ಪಂಜಾಬ್‌ | ಪ್ರವಾಹ ಪೀಡಿತ ಪ್ರದೇಶದ ಜನರನ್ನು ಭೇಟಿಯಾದ ರಾಹುಲ್‌ ಗಾಂಧಿ

Date:

ಕೃಷಿ ಪ್ರಧಾನ ರಾಜ್ಯವಾಗಿರುವ ಪಂಜಾಬ್​ ರಾಜ್ಯದಲ್ಲಿ ಈ ಬಾರಿಯ ಭೀಕರ ಮಳೆ ಪ್ರವಾಹಕ್ಕೆ ಅಕ್ಷರಶಃ ನಲುಗಿದೆ. ಈವರೆಗೆ 2300ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಪಾರ ಆಸ್ತಿಪಾಸ್ತಿ ಹಾನಿಯಾಗಿದ್ದರೆ, 55ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಮತ್ತು ನಾಲ್ವರು ಕಣ್ಮರೆಯಾಗಿದ್ದಾರೆ.

- Advertisement -

ಅಮೃತಸರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು. ಅಮೃತಸರದ ಅಜ್ವಾಲಾದ ಫೋನೆವಾಲ ಗ್ರಾಮಕ್ಕೆ ತೆರಳಿದ ಅವರು, ಪ್ರವಾಹ ಪೀಡಿತ ಜನರನ್ನು ಭೇಟಿಯಾಗಿ ಹಾನಿಯ ಬಗ್ಗೆ ವಿಚಾರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ರಾಹುಲ್‌ ಗಾಂಧಿ ಅವರೊಂದಿಗೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ಜಾ, ಅಮೃತಸರ ಸಂಸದ ಗುರ್ಜೀತ್ ಸಿಂಗ್ ಔಜ್ಞಾ ಮತ್ತು ಪಕ್ಷದ ಇತರ ನಾಯಕರು ಇದ್ದರು.

ಪಂಜಾಬ್‌ನ 15 ಜಿಲ್ಲೆಗಳಲ್ಲಿ ಇಲ್ಲಿಯವರೆಗೆ ಪ್ರವಾಹದಿಂದಾಗಿ 56 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಜಿಲ್ಲಾವಾರು ಮಾಹಿತಿಯನ್ನು ನೋಡುವುದಾದರೆ: ಅಮೃತಸರ-7, ಬರ್ನಾಲಾ 5, ಬಟಿಂಡಾ-4, ಹೋಶಿಯಾರ್‌ಪುರ್- 7, ಗುರುದಾಸ್ಪುರ್- 2, ಫಜಿಲ್ಕಾ- 3, ಲುಧಿಯಾನ- 5, ಮಾನ್ಸಾ -5, ಪಠಾಣ್‌ಕೋಟ್- 6, ಪಟಿಯಾಲ-2, ರೂಪನಗರ -2, ಮೊಹಾಲಿ -2 ಮತ್ತು ಸಂಗ್ರೂರ್ -1 ಸಾವು ವರದಿಯಾಗಿದೆ. ಇದಲ್ಲದೆ, ಪಠಾಣ್‌ಕೋಟ್‌ನಲ್ಲಿ 3 ಜನರು ಕಾಣೆಯಾಗಿದ್ದಾರೆ ಮತ್ತು ಜಲಂಧರ್‌ನಲ್ಲಿ ಓರ್ವ ವ್ಯಕ್ತಿ ಕಾಣೆಯಾಗಿದ್ದಾರೆ.

ಮಾಧ್ಯಮ ಪ್ರಕಟಣೆ ಮಾಹಿತಿ ಪ್ರಕಾರ, ಪಂಜಾಬ್‌ನ 23 ಜಿಲ್ಲೆಗಳ 2384 ಗ್ರಾಮಗಳು ಪ್ರವಾಹದಿಂದ ಸಂಕಷ್ಟ ಅನುಭವಿಸಿವೆ. ಅಮೃತಸರದಲ್ಲಿ 196 ಗ್ರಾಮಗಳು, ಬರ್ನಾಲಾದಲ್ಲಿ 121 ಗ್ರಾಮಗಳು, ಬಟಿಂಡಾದಲ್ಲಿ 21 ಗ್ರಾಮಗಳು, ಫರೀದ್‌ಕೋಟ್‌ನಲ್ಲಿ 15 ಗ್ರಾಮಗಳು, ಫಜಿಲ್ಕಾದಲ್ಲಿ 111 ಗ್ರಾಮಗಳು, ಫಿರೋಜ್‌ಪುರದಲ್ಲಿ 108, ಗುರುದಾಸ್ಪುರದಲ್ಲಿ 343, ಹೋಶಿಯಾರ್‌ಪುರದಲ್ಲಿ 329, ಜಲಂಧರ್‌ನಲ್ಲಿ 93, ಕಪುರ್ತಲಾದಲ್ಲಿ 149, ಲುಧಿಯಾನದಲ್ಲಿ 114, ಮಲೇರ್ಕೋಟ್ಲಾದಲ್ಲಿ 12, ಮಾನ್ಸಾದಲ್ಲಿ 95, ಮೋಗಾದಲ್ಲಿ 78, ಪಠಾಣ್‌ಕೋಟ್‌ನಲ್ಲಿ 88, ಪಟಿಯಾಲಾದಲ್ಲಿ 140, ರೂಪನಗರದಲ್ಲಿ 93, ಮೊಹಾಲಿಯಲ್ಲಿ 15, ನವನ್‌ಶಹರ್‌ನಲ್ಲಿ 28, ಸಂಗ್ರೂರ್‌ನಲ್ಲಿ 107, ಶ್ರೀ ಮುಕ್ತ್ಸರ್ ಸಾಹಿಬ್‌ನಲ್ಲಿ 58 ಮತ್ತು ತರಣ್ ತರಣ್‌ ಜಿಲ್ಲೆಯಲ್ಲಿ 70 ಗ್ರಾಮಗಳು ಪ್ರವಾಹ ಸಂಕಷ್ಟಕ್ಕೆ ಸಿಲುಕಿವೆ.

ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಜಲಾನಯನ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಟ್ಲಜ್, ಬಿಯಾಸ್ ಮತ್ತು ರಾವಿ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಪ್ರವಾಹ ಉಂಟಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ...

ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ‘ಯುವಜನರ ಮೇಲೆ ದಾಳಿ ನಡೆಸಲು BJP-RSS ಪುಂಡರಿಗೆ ದೆಹಲಿ ಪೊಲೀಸರಿಂದಲೇ ಕುಮ್ಮಕ್ಕು’

ದೆಹಲಿಯಲ್ಲಿ ಶನಿವಾರ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು, ಯುವಕ-ಯುವತಿಯರ ಮೇಲೆ...

ಖ್ಯಾತ ಯೂಟ್ಯೂಬರ್ ಧೃವ್ ರಾಠಿ ಬಿಡುಗಡೆ!

ಸಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಿಯಾಗದಂತೆ ತಡೆಯಲು ಬಂಧಿಸಲಾಗಿದ್ದ ಖ್ಯಾತ ಯೂಟ್ಯೂಬರ್ ಧೃವ್ ರಾಠಿ...