ಗದಗ | ಸೆಪ್ಟೆಂಬರ್ 15ರಿಂದ ಮೂರು ದಿನ ದ.ಸಂ.ಸ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರ: ಬಾಲರಾಜ ಅರಬರ

Date:

Advertisements

“ದಶಕಗಳಿಂದ ಹಿಂದುಳಿದಿರುವ ದಲಿತ ಸಮುದಾಯಗಳಿಗೆ ಸಮಾಜಿಕ ಅರಿವು ಮೂಡಿಸಲು ಸೆಪ್ಟೆಂಬರ 15ರಿಂದ 17ರ ವರೆಗೆ ಮೂರು ದಿನ ಬನ್ನೇರಘಟ್ಟ ಜಿಯಾಜಿಕಲ್ ಪಾರ್ಕನಲ್ಲಿ ದ.ಸಂ.ಸ. (ಅಂಬೇಡ್ಕರವಾದ) ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರ ಹಮ್ಮಿಕೊಳ್ಳಲಾಗಿದೆ” ಎಂದು ಡಿಎಸ್ಎಸ್ ಜಿಲ್ಲಾ ಸಂಚಾಲಕ ಬಾಲರಾಜ ಅರಬರ್ ತಿಳಿಸಿದರು.

ಗದಗ ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಪೂಜ್ಯ ಸಂಘರಖಿತ ಭಂತೆಜಿರವರು ಧಮ್ಮ ಧ್ವಜಾರೋಹಣ ಮಾಡುವರು,ದ.ಸಂ.ಸ. (ಅಂಬೇಡ್ಕರವಾದ) ಧ್ವಜಾರೋಹಣ ಸಿದ್ಧಪ್ಪ ಕಾಂಬಳೆ ರಾಜ್ಯ ಖಜಾಂಚಿ ಉದ್ಘಾಟಿಸುವರು. ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಾದ ಬಿ. ಕೃಷ್ಣಪ್ಪರವರ ಧರ್ಮಪತ್ನಿ ಇಂದಿರಾ ಕೃಷ್ಣಪ್ಪನವರು ಅಧ್ಯಯನ ಶಿಬಿರವನ್ನು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರವರು ವಹಿಸುವರು” ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

“ಕಳೆದ ಐದು ದಶಕಗಳಿಂದ ನಾಡಿನ ದಲಿತ, ದಮನಿತ ಸಮುದಾಯಗಳಲ್ಲಿ ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದ ಬದುಕಲು ಸಂವಿಧಾನಾತ್ಮಕ ಹಕ್ಕುಗಳಿಗೆ ದ.ಸಂ.ಸ ನಿರಂತರ ಚಳುವಳಿಯನ್ನು ರೂಪಿಸುತ್ತ ಬರುತ್ತಿದೆ. ಚಳುವಳಿಯನ್ನು ದೀರ್ಘಕಾಲಿಕವಾಗಿ ಮುನ್ನೆಡಸಲು ಕಾರ್ಯಕರ್ತರು, ಪದಾಧಿಕಾರಿಗಳು, ಬೌದ್ಧಿಕವಾಗಿ ಚಿಂತಿಸಲು ಸಾಮಾಜಿಕ, ಆರ್ಥಿಕ, ರಾಜಕೀಯ, ಬದಲಾವಣೆಗಳನ್ನು ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘಟಿಸುವ ವಿಚಾರಗಳನ್ನು ಸೂಕ್ಷ್ಮವಾಗಿ ಗ್ರಹಿಸಲು ಈ ರೀತಿಯ ಅಧ್ಯಯನ ಶಿಬಿರಗಳನ್ನು ದ.ಸಂ.ಸ. ನಿರಂತರವಾಗಿ ಆಯೋಜನೆ ಮಾಡುತ್ತಾ ಬರುತ್ತಿದೆ” ಎಂದರು.

“ಪ್ರಸ್ತುತ ದೇಶ ಜಾಗತೀಕರಣ ಸುಳಿಗೆ ಸಿಕ್ಕಿ ಖಾಸಗೀಕರಣ ಮತ್ತು ಉದಾರೀಕರಣದ ಬೆನ್ನೇರಿ ಬಡವರು ಬಹು ಆಯಾಮಗಳ ಬಡತನಕ್ಕೆ ಸಿಕ್ಕು ನರಳುತ್ತಿದ್ದಾರೆ. ಆಳುವ ಸರ್ಕಾರಗಳು ಪ್ರಭುತ್ವವನ್ನು ಘಟ್ಟಿಗೊಳಿಸಿಕೊಳ್ಳಲು ಹಸಿವು, ನಿರುದ್ಯೋಗ, ಶಿಕ್ಷಣ, ಮುಂತಾದ ವಿಚಾರಗಳನ್ನು ಮರೆಮಾಚಲು ಧರ್ಮಾಂಧರಿತ ಜನರನ್ನು ಮಾಡುವ ಕಾರ್ಯದಲ್ಲಿ ನಿರತವಾಗಿದೆ. ದೇಶದ ಕೆಲವೇ ಕೆಲವೇ ಶ್ರೀಮಂತರ ಖಜಾನೆಗಳು ಭರ್ತಿಯಾಗಿ ನವ ಕೋಟ್ಯಾಧಿಪತಿಗಳು ಸೃಷ್ಟಿಯಾಗುತ್ತಿರುವುದು. ಸಂವಿಧಾನದ ಆಶಯಗಳಿಗೆ ವಿರೋಧವಾಗಿದೆ” ಎಂದು ದೂರಿದರು.

“ಜಾತಿ ವಿನಾಶ, ಸಮಾಜಿಕ ಸಮಾನತೆಯ ಕನಸು ಕಂಡ ಸ್ವಾತಂತ್ರö್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ವ್ಯರ್ಥಗೊಳಿಸುತ್ತಿರುವುದು ದುರಂತವಾಗಿದೆ. ಇಂತಹ ವಿಸ್ಮಯ ಪರಿಸ್ಥಿತಿಯಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಲ್ಲಿ ಹೊಸ ಆಲೋಚನೆ ಕ್ರಮ ನಿಸ್ವಾರ್ಥ, ಹೋರಾಟಗಳನ್ನು ರೂಪಿಸಲು ಅರಿವು ಮೂಡಿಸುವ ಇಂತಹ ಶಿಬಿರಗಳನ್ನು ರಾಜ್ಯ ಸಮಿತಿಯವರು ಆಯೋಜಿಸಿದ್ದಾರೆ” ಎಂದು ಬಾಲರಾಜ ಅರಬರ ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರು ನಾಗರಾಜ ಗೋಕಾವಿ, ಮಾರುತಿ ಅಂಗಡಿ, ಮುತ್ತಪ್ಪ ಭಜಂತ್ರಿ, ಮಹಿಳಾ ಸಂಚಾಲಕರು ಪೂಜಾ ಬೇವೂರ, ರವಿಕುಮಾರ ನಿಡಗುಂದಿ, ಪ್ರವೀಣ ಮಾಡಳ್ಳಿ, ಸಂತೋಷ ಭಜಂತ್ರಿ, ಸಂತೋಷ ಬಣಕಾರ, ಹನಮಂತ ಕಿರಟಗೇರಿ, ಕುಮಾರ ಕಮತರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವಪರಿವರ್ತನೆ ಯಾತ್ರೆ: ಬಾಗಲಕೋಟೆಯಲ್ಲಿ ಚಾಲನೆ

ಯುವಜನರನ್ನು ರಾಜ್ಯದ ಅಭಿವೃದ್ಧಿಯತ್ತ ಚಿತ್ತಹರಿಸಲು, ಪ್ರಜೆಗಳ ಆರೋಗ್ಯ, ಶಿಕ್ಷಣ, ಸಬಲೀಕರಣ, ಉದ್ಯೋಗದ...

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ತುಮಕೂರು | ಗಾಂಧೀ ತತ್ವಗಳಿಗೆ ವಿಶ್ವ ಮನ್ನಣೆ : ಡಾ. ಜಿ.ಪರಮೇಶ್ವರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ...

Download Eedina App Android / iOS

X