‘ಪ್ಯಾಲೆಸ್ತೀನ್ ರಾಜ್ಯವೇ ಇರುವುದಿಲ್ಲ’: ಇಸ್ರೇಲ್‌ ಪ್ರಧಾನಿ ನೆತನ್ಯಾಹು ವಿನಾಶಕಾರಿ ಹೇಳಿಕೆ

Date:

ಪ್ಯಾಲೆಸ್ತೀನ್‌ನ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ತನ್ನ ವಸಾಹತುಗಳನ್ನು ವಿಸ್ತರಿಸುವ ದೀರ್ಘಕಾಲದ ಯೋಜನೆಯನ್ನು ಮುಂದುವರೆಸಲು ನಿರ್ಧರಿಸಿದೆ. ತನ್ನ ವಿಸ್ತರಣೆಯನ್ನು ಮುಂದುವರೆಸುವ ವಿವಾದಾತ್ಮಕ ‘ಇ1 ವಸಾಹತು ಯೋಜನೆ’ಗೆ ಸಹಿ ಹಾಕಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ‘ಪ್ಯಾಲೆಸ್ತೀನ್ ರಾಜ್ಯವೇ ಇರುವುದಿಲ್ಲ’ ಎಂದು ವಿನಾಶಕಾರಿ ಹೇಳಿರುವುದಾಗಿ ಟೈಮ್ಸ್‌ ಆಫ್‌ ಇಸ್ರೇಲ್ ವರದಿ ಮಾಡಿದೆ.

- Advertisement -

ಜೆರುಸಲೆಮ್‌ನಲ್ಲಿರುವ ಮಾಲೆ ಆ್ಯಡುಮಿನ್‌ ಇಸ್ರೇಲಿ ವಸಾಹತುವಿನಲ್ಲಿ ನಡೆದ ಸಮಾರಂಭದಲ್ಲಿ ನೆತನ್ಯಾಹು ಅವರು ಪ್ಯಾಲೆಸ್ತೀನ್ಅನ್ನು ನಿರ್ನಾಮ ಮಾಡುವ ಕ್ರೌರ್ಯದ ಮಾತುಗಳನ್ನಾಡಿದ್ದಾರೆ. “ನಾವು ಪ್ಯಾಲೆಸ್ತೀನ್‌ ರಾಜ್ಯ ಇರುವುದಿಲ್ಲ ಎಂಬ ನಮ್ಮ ಭರವಸೆಯನ್ನು ಈಡೇರಿಸಲಿದ್ದೇವೆ. ಈ ಸ್ಥಳವು ನಮಗೆ ಸೇರಿದೆ. ನಾವು ನಮ್ಮ ಪರಂಪರೆ, ನಮ್ಮ ಭೂಮಿ ಹಾಗೂ ನಮ್ಮ ಭದ್ರತೆಯನ್ನು ರಕ್ಷಿಸುತ್ತೇವೆ… ನಾವು ಮಾಲೆ ಆ್ಯಡುಮಿನ್‌ ನಗರದ ಜನಸಂಖ್ಯೆಯನ್ನು ದ್ವಿಗುಣಗೊಳಿಸಲಿದ್ದೇವೆ” ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಜೆರುಸಲೆಮ್ ಮತ್ತು ಮಾಲೆ ಅಡುಮಿಮ್ ನಡುವಿನ ಸುಮಾರು 12 ಚದರ ಕಿಲೋಮೀಟರ್ ಭೂಮಿಯನ್ನು ಇಸ್ರೇಲ್ ತೆಕ್ಕೆಗೆ ತೆಗೆದುಕೊಳ್ಳುವ ದುರುದ್ದೇಶವನ್ನು ಈ ವಿವಾದಾತ್ಮಕ, ಆಕ್ರಮಣಕಾರಿ ‘ಇ1 ವಸಾಹತು ಯೋಜನೆ’ ಒಳಗೊಂಡಿದೆ. ಈ ಯೋಜನೆಯು ಹಲವು ವರ್ಷಗಳಿಂದ ಅಂತರರಾಷ್ಟ್ರೀಯ ವಿರೋಧವನ್ನು ಎದುರಿಸುತ್ತಿದೆ. ಆದರೂ, ಯೋಜನೆಯನ್ನು ಕಾರ್ಯಗತಗೊಳಿಸುತ್ತೇವೆಂದು ನೆತನ್ಯಾಹು ಹೇಳುತ್ತಿದ್ದಾರೆ.

AFP ಪ್ರಕಾರ, ಈ ಸ್ಥಳವು ಪ್ಯಾಲೆಸ್ತೀನಿಯನ್ ಪ್ರದೇಶದ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗವನ್ನು ಒಳಗೊಂಡಿದೆ. ಈ ಪ್ರದೇಶವನ್ನು ಇಸ್ರೇಲ್ ಆಕ್ರಮಿಸಿಕೊಳ್ಳುವುದರಿಂದ ಪ್ಯಾಲೆಸ್ತೀನಿಯನ್ ಪಶ್ಚಿಮ ದಂಡೆಯನ್ನು ಪೂರ್ವ ಜೆರುಸಲೆಮ್‌ನಿಂದ ಬೇರ್ಪಡಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಪೂರ್ವ ಜೆರುಸಲೆಮ್ಅನ್ನು ಪ್ಯಾಲೆಸ್ತೀನಿಯರು ತಮ್ಮ ಭವಿಷ್ಯದ ರಾಜಧಾನಿಯಾಗಿ ನೋಡುತ್ತಿದ್ದಾರೆ.

2025ರ ಆಗಸ್ಟ್‌ನಲ್ಲಿ E1 ಯೋಜನೆಗೆ ಇಸ್ರೇಲ್ ಸರ್ಕಾರದಿಂದ ಅಂತಿಮ ಯೋಜನಾ ಅನುಮೋದನೆ ದೊರೆಯಿತು. ಅತಿಕ್ರಮಣ ಮತ್ತು ನಿರ್ಮಾಣಕ್ಕೆ ಅನುಮತಿ ನೀಡಿತು. ಈ ಯೋಜನೆಗೆ ಸೆಪ್ಟೆಂಬರ್ 11ರಂದು ಸಹಿ ಹಾಕುವ ಸಮಾರಂಭವು ನಡೆದಿದೆ. ಮುಂದಿನ ದಿನಗಳಲ್ಲಿ ಯೋಜಿತ ಪ್ರದೇಶದಲ್ಲಿ 3,412 ವಸತಿ ಘಟಕಗಳನ್ನು ನಿರ್ಮಾಣ ಮಾಡಲು ಇಸ್ರೇಲ್‌ ರಕ್ಷಣಾ ಸಚಿವಾಲಯದ ನಾಗರಿಕ ಆಡಳಿತವು ಯೋಜಿಸಿದೆ.

1967ರಿಂದ ಪ್ಯಾಲೆಸ್ತೀನಿಯನ್ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಅತಿಕ್ರಮಿಸಿಕೊಂಡಿರುವ ಎಲ್ಲ ಇಸ್ರೇಲಿ ವಸಾಹತುಗಳನ್ನು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ. ಈ ವಸಾಹತುಗಳು ಇಸ್ರೇಲಿ ಯೋಜನಾ ಅನುಮತಿಯನ್ನು ಹೊಂದಿದ್ದರೂ, ಅದನ್ನು ಇತರ ರಾಷ್ಟ್ರಗಳು ವಿರೋಧಿಸಿವೆ ಮತ್ತು ಆತಂಕ ವ್ಯಕ್ತಪಡಿಸಿವೆ. ಬ್ರಿಟನ್ ಮತ್ತು ಫ್ರಾನ್ಸ್ ಸೇರಿದಂತೆ ಹಲವಾರು ಸರ್ಕಾರಗಳು ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಭೆಯಲ್ಲಿ ಪ್ಯಾಲೆಸ್ತೀನ್ ರಾಜ್ಯವನ್ನು ಗುರುತಿಸಿ, ಗಡಿಯನ್ನು ಘೋಷಿಸುವ ತಯಾರಿ ನಡೆಸುತ್ತಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಜಾದಲ್ಲಿ ಮೃತರ ಸಂಖ್ಯೆ 74,000 ದಾಟಿದೆ: ಆರೋಗ್ಯ ಸಚಿವಾಲಯ

ಇಸ್ರೇಲ್ ನಡೆಸುತ್ತಿರುವ ದೀರ್ಘಕಾಲದ ಕ್ರೌರ್ಯದಿಂದಾಗಿ ಗಾಜಾ ಪಟ್ಟಿಯಲ್ಲಿ ಮೃತರ ಸಂಖ್ಯೆ 74,000...

ದಕ್ಷಿಣ ಆಫ್ರಿಕಾದ ಹಲವೆಡೆ ಸಾಮೂಹಿಕ ಗುಂಡಿನ ದಾಳಿ; 27 ಮಂದಿ ಭೀಕರ ಸಾವು

ದಕ್ಷಿಣ ಆಫ್ರಿಕಾದ ವಿವಿಧ ಪಟ್ಟಣಗಳಲ್ಲಿ ಭೀಕರ ಸಾಮೂಹಿಕ ಗುಂಡಿನ ದಾಳಿಗಳು ನಡೆದಿದ್ದು,...

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 11 ಮಂದಿ ಬಲಿ, 30 ಜನರಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ...

ಯುದ್ಧದಾಹಿ ಅಮೆರಿಕ: ಇರಾನ್‌ನ 7 ದಿನಗಳ ಕದನ ವಿರಾಮ ಪ್ರಸ್ತಾವಕ್ಕೆ ಟ್ರಂಪ್ ತಿರಸ್ಕಾರ

ಇರಾನ್‌ ಕದನ ವಿರಾಮಕ್ಕೆ ಮುಂದಿಟ್ಟಿರುವ 7 ದಿನಗಳ ಶಾಂತಿ ಪ್ರಸ್ತಾವವನ್ನು ಅಮೆರಿಕ...