ಕೂಡ ಹೆಚ್ಚುತ್ತಿದ್ದು, ಭಾನುವಾರ ಐವರ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾವಿನ ಕೋಟೆ ಮತ್ತು ಸಾಸ್ವೆಹಳ್ಳಿಯಲ್ಲಿ ನಡೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಮಾವಿನಕೋಟೆಯಲ್ಲಿ ಓರ್ವ ವೃದ್ಧ, ಮೂವರು ಮಕ್ಕಳು ಸೇರಿ ನಾಲ್ವರ ಮೇಲೆ ಹಾಗೂ ಸಾಸ್ವೆಹಳ್ಳಿಯ ಓರ್ವ ಬಾಲಕನ ಮೇಲೆ ನಾಯಿಗಳು ದಾಳಿ ಮಾಡಿವೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.‌

“ನಾಯಿ ದಾಳಿ ಹೆಚ್ಚುತ್ತಿದ್ದರೂ ಗ್ರಾಮ ಪಂಚಾಯಿತಿ ಪಿಡಿಒ, ಸಿಬ್ಬಂದಿ ಹಾಗೂ ಸದಸ್ಯರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಬೇಕಾಗುತ್ತದೆ” ಎಂದು ಮಾವಿನಕೋಟೆ ಗ್ರಾಮಸ್ಥರೊಬ್ಬರು ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದರು.

1002669490

ಮಾಂಸಾಹಾರಿಗಳಾಗಿ ಪರಿವರ್ತನೆಯಾಗುತ್ತಿರುವ ಬೀದಿ ನಾಯಿಗಳು;  

“ಮಾಂಸದ ಅಂಗಡಿಗಳು, ಮಾಂಸಾಹಾರ ಹೋಟೆಲ್, ಮೀನಿನ ಅಂಗಡಿ, ರಸ್ತೆ ಬದಿಯ ಕಬಾಬ್- ಬಿರಿಯಾನಿ ಅಂಗಡಿ, ಕಸದ ರಾಶಿಗಳ ಮುಂದೆ ಬೀಡುಬಿಟ್ಟಿರುವ ನಾಯಿಗಳು ನಿತ್ಯ ಮಾಂಸಾಹಾರಕ್ಕೆ ಒಗ್ಗಿಕೊಂಡು ಮಾಂಸಾಹಾರಿಗಳಾಗಿ ಪರಿವರ್ತನೆಯಾಗುವತ್ತ ಸಾಗುತ್ತಿವೆ.‌ ಅಲ್ಲಿಯೇ ಸುತ್ತಮುತ್ತ ಆವಾಸಸ್ಥಾನ ಮಾಡಿಕೊಂಡಿರುತ್ತವೆ. ಅಂಗಡಿಯವರೂ ಕೂಡ ಅಳಿದುಳಿದ ಆಹಾರ, ಮಾಂಸದ ತ್ಯಾಜ್ಯವನ್ನು ವಿಲೇವಾರಿ ತಲೆನೋವಿನಿಂದ ತಪ್ಪಿಸಿಕೊಳ್ಳಲು ನಾಯಿಗಳಿಗೆ ಹಾಕುವ ಘಟನೆ ಸರ್ವೇ ಸಾಮಾನ್ಯ.‌ ಏನಾದರೂ ಅಲ್ಲಿನ ತ್ಯಾಜ್ಯ ಸಿಗದಿದ್ದಾಗ ಆಹಾರ ಬೇಕಾದಾಗ ಸಾಮಾನ್ಯವಾಗಿ ಪಶುಗಳ, ಮನುಷ್ಯರ ಮೇಲೆ ಎರಗುವ ರೂಢಿ ಮಾಡಿಕೊಳ್ಳುತ್ತವೆ” ಎಂದು ಸಾರ್ವಜನಿಕರೊಬ್ಬರು ಕಳವಳ ವ್ಯಕ್ತಪಡಿಸಿದರು.

“ದಾವಣಗೆರೆಯಲ್ಲಿ ಬೀದಿನಾಯಿ ದಾಳಿಯ ಪ್ರಕರಣಗಳು ನಿರಂತರವಾಗಿ ದಾಖಲಾಗುತ್ತಿವೆ. ನಾಲ್ಕು ತಿಂಗಳ ಹಿಂದೆ ಶಾಸ್ತ್ರೀನಗರದ ನಿವಾಸಿ ಮೊಹಮ್ಮದ್ ಶಾಕೀರ್ ಅಲಿ ಮತ್ತು ಅತೀಹಾ ಖಾನಂ ದಂಪತಿಯ ಪುತ್ರಿ ಖದೀರಾ ಬಾನು(4) ನಾಯಿದಾಳಿಗೆ ತುತ್ತಾಗಿ ಗಂಭೀರವಾಗಿ ಗಾಯಗೊಂಡಿದ್ದಳು. ಬೀದಿನಾಯಿ ದಾಳಿಗೆ ಒಳಗಾಗಿ ಮುಖ ಮತ್ತು ಕೈಗೆ ತೀವ್ರ ಗಾಯಗಳಾಗಿದ್ದು, ರೇಬೀಸ್ ತಗುಲಿ ಬೆಂಗಳೂರಿನ ಆಸ್ಪತ್ರೆ ಸೇರಿ ನಾಲ್ಕಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಫಲಕಾರಿಯಾಗದೆ ಕಳೆದ ತಿಂಗಳು ಮೃತಪಟ್ಟಿದ್ದಳು.

1002670887

ದಾವಣಗೆರೆ ನಗರದ ನಿಟುವಳ್ಳಿ ಬಡಾವಣೆ ಬಳಿ ಖಾಲಿ ನಿವೇಶನವೊಂದರ ಬಳಿ ಸಣ್ಣ ಹಸುವೊಂದರ ಮೇಲೆ ದಾಳಿ ನಡೆಸಿದ್ದ ಬೀದಿನಾಯಿಗಳು ಹಸುವನ್ನು ಸಾಯಿಸಿ ಹೊಟ್ಟೆಯ ಭಾಗದ ಮಾಂಸವನ್ನು ಸಂಪೂರ್ಣವಾಗಿ ತಿಂದು ಹಾಕಿದ್ದವು.

ಹಲವಾರು ನಗರಗಳಲ್ಲಿ ಹೆಚ್ಚಾಗಿರುವ ಬೀದಿನಾಯಿಗಳನ್ನು ನಿಯಂತ್ರಿಸಲು ಪಾಲಿಕೆಗಳು ಹೆಣಗಾಡುತ್ತಿವೆ. ಈ ನಡುವೆ ಗ್ರಾಮೀಣ ಭಾಗದಲ್ಲಿಯೂ ನಾಯಿಗಳ ಹಾವಳಿ ಹೆಚ್ಚಾಗಿದ್ದು, ದಾವಣಗೆರೆ ಜಿಲ್ಲೆಯ ಗ್ರಾಮವೊಂದರಲ್ಲಿ ನಾಯಿಗಳ ದಾಳಿಯಿಂದ 15 ಕುರಿಗಳು ಸಾವನ್ನಪ್ಪಿವೆ. ಚನ್ನಗಿರಿ ತಾಲೂಕಿನ ಕಂಸಾಗರ ಗ್ರಾಮದಲ್ಲಿ ಕುರಿ ಹಿಂಡಿನ ಮೇಲೆ ಬೀದಿನಾಯಿಗಳು ದಾಳಿ ಮಾಡಿದ್ದವು. 15 ಕುರಿಗಳು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿದ್ದವು.

“ಮಂಡಕ್ಕಿ ಭಟ್ಟಿ, ಶಾಸ್ತ್ರೀನಗರದಲ್ಲೂ ಹಸುಗಳು, ಹಂದಿ ಸೇರಿದಂತೆ ಸಣ್ಣ ಸಣ್ಣ ಪ್ರಾಣಿಗಳ ಮೇಲೆ ದಾಳಿ ನೆಡೆಸಿ ಕೊಂದು ತಿನ್ನುತ್ತವೆ. ಮಕ್ಕಳು, ಮಹಿಳೆಯರು ದಾರಿಯಲ್ಲಿ ಓಡಾಡಲು ಭಯಪಡುವ ಸ್ಥಿತಿ ವಾತಾವರಣ ನಿರ್ಮಾಣವಾಗಿದೆ. ಕಾರ್ಪೊರೇಷನ್ ಮೆಂಬರ್, ಆಫೀಸರ್‌ಗಳಿಗೆ ತಿಳಿಸಿದರೂ ಏನೂ ಪ್ರಯೋಜನವಾಗಿಲ್ಲ. ಬೀದಿಯಲ್ಲಿ ಮನೆಗಳಿಗೆ ಹೋಗುವಾಗ ಇನ್ನೊಬ್ಬರ ಆಸರೆಯೊಂದಿಗೆ ಗುಂಪು ಗುಂಪಾಗಿ ಓಡಾಡುವ ಭಯದ ವಾತಾವರಣ ಸೃಷ್ಟಿಯಾಗಿದೆ” ಎಂದು ಉದ್ಯೋಗಕ್ಕಾಗಿ ಪ್ರತಿನಿತ್ಯ ಸಂಚರಿಸುವ ಮಂಡಕ್ಕಿ ಭಟ್ಟಿ ನಿವಾಸಿ ಸೋನು ಅಳಲು ತೋಡಿಕೊಂಡರು.

1002669491

ರಾಜ್ಯದಲ್ಲೂ ಅಲ್ಲಲ್ಲಿ ಬೀದಿ ನಾಯಿ ಹಾವಳಿ ಮುಂದುವರೆದಿದೆ.‌ ಮಹಿಳೆ ಮೇಲೆ ಬೀದಿನಾಯಿ ದಾಳಿ ಮಾಡಿದ ಘಟನೆ ಮೂರು ದಿನಗಳ ಹಿಂದೆ ತುಮಕೂರು ಜಿಲ್ಲೆಯ ಗುಬ್ಬಿ ನ್ಯಾಯಾಲಯದ ಆವರಣದಲ್ಲಿ ನಡೆಯಿತು. ಶೌಚಾಲಯದಿಂದ ಹೊರಬರುತ್ತಿದ್ದಂತೆ ಮಹಿಳೆಯ ಮೇಲೆರಗಿದ ನಾಯಿ, ಅವರ ಮುಖಕ್ಕೆ ಕಚ್ಚಿದೆ. ಬೀದಿನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿದ್ದ ಮಹಿಳೆ‌ಯನ್ನು ನೋಡಿದ ಸ್ಥಳದಲ್ಲಿದ್ದವರು ಆಕೆಯನ್ನು ರಕ್ಷಿಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದಷ್ಟೂ ಪದೇ ಪದೆ ದಾಳಿ ಮಾಡುತ್ತಿದ್ದ ನಾಯಿಯನ್ನು ಕಂಡ ಸ್ಥಳೀಯರು ರೊಚ್ಚಿಗೆದ್ದು ಹೊಡೆದು ಸಾಯಿಸಿದ್ದಾರೆ.

ಗಾಯಗೊಂಡು ನರಳುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಸ್ಥಳೀಯರು, ತಾಲೂಕು‌ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಿದ್ದಾರೆ.

“ಚಿತ್ರದುರ್ಗ ಜಿಲ್ಲೆಯಲ್ಲಿ ಕೂಡ ನಾಯಿ ಹಾವಳಿ ಹೆಚ್ಚಾಗಿದ್ದು, ಚಳ್ಳಕೆರೆಯಲ್ಲಿ ಕಳೆದ ತಿಂಗಳು ಎಂಟತ್ತು ಪ್ರಕರಣಗಳು ದಾಖಲಾಗಿವೆ. ಸ್ಥಳೀಯ ಸಂಸ್ಥೆಗಳು ಮತ್ತು ನಗರಾಡಳಿತ ಬೀದಿನಾಯಿಗಳ ನಿಯಂತ್ರಣಕ್ಕೆ ಮುಂದಾಗಬೇಕು” ಎಂದು ನಿವಾಸಿ ಮುರಳಿ ಒತ್ತಾಯಿಸಿದರು.

ದಾವಣಗೆರೆ ಜಿಲ್ಲಾಧಿಕಾರಿ ಜಿ ಎಂ ಗಂಗಾಧರಸ್ವಾಮಿ ಈ ಕುರಿತು ಸಭೆ ನಡೆಸಿದ್ದು, “ನಾಯಿಗಳು ಮಹಿಳೆ ಮತ್ತು ಮಕ್ಕಳ ಮೇಲೆ ದಾಳಿ ಮಾಡುವುದರ ನಿಯಂತ್ರಣಕ್ಕಾಗಿ ನಾಯಿಗಳು ಹೆಚ್ಚಾಗದಂತೆ ನಗರಾಭಿವೃದ್ಧಿ ಕೋಶ, ಮಹಾನಗರಪಾಲಿಕೆ ಸಂಬಂಧಿಸಿದ ಟೆಂಡರ್ ಮೂಲಕ ಸಂಸ್ಥೆಗಳನ್ನು ಗುರುತಿಸಿ ಎಲ್ಲ ನಾಯಿಗಳಿಗೆ ಪಶುಪಾಲನಾ ಸಹಯೋಗದೊಂದಿಗೆ ಸಂತಾನಹರಣ ಚಿಕಿತ್ಸೆ ಮತ್ತು ಸಂತತಿ ಹೆಚ್ಚಳವಾಗದಂತೆ ಲಸಿಕೆ ಹಾಕಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ನಾಯಿ ಕಚ್ಚಿದಾಗ ಲಸಿಕೆ ನೀಡಲು ಸಾರ್ವಜನಿಕರಿಗೆ ಸಹಾಯವಾಗುವಂತೆ 108 ಇಲ್ಲವೇ 1098 ಸಹಾಯವಾಣಿ ರಚನೆ ಮಾಡಿ, ಕರೆ ಬಂದ ಕೂಡಲೇ ಅವರ ಮನೆಗೆ ತೆರಳಿ ಚಿಕಿತ್ಸೆ ನೀಡಬೇಕು. ಜಿಲ್ಲೆಯಲ್ಲಿರುವ ಎಲ್ಲ ಬೀದಿನಾಯಿ, ಸಾಕುನಾಯಿಗಳಿಗೆ ರೇಬಿಸ್ ಲಸಿಕೆ ನೀಡಲು ಕ್ರಮಕೈಗೊಳ್ಳಬೇಕು” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಫೇಸ್ಬುಕ್ ನಲ್ಲಿ ಗಣೇಶ ವಿಸರ್ಜನೆಗೆ ಡಿಜೆ ಬಳಕೆ ಸುಳ್ಳು ಸುದ್ದಿ: ಪ್ರಕರಣ ದಾಖಲಿಸಿದ ಪೊಲೀಸರು

ಒಟ್ಟಿನಲ್ಲಿ ರಾಜ್ಯದ ಜನತೆ ಮೇಲೆ ಅಲ್ಲಲ್ಲಿ ಆಗುತ್ತಿರುವ ಬೀದಿನಾಯಿಗಳ ದಾಳಿಗಳಿಂದ ಮುಕ್ತರಾಗಬೇಕಿದೆ. ಇದಕ್ಕಾಗಿ ಸ್ಥಳೀಯ ಸಂಸ್ಥೆಗಳು, ಆಡಳಿತಗಳು ಸುರಕ್ಷತೆ ಕ್ರಮ ಕೈಗೊಳ್ಳಬೇಕು ಎನ್ನುವುದು ನಾಗರಿಕರು ಒತ್ತಾಯಿಸಿದರು.

WhatsApp Image 2025 11 17 at 5.21.38 PM
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಮನುಷ್ಯಕೇಂದ್ರಿತ ವೈಜ್ಞಾನಿಕ ಚಿಂತನೆ ಅತ್ಯಗತ್ಯ: ಡಾ. ರಾಜಪ್ಪ ದಳವಾಯಿ

ಮನುಷ್ಯನಿಗಿಂತ ಧರ್ಮ, ದೇವರು, ದೇವಾಲಯಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಮುಖ್ಯವಾಗುವ ಪರಿಸ್ಥಿತಿ...

ಹಾಸನ | ಭಗತ್ ಸಿಂಗ್ ಕೇವಲ ಕ್ರಾಂತಿಕಾರಿಯಲ್ಲದೆ ವೈಜ್ಞಾನಿಕ ಮನೋಭಾವ ಉಳ್ಳವರಾಗಿದ್ದರು: ಡಾ. ಎಚ್ ಆರ್ ಸ್ವಾಮಿ

ಭಗತ್ ಸಿಂಗ್ ಅವರನ್ನು ಕೇವಲ ಒಬ್ಬ ಕ್ರಾಂತಿಕಾರಿ ಅಥವಾ ಸ್ವಾತಂತ್ರ್ಯ ಹೋರಾಟಗಾರನಾಗಿ...