ಧಾರವಾಡ ಜಿಲ್ಲೆಯ ಕುಂದಗೋಳ ಮತಕ್ಷೇತ್ರದಲ್ಲಿಯ ಹೊಸ ಕಾಮಗಾರಿಗಳ ಆರಂಭ ಮತ್ತು ನೂತನ ಕಟ್ಟಡಗಳ ಉದ್ಘಾಟನೆಯಲ್ಲಿ ಭಾಗವಹಿಸಿ, ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಎಂ.ಆರ್. ಪಾಟೀಲ್ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ವೇಳೆ ತಾಲೂಕಿನ ರಾಯನಾಳ ಗ್ರಾಮದ ಕಲಗನಮಡ್ಡಿಯಲ್ಲಿ ಕೇಂದ್ರ ಸರ್ಕಾರದ ಎನ್‌ಟಿಪಿಸಿ, ಸಿಎಸ್‌ಆರ್ ಯೋಜನೆಯಡಿ ನಿರ್ಮಿಸಲಾದ 31.40 ಲಕ್ಷ ರೂಪಾಯಿ ವೆಚ್ಚದ 2 ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು. ಜೊತೆಗೆ ಗ್ರಾಮದಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಕುಂದಗೋಳ ಕ್ಷೇತ್ರದಲ್ಲಿ ಮಂಡಲಾಧ್ಯಕ್ಷ ಷಣ್ಮುಖ ಐಹೊಳೆ, ಗ್ರಾಮ ಪಂಚಾಯತ್ ಅಧ್ಯಕ್ಷ ರ.ಜಿ.ಮೇಟಿ, ಉಪಾಧ್ಯಕ್ಷ ಮಾರಡಗಿ, ಮುಖಂಡರಾದ ನಿಂಗನಗೌಡ ಮರಿಗೌಡ್ರ, ಸಹದೇವ್ ಮಲಗಿ, ಮಾಲತೇಶ್ ಶ್ಯಾಗೋಟಿ, ಟಿ.ಜಿ. ಬಾಲಣ್ಣವರ್, ಪ್ರತಾಪ್ ಪಾಟೀಲ್, ನಾಗಲಿಂಗ್ ಪೂಜಾರ್, ಶಿಕ್ಷಕರು ಹಾಗೂ ಗ್ರಾಮದ ಮುಖಂಡರಿದ್ದರು.
ನಂತರ ಹುಬ್ಬಳ್ಳಿ ಮಂಡಲದ ಪರಸಾಪೂರ ಗ್ರಾಮದಲ್ಲಿ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನಿರ್ಮಾಣವಾಗಲಿರುವ ಗ್ರಾಮದೇವಿ ದೇವಸ್ಥಾನದ ಭೂಮಿ ಪೂಜೆ ನಡೆಸಿದರು. ಈ ವೇಳೆ ಈರಣ್ಣ ಜಡಿ, ಟಿ.ಜಿ. ಬಾಲಣ್ಣವರ್, ಮಾಲತೇಶ ಶ್ಯಾಗೋಟಿ, ನಿಂಗನಗೌಡ ಮರಿಗೌಡ್ರ, ಸಹದೇವ ಮಾಳಗಿ, ನಾಗಲಿಂಗ ಪೂಜಾರ, ಪ್ರತಾಪ ಪಾಟೀಲ, ಕಲ್ಲಪ್ಪ ಮೊರಬದ, ದೇವರಗುಡಿಹಾಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಖಾತುನಬಿ ಲಾಡಸಾಬನವರ, ರಾಯನಾಳ ಗ್ರಾ.ಪಂ. ಅಧ್ಯಕ್ಷ ರುದ್ರಪ್ಪ ಮೇಟಿ, ಸದಸ್ಯರು, ಪಕ್ಷದ ಪದಾಧಿಕಾರಿಗಳು ಹಾಗೂ ಗ್ರಾಮದ ಹಿರಿಯರು ಭಾಗವಹಿಸಿದ್ದರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಕಾಮಗಾರಿ, ಕಾರ್ಯಕ್ರಮಗಳಲ್ಲಿ ಪಾರದರ್ಶಕತೆ, ಗುಣಮಟ್ಟ ಕಾಪಾಡಿ; ಪ್ರಲ್ಹಾದ ಜೋಶಿ
ಶಾಸಕ ಎಂ.ಆರ್. ಪಾಟೀಲ್ ಈ ಎಲ್ಲಾ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿ, ಗ್ರಾಮಗಳ ಪ್ರಗತಿಗೆ ಎಲ್ಲರ ಸಹಕಾರ ಅಗತ್ಯ. ಈ ಯೋಜನೆಗಳು ಕ್ಷೇತ್ರದ ಜನರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸುತ್ತವೆ ಎಂದರು.