ಮಂಡ್ಯ | ‘ಸ್ವರಾಜ್ ಉತ್ಸವ’ : ವಿಷಯಾಧಾರಿತ ಸಂವಾದ, ಚರ್ಚೆ, ಪ್ರದರ್ಶನ

Date:

Advertisements

ಮಂಡ್ಯ ಜಿಲ್ಲೆ, ಮೇಲುಕೋಟೆ ವಿಧಾನಸಭಾ ಕ್ಷೇತ್ರಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಇದೇ ಸೆಪ್ಟೆಂಬರ್ 13 (ನಾಳೆ. ಶನಿವಾರ) ರಂದು ‘ಸ್ವರಾಜ್ ಉತ್ಸವ‘ 12 ಅಂಶಗಳುಳ್ಳ ವಿಷಯಾಧಾರಿತ ಸಂವಾದ, ಚರ್ಚೆ, ಪ್ರದರ್ಶನ ನಡೆಯಲಿದೆ. ಗ್ರಾಮಗಳನ್ನು ಸ್ವಾವಲಂಬಿಯನ್ನಾಗಿಸಬೇಕು ಎಂಬುದು ರೈತ ನಾಯಕ ದಿವಂಗತ ಕೆ.ಎಸ್. ಪುಟ್ಟಣ್ಣಯ್ಯನವರ ಕನಸು. ಅದನ್ನು ಸಾಕಾರಗೊಳಿಸುವ ಗುರಿಯನಿಟ್ಟುಕೊಂಡು ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಮಹತ್ತರದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಕಾರ್ಯಕ್ರಮದ ಮೂಲ ಆಶಯ ಗಾಂಧೀಜಿಯವರ ಸ್ವರಾಜ್ಯ ಪರಿಕಲ್ಪನೆ. ಜೊತೆಗೆ, ಗ್ರಾಮೀಣ ಜನರ ಜೀವನ ಮಟ್ಟವನ್ನು ಸುಧಾರಿಸಲು ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಪ್ರೋತ್ಸಾಹಿಸುವುದು. ಈ ನಿಟ್ಟಿನಲ್ಲಿ ಬಡ ಜನರು ಆರ್ಥಿಕವಾಗಿ ಶಕ್ತಿವಂತರನ್ನಾಗಿ ಮಾಡುವ ಉದ್ದೇಶದಿಂದ ಸರಿ ಸುಮಾರು 30 ಸಂಘ ಸಂಸ್ಥೆಗಳು ಕೈಜೋಡಿಸುವ ಮೂಲಕ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲಲಿವೆ.

ಮೊಬೈಲ್ ಆ್ಯಪ್ ಮೂಲಕ ಸಾರ್ವಜನಿಕರ ಅಹವಾಲು, ಸಮಸ್ಯೆಗಳನ್ನು ಸ್ವೀಕರಿಸಿ, ಸಂಬಂಧಪಟ್ಟ ಅಧಿಕಾರಿ, ಇಲಾಖೆಗೆ ನೇರವಾಗಿ ವರ್ಗಾಯಿಸುವ ವಿನೂತನ ಕಾರ್ಯಕ್ರಮ ಇದಾಗಿದ್ದು ಹತ್ತಾರು ಸಾವಿರ ಜನ ಸೇರುವ ನಿರೀಕ್ಷೆಯಿದೆ. ಕಾರ್ಯಕ್ರಮಕ್ಕೆ ವ್ಯಾಪಾಕವಾದ ಬೆಂಬಲವು ಸಹ ವ್ಯಕ್ತವಾಗುತ್ತಿದೆ. ಬೆಳಗ್ಗೆ 10 ರಿಂದ ಸಂಜೆ 5 ರ ತನಕ ಕಾರ್ಯಕ್ರಮ ನಡೆಯಲಿದೆ.

24214

‘ನಮ್ಮ ಹಳ್ಳಿ-ನಮ್ಮ ಹೆಮ್ಮೆ, ನಮ್ಮ ಬದುಕು ಹಳ್ಳಿ ಕಡೆಗೆ’ ಘೋಷಾವಾಕ್ಯದೊಂದಿಗೆ ‘ಸ್ವರಾಜ್ ಉತ್ಸವ’ವನ್ನು ಪುಟ್ಟಣ್ಣಯ್ಯ ಫೌಂಡೇಷನ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಜಂಟಿಯಾಗಿ ಹಳ್ಳಿಗಳ ಪ್ರಗತಿ, ಸಮಗ್ರ ಬೆಳವಣಿಗೆಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

ಪ್ರಮುಖವಾಗಿ “ಅರಣ್ಯ, ಸರೋವರ, ಗೋಮಾಳ ಮತ್ತು ಜೀವವೈವಿದ್ಯವನ್ನು ಕಾಪಾಡಲು ಸಮುದಾಯದೊಂದಿಗೆ ಸೇರಿ ‘ಪರಿಸರ’ ಸಮತೋಲನ ಗೊಳಿಸುವ ಮಾರ್ಗಗಳ ಕುರಿತಾಗಿ ಚರ್ಚೆ ನಡೆಯಲಿದೆ. ವನ್ಯಜೀವಿ-ಮಾನವ ಸಂಘರ್ಷ, ಬೆಳೆಹಾನಿ ಎಲ್ಲದರ ಸುತ್ತ ಅವಲೋಕನ ನಡೆಯಲಿದೆ”.

24224

“ಈ ಉತ್ಸವದಲ್ಲಿ ಸ್ಥಳೀಯ ‘ಆಡಳಿತ’ ಸಂಸ್ಥೆಯಾದ ಗ್ರಾಮ ಪಂಚಾಯತಿಯ ಕಾರ್ಯ ವಿಧಾನವನ್ನು ಸುಧಾರಿಸುವುದು ಸೇರಿದಂತೆ ಆಡಳಿತ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಮುನ್ನಡೆಸಲು ಮತ್ತು ಸಬಲೀಕರಿಸಲು ಪ್ರಯತ್ನಗಳು ನಡೆಯಲಿವೆ”.

“ಕಾರ್ಯಕ್ರಮದಲ್ಲಿ ‘ಯುವಜನ ಉದ್ಯಮಶೀಲತೆ’ ಭಾಗವಾಗಿ ಸ್ಮಾರ್ಟ್ ಆಪ್ ಗಳು, ತಂತ್ರಜ್ಞಾನ ಮತ್ತು ನಾಯಕತ್ವ ಉತ್ತೇಜಿಸುವ ಮೂಲಕ ಸ್ಥಳೀಯ ಸವಾಲುಗಳನ್ನು ಪರಿಹರಿಸಲು ಮತ್ತು ಸಮುದಾಯ ನೆಲೆಗೊಂಡ ಉದ್ಯಮಗಳನ್ನು ನಿರ್ಮಿಸುವ ಮೂಲಕ ಯುವ ಜನರನ್ನು ಸಶಕ್ತಗೊಳಿಸಲಾಗುವುದು”.

24232

“ಒಳ್ಳೆಯ ‘ಆರೋಗ್ಯ’ವು ಸ್ವಾವಲಂಬನೆಯ ಮೂಲಧಾರವಾಗಿರುವುದರಿಂದ ಈ ಉತ್ಸವವು ಗ್ರಾಮೀಣ ಆರೋಗ್ಯ ವ್ಯವಸ್ಥೆಗಳು ತಾಯಿ-ಮಗುವಿನ ಪೌಷ್ಟಿಕತೆ ಮತ್ತು ಆರೋಗ್ಯ ಸೇವೆ ಮತ್ತು ಸೌಲಭ್ಯಗಳ ಅಗತ್ಯತೆ ಹಾಗೂ ಲಭ್ಯತೆಯ ಬಗ್ಗೆ ಜಾಗೃತಿ ಮೂಡಿಸಲಾಗುವುದಾಗಿದೆ”.

“ಸ್ವರಾಜ್ ಉತ್ಸವದಲ್ಲಿ ಶುಚಿತ್ವಕ್ಕೆ ಮಹತ್ವ ನೀಡಿದ್ದು ‘ತ್ಯಾಜ್ಯ’ (ನಿರ್ವಹಣೆ)ವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸಬಹುದು ಎಂದು ತಿಳಿಸುವುದರ ಜೊತೆ ಜೊತೆಗೆ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಿ ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸುವ ವಲಯ ಆರ್ಥಿಕತೆಯ ಮಾದರಿಗಳನ್ನು ಉತ್ತೇಜಿಸಲಾಗುವುದು”.

24243

“ಹವಾಮಾನ ವೈಪರೀತ್ಯದಿಂದ ‘ಕೃಷಿ’ಗೆ ಎದುರಾಗಿರುವ ಸವಾಲುಗಳು ಮಾರುಕಟ್ಟೆಯ ಸಮಸ್ಯೆಗಳ ಜೊತೆಗೆ ಸಾಂಪ್ರದಾಯಿಕ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ಮಾದರಿಗಳನ್ನ ಪ್ರದರ್ಶಿಸಲಾಗುವುದು. ಜೊತೆಗೆ, ತಜ್ಞರೊಂದಿಗೆ ಸಂವಾದ ಮತ್ತು ಪ್ರಾತ್ಯಕ್ಷಿಕೆಗಳು ಮೂಡಿಬರಲಿವೆ”.

“ಗ್ರಾಮಗಳು ಮತ್ತು ಪಟ್ಟಣಗಳ ಜನರ ಹಾಗೂ ಪರಿಸರವನ್ನು ಗಮನದಲ್ಲಿರಿಸಿಕೊಂಡು ಸೂಕ್ತ ಯೋಜನೆ ಸುಸ್ಥಿರ ಮೂಲಸೌಕರ್ಯ ಮತ್ತು ಆಧುನಿಕ ಅಗತ್ಯತೆಗಳನ್ನು ವಿನ್ಯಾಸಗೊಳಿಸುವ ವಿಧಾನಗಳ ಮೇಲೆ ಕೇಂದ್ರೀಕರಿಸಿ, ವಾಯುಮಾಲಿನ್ಯ, ಕುಡಿಯುವ ನೀರು ಕಲ್ಮಶಗೊಳ್ಳುತ್ತಿರುವುದು, ಹವಾಮಾನ ವೈಪರಿತ್ಯ, ಜಾಗತಿಕ ತಾಪಮಾನದ ಏರಿಳಿತ ಒಟ್ಟಾರೆ ವಿಚಾರಗಳು ಒಳಗೊಂಡಿವೆ”.

24242

“ಬದಲಾಗುತ್ತಿರುವ ಜಗತ್ತಿನ ಕಲಿಕಾ ಮಾದರಿಯಲ್ಲಿ ಮಕ್ಕಳನ್ನು ಸಿದ್ಧಗೊಳಿಸುವ ಸಮಗ್ರ ‘ಶಿಕ್ಷಣ’ದ ನವೀನ ಸಾಧ್ಯತೆಗಳ ಕುರಿತು, ಶಿಕ್ಷಣದಲ್ಲಿ ಎಐ (ಆರ್ಟಿಫಿಸಿಲ್ ಇಂಟೆಲಿಜೆಂನ್ಸ್) ಮಾಧರಿಯನ್ನು ಅಳವಡಿಸುವ ಕುರಿತಾಗಿ ಚರ್ಚೆ ಒಳಗೊಂಡಿದೆ”.

“ನಮ್ಮ ಸಂಸ್ಕೃತಿ ಮತ್ತು ಪರಿಸರವನ್ನು ಕಾಪಾಡುವ ಸುಸ್ಥಿರ ‘ಪ್ರವಾಸೋಧ್ಯಮ’ ಮಾದರಿಗಳ ಮೂಲಕ ಜೀವನೋಪಾಯವನ್ನು ಸೃಷ್ಟಿಸುವ ಮಾದರಿಗಳನ್ನು ಪರಿಚಯಿಸುವ, ಅಳವಡಿಸಿಕೊಂಡು ನಿರ್ವಹಣೆ ಮಾಡುವ ವಿಚಾರಗಳ ವಿನಿಮಯವಾಗಲಿದೆ”.

24213

“ಸಮಾಜದಲ್ಲಿ ‘ಲಿಂಗ ಸಮಾನತೆ’ಗೆ ಒತ್ತು ನೀಡಲಾಗುವುದು. ಮಹಿಳೆಯರು ಆರ್ಥಿಕ ಸ್ವಾತಂತ್ರ್ಯ ಪಡೆಯಲು ಮತ್ತು ನಾಯಕತ್ವ ಗುಣಗಳನ್ನು ಸಶಕ್ತಗೊಳಿಸಿ ಕುಟುಂಬ, ಸಮುದಾಯವನ್ನು ಮುನ್ನಡೆಸುವ ಅವಕಾಶಗಳನ್ನು ಪರಿಚಯಿಸಲಾಗುವುದು”.

ಸುನೀತಾ ಪುಟ್ಟಣ್ಣಯ್ಯ ಅವರು ಕಾರ್ಯಕ್ರಮದ ಕುರಿತಾಗಿ “ಸ್ವರಾಜ್ ಉತ್ಸವದ ಮೂಲ ಉದ್ದೇಶ ಪ್ರತಿಯೊಬ್ಬರಿಗೂ ಉದ್ಯೋಗಗಳನ್ನು ಸೃಷ್ಟಿಸುವುದು. ಇದರಿಂದ ಸ್ವಾವಲಂಬಿ ಜೀವನ ನಡೆಸಬಹುದು. ಇಲ್ಲದೆ ಇದ್ದಲ್ಲಿ ಹಳ್ಳಿ ತೊರೆಯುವ, ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ. ಆದುದರಿಂದ, ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಪಕ್ಷಾತೀತವಾಗಿ ಪಾಲ್ಗೊಳ್ಳಬೇಕು” ಎಂದಿದ್ದಾರೆ.

ಈ ವಿಡಿಯೋ ವೀಕ್ಷಿಸಿದ್ದೀರಾ?https://www.youtube.com/watch?v=A4kqUxXWMIw

ಕರ್ನಾಟಕ ರಾಜ್ಯ ರೈತ ಸಂಘದ ಮಂಡ್ಯ ಜಿಲ್ಲಾಧ್ಯಕ್ಷರಾದ ಕೆಂಪೂಗೌಡ ಅವರು “ಜನಪರ ಕಾಳಜಿ ಹೊಂದಿರುವ, ಕ್ಷೇತ್ರದ ಅಭಿವೃದ್ಧಿಗೆ ಮುಂದಾಲೋಚನೆ ಹೊಂದಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಗ್ರಾಮಾಂತರ ಪ್ರದೇಶಕ್ಕೆ ಅನುಕೂಲ ಆಗುವಂತಹ ನಿಟ್ಟಿನಲ್ಲಿ, ಅಭಿವೃದ್ಧಿ ಪಡಿಸುವ ಚಿಂತನೆಯಲ್ಲಿ ಸ್ವರಾಜ್ ಉತ್ಸವ ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಹಲವಾರು ಸಂಘ ಸಂಸ್ಥೆಗಳು, ಎನ್ ಜಿ ಓ ಗಳು ಆಗಮಿಸುತ್ತಿವೆ. ಕಾರ್ಯಕ್ರಮದಲ್ಲಿ ಜನರಿಗೆ ಉತ್ತಮವಾದ ತಿಳುವಳಿಕೆ ದೊರೆಯಲಿದ್ದು ಜಿಲ್ಲೆಯ, ತಾಲ್ಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?ಮಂಡ್ಯ | ಸೆ.13ಕ್ಕೆ ‘ಸ್ವರಾಜ್ ಉತ್ಸವ’ : ಶಾಸಕ ದರ್ಶನ್ ಪುಟ್ಟಣ್ಣಯ್ಯ

ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಪತ್ರಿಕಾ ಸಂದರ್ಶನದಲ್ಲಿ “ಮಹಾತ್ಮ ಗಾಂಧೀಜಿಯವರ ಸ್ವರಾಜ್ಯದ ಕಲ್ಪನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನಕ್ಕೆ ಮುಂದಾಗಿದ್ದೇವೆ. ‘ಸ್ವರಾಜ್ ಉತ್ಸವ’ ಹೆಸರಿನಲ್ಲಿ ನಡೆಯುತ್ತಿರುವ ಈ ಪ್ರಯತ್ನ ಕೇವಲ ಕಾರ್ಯಕ್ರಮವಲ್ಲ. ಇದು ನೂತನ ಆಲೋಚನೆಗಳು, ಆವಿಷ್ಕಾರಗಳು ಮತ್ತು ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳುವ ಸಮ್ಮೇಳನ. ಈ ಮೂಲಕ ಹೊಸ ದಾರಿಯನ್ನು ತೋರಿಸಲಿವೆ. ಇದು ಸ್ವಾವಲಂಬಿ ಗ್ರಾಮಗಳತ್ತ ಇಡುತ್ತಿರುವ ಕ್ರಾಂತಿಕಾರಿಕ ಹೆಜ್ಜೆ” ಎಂದು ತಿಳಿಸಿದ್ದಾರೆ.

WhatsApp Image 2025 02 05 at 18.09.20
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

Download Eedina App Android / iOS

X