ವಿಜಯನಗರ | ಪ್ರಜಾಪ್ರಭುತ್ವದಲ್ಲಿ ಪ್ರಶ್ನೆಮಾಡಿ ದೌರ್ಜನ್ಯಕ್ಕೆ ಒಳಗಾಗುವಂತಾಗಿದೆ: ಚಿನ್ನಸ್ವಾಮಿ ಸೋಸಲೆ

Date:

Advertisements

ಸ್ವಾತಂತ್ರ್ಯ ದೊರೆತು 79 ವರ್ಷಗಳಾದರೂ ಇಂದು ಪರಿಪೂರ್ಣವಾದ ಸ್ವಾತಂತ್ರ್ಯ ಸಿಕ್ಕಿಲ್ಲ, ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡುವವರೇ ಹೆಚ್ಚು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಆಳುವವರಿಗೆ ಹಾಗೂ ಆಳಿಸಿಕೊಳ್ಳುವವರಿಗೆ ಪ್ರಜಾಪ್ರಭುತ್ವದ ಮೂಲ ಉದ್ದೇಶ ಅರ್ಥವಾಗಿಲ್ಲ ಎಂದು ಹಂಪಿ ಕನ್ನಡ ವಿವಿ ಆಧ್ಯಾಪಕ ಚಿನ್ನಸ್ವಾಮಿ ಸೋಸಲೆ ಅಭಿಪ್ರಾಯಪಟ್ಟರು.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಗುರುಭವನದಲ್ಲಿ ಎಸ್‌ಸಿ‌ಎಸ್‌ಪಿ, ಟಿಎಸ್‌ಪಿ ಸಮಗ್ರ ಜಾರಿಗೆ ತರಬೇತಿ; ರಾಜ್ಯ ಮಟ್ಟದ ಕಾರ್ಯಗಾರ ಉದ್ಘಾಟಿಸಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

“ಎರಡು ದಲಿತ ಹಕ್ಕುಗಳಿವೆ. ಜೀತಮುಕ್ತ ಹಕ್ಕು, ಜೀತಸಹಿತ ಹಕ್ಕು. ಮಾತನಾಡುವ ಹಕ್ಕು ಮತ್ತು ಪ್ರಶ್ನಿಸುವ ಹಕ್ಕನ್ನು ಡಾ.ಬಾಬಾ ಸಾಹೇಬ್ ಅವರು ನಮಗೆ ಮೂಲಭೂತ ಹಕ್ಕುಗಳನ್ನಾಗಿ ಕೊಟ್ಟರು. ಪ್ರಶ್ನೆ ಮಾಡುವ ಹಕ್ಕು ಸಂವಿಧಾನದಲ್ಲಿ ಕೊಟ್ಟರೆ ಹೊರತು, ತಲೆಬಾಗುವ ಹಕ್ಕು ಕೊಟ್ಟಿಲ್ಲ. ಖಾಸಗಿ ಸಂಸ್ಥೆಗಳಲ್ಲಿ ಇವತ್ತಿಗೂ ಮೀಸಲಾತಿ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗ ಸೃಷ್ಟಿಯನ್ನು ಕೆಲವೇ ಕೆಲವು ಬಲಿಷ್ಠರು ನಿರ್ಧರಿಸುತ್ತಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.

“2000ನೇ ವರ್ಷದಿಂದ ಉದ್ಯೋಗ ಕೊರತೆ ಹೆಚ್ಚಾಗಿದೆ. ಬ್ಯಾಕ್‌ಲಾಗ್ ತುಂಬಿಕೊಂಡಿಲ್ಲ. ಖಾಸಗಿ ಶಾಲೆಯಲ್ಲಿ ದಲಿತರಿಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ. ಪ್ರಜಾಪ್ರಭುತ್ವ ಭಾರತದಲ್ಲಿ ಖಾಸಗೀಕರಣದ ಆಡಳಿತ ಪ್ರಭಾವ ಹೆಚ್ಚಾಗಿದೆ. ಇಂದಿರಾಗಾಂಧಿ ಕಾಲದಲ್ಲಿ ಭೂ ಸುಧಾರಣೆಯಿಂದ ದಲಿರಿಗೆ ಭೂಮಿ ದೊರೆಯಿತು. ಆದರೆ, ಈಗ ಆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುತ್ತಿದ್ದಾರೆ. ದಲಿತರಲ್ಲಿ ಸಂಘಟನಾ ಸಮಸ್ಯೆ ಇದೆ. ಇವತ್ತು ರಾಷ್ಟ್ರ ಅಜ್ಞಾನದ ಕಡೆ ಹೊರಟಿದೆ. ಹಿಂದೂ-ಮುಸ್ಲಿಮ್ ಹೊಡೆದಾಟದಲ್ಲಿ ದಲಿತರ ಹಕ್ಕಗಳು ಮಾಯವಾಗುತ್ತಿವೆ. ಅದರಲ್ಲಿ ದಲಿತ ಸಮುದಾಯಗಳ ಯುವಜನರು ತಮ್ಮ ಭವಿಷ್ಯವನ್ನು ಬಲಿ ಕೊಡುತ್ತಿದ್ದಾರೆ. ತಳಸಮುದಾಯಗಳೇ ಯಾಕೆ ದೆವದಾಸಿಯಂತಹ ಅನಿಷ್ಟ ಪದ್ದತಿಗೆ ಬಲಿಯಾಗುತ್ತಿದೆ. ದೇವರ ಹೆಸರಲ್ಲಿ ದಲಿತ ಹೆಣ್ಣುಮಕ್ಕಳನ್ನು ದೇವದಾಸಿಯರನ್ನಾಗಿ ಬಿಡುತ್ತಿದ್ದರು. ಸರ್ಕಾರದ ನಿಷೇಧದ ನಡುವೆಯೇ ಇವತ್ತಿಗೂ ಕಲ್ಯಾಣ ಕರ್ನಾಟಕದ ಕೆಲವು ಭಾಗಗಳಲ್ಲಿ ಅಂತ ಅನಿಷ್ಟ ಪದ್ದತಿ ಇದೆ. ಇದರಿಂದ ಶೋಷಿತ ತಳಸಮುದಾಯಗಳು ವಿಮೋಚಿತವಾಗಬೇಕು” ಎಂದು ಹೇಳಿದರು.

“ದೇಶ ಕಟ್ಟುವವರು ಶೋಷಿತರು, ದೇಶ ಆಳುವವರು ಇನ್ನಾರೋ. ದಲಿತರು ಮನೆ ಕಟ್ಟಿದರೆ ಪ್ರಭುಗಳು, ಸರ್ವಾಧಿಕಾರಿಗಳು ಬಂದು ಅದರಲ್ಲಿ ವಾಸ ಮಾಡುವಂತಹ ಪರಿಸ್ಥಿತಿ ಬಂದಿದೆ. ಜಾತಿಯ ಸೂಚನೆಯಿಂದ ಧರ್ಮ ಸೋತಿದೆ. ಹಳ್ಳಿಗಳೇ ಭಾರತದ ಬೆನ್ನೆಲುಬು ಎನ್ನುತ್ತಾರೆ. ಇಂದು ಗುಡಿಸಲುಗಳೇ ದೇಶದ ಬೆನ್ನೆಲುಬಾಗಿರುವ ಸ್ಥಿತಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ಡಿಎಚ್‌ಎಸ್ ಪ್ರಧಾನ ಕಾರ್ಯದರ್ಶಿ ಎನ್ ರಾಜಣ್ಣ ಮಾತನಾಡಿ, “ಪೆಟ್ಟುತಿಂದ ದಲಿತರ ಮೇಲೆ ಪ್ರತಿ ಪ್ರಕರಣ ದಾಖಲಿಸಿ ಅವರಿಗೆ ಪರೋಕ್ಷವಾಗಿ ಬೆದರಿಕೆ ಹಾಕುವಂತಹ ಕೆಲಸ ಮಾಡುತಿದ್ದಾರೆ. ದಲಿತರಿಗೆ ಅರ್ಧ ಎಕರೆ ಭೂಮಿಯಿಲ್ಲ. ದಲಿತರು ವ್ಯವಸಾಯ ಮಾಡಿ ರೈತರೆಂದು ಕರೆಸಿಕೊಳ್ಳಾಲಾಗುತ್ತಿಲ್ಲ. ಸರ್ಕಾರ ಜಿಂದಾಲಲ್‌ನಂಥ ಕಂಪೆನಿಗಳಿಗೆ ಭೂಮಿ ಕೊಡುತ್ತಾರೆ. ಆದರೆ, ಆರ್ಥಿಕ, ಸಾಮಾಜಿಕ ಶೋಷಣೆಗೊಳಗಾದ ದಲಿತ ಸಮುದಾಯಗಳಿಗೆ ಭೂಮಿ ಕೊಟ್ಟು ಸಬಲರನ್ನಾಗಿ ಮಾಡಿ ಎಂದರೆ ಸರ್ಕಾರ ಜಾಣ ಕುರು‌ಡು ಪ್ರದರ್ಶಿಸುತ್ತಿದೆ. ದಲಿತರಿಗಾಗಿ ಮೀಸಲಿಟ್ಟಿರುವ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಸರ್ಕಾರ ಶೋಷಿತ ಸಮುದಾಯಗಳಿಗೆ ಬಳಸದೇ ತಮ್ಮ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದು ಬೇಸರದ ಸಂಗತಿ” ಎಂದರು.

ದೇವದಾಸಿ ವಿಮೋಚನ ಸಂಘ ರಾಜ್ಯಾಧ್ಯಕ್ಷೆ ಬಿ ಮಾಳಮ್ಮ ಮಾತನಾಡಿ, “ಜಾತಿ ಅಸ್ಪೃಶ್ಯತೆ ಆಚರಣೆ, ರಾಜಕಾರಣದಿಂದ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲುತ್ತಿಲ್ಲ. ದಲಿತರು ಪ್ರಜ್ಞಾವಂತರಾಗದಿರುವುದಕ್ಕೆ ಇವತ್ತು ಮೇಲ್ವರ್ಗದವರ ಕೈಗೆ ಅಧಿಕಾರ ಸಿಕ್ಕಿದೆ. ನಮ್ಮ ಪ್ರಜ್ಞಾವಂತಿಕೆಯನ್ನು ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ನಾವು ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ನಮ್ಮಲ್ಲಿ ಜಾಗೃತರಾಗುವುದು ಕಡಿಮೆ. ಅತ್ಯಂತ ಕಷ್ಟಕರ ಬದುಕು ನಡೆಸುತ್ತಿರುವವರು ದಲಿತರು ಹಾಗೂ ಮಹಿಳೆಯರು. ಮಹಿಳೆಯರಿಗೆ ತಮ್ಮ ಮನೆಯಲ್ಲಿ‌ ಸ್ನಾನಗೃಹ ಇಲ್ಲ, ಶೌಚಾಲಯ ಇಲ್ಲ. ಮಹಿಳೆಯರು ಒಂಟಿಯಾಗಿ ಶೌಕ್ಕೆ ಹೋಗುವುದು ಕಷ್ಟವಾಗಿದೆ. ಮಹಿಳೆಯರ ಮೇಲೆ ಎಲ್ಲೆಂದರಲ್ಲಿ ಅತ್ಯಾಚಾರಗಳಾಗುತ್ತಿವೆ” ಎಂದು ತಿಳಿಸಿದರು.

“ದಲಿತರಿಗೆ ವಾಸ ಮಾಡಲು ಮನೆ ಇಲ್ಲ. ಅವರಿಗೆ ಟೆಂಟ್ ಹಾಗೂ ಗುಡಿಸಲುಗಳೇ ಆಶ್ರಯವಾಗಿದೆ. ಮಹಿಳೆಯನ್ನು ಇಂದಿಗೂ ಎರಡನೇ ದರ್ಜನೆಯ ಪ್ರಜೆಗಳಾಗಿ ಬದುಕುತ್ತಿದ್ದಾರೆ. ಮನೆಯಲ್ಲಿ ನಾಯಿ, ನರಿ ಹಾಗೂ ಬೆಕ್ಕುಗಳನ್ನು ಸೇರಿಸಿಕೊಳ್ಳುತ್ತಾರೆ. ಅದರೆ, ದಲಿತರನ್ನು ಒಳಗೆ ಕರೆದುಕೊಳ್ಳುತ್ತಿಲ್ಲ. ಸರ್ಕಾರ ದಲಿತರಿಗೆ ಕಾಯ್ದಿಟ್ಟ ಹಣವನ್ನೇ ಬೇರೆಬೇರೆ ಯೋಜನೆಗೆ ಬಳಸಿಕೊಳ್ಳುತ್ತಾರೆ. ಯಾವುದೇ ಸರಕಾರವಾದರೂ ಮಹಿಳೆಯರಿಗಾಗಿ ವಿಶೇಷ ಬಜೆಟ್ ಕಾಯ್ದಿ‌ಟ್ಟಿದೆಯೇ? ಇಂದು ಮಹಿಳೆಯರು 12 ಗಂಟೆ ಕೆಲಸ ಮಾಡುವಂತೆ ಸರ್ಕಾರ ಕಾನೂನು ತ‌ರುತ್ತಿದೆ. ಕೆಲಸದ ಒತ್ತಡಗಳಿಂದ ಮಹಿಳೆಯರು ಈಗಾಗಲೇ ಹಲವಾರು ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ಧರ್ಮಸ್ಥಳದಲ್ಲಿ ಪದ್ಮಲತಾ, ಸೌಜನ್ಯ ಸಾವಿನ ಬಗ್ಗೆ ಸಾವಿರಾರು ಜನ ಮಾತನಾಡುತ್ತಿದ್ದಾರೆ. ಆದರೆ, ದೇವರ ಹೆಸರಿನ ಬಗ್ಗೆಯಾಗಲಿ ಅಥವಾ ಧಾರ್ಮಿಕ ಸ್ಥಳದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಹತ್ಯೆಕೋರರು ಹಾಗೂ ಅತ್ಯಾರಿಗಳ ವಿರುದ್ಧ ಧವನಿ ಎತ್ತಿದರೆ, ಅದು ಧರ್ಮಸ್ಥಳದ ಹೆಸರಿಗೆ ಕಳಂಕ ತರುತ್ತಿದ್ದಾರೆಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಹತ್ಯೆಗೊಳಗಾದ ಮಹಿಳೆಯರ ಬಗ್ಗೆ ನ್ಯಾಯ ಸಿಗುವುದರ ಕುರಿತು ಮಾತಾಡುತ್ತಿದ್ದೇವೆ. ಪ್ರಶ್ನೆ ಮಾಡುತ್ತಿದ್ದೇವೆ. ನ್ಯಾಯ ಕೇಳುತ್ತಿದ್ದೇವೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಮಾತನಾಡುತ್ತಿದ್ದೇವೆ” ಎಂದರು.

ಕ.ಪ್ರಾಂ.ರೈ.ಸಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ್ ಮಾತನಾಡಿ, “ಜಾತಿತಾರತಮ್ಯ, 1982 ದೇವದಾಸಿ ದೌರ್ಜನ್ಯದ ಕಾಯ್ಧೆ ಸರಿಯಿಲ್ಲ. ಆ ಕಾಯ್ದೆಯನ್ನು ವಾಪಸ್ ಪಡೆಯಲು ಮನವಿ ಮಾಡಿದ್ದೆವು. ಆದರೆ ಸರ್ಕಾರ ಈಗ ದೇವದಾಸಿ ದೌರ್ಜನ್ಯ ಕಾಯ್ದೆ ತಿದ್ದುಪಡಿ ತಂದಿದೆ. ಅವರ ಕುಟುಂಬಕ್ಕೆ ವಸತಿ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಸಿದ್ದವಾಗಿದೆ. ಇದು ಎಲ್ಲ ದೇವದಾಸಿಯರ ಹೋರಾಟದ ಫಲ” ಎಂದರು.

ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಸಕ್ಕರೆ ಕಾರ್ಖಾನೆ ಚುನಾವಣೆ: ಮಹಾದೇವಪ್ಪ ಯಾದವಾಡ ಪೆನೆಲ್ ಗೆಲುವಿಗೆ ಕಾರಣವಾದ ಅಂಶಗಳೇನು?

ಹಿರಿಯ ಸಾಹಿತಿ ಹುರಕಡ್ಲಿ ಶ್ರೀನಿವಾಸ ಮಾತನಾಡಿ, “ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ, ಹೋರಾಟ ಎಂಬು ಮೂರು ಅಂಶಗಳನ್ನು ಕೊಟ್ಟಿದ್ದಾರೆ. ಆದರೆ, ದಲಿತ ಸಮುದಾಯಗಳಿಗೆ ಶಿಕ್ಷಣದ ಕೊರತೆ ಹೆಚ್ಚು ಕಾಣುತ್ತಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದರ ಮೂಲಕ ಶಿಕ್ಷಣ ಉಳಿಸಿಕೊಳ್ಳಬಹುದು. ದಲಿತರಿಗೆ ಶಿಕ್ಷಣ ಇದ್ದರೆ ಸಂಘಟಿತರಾಗಿ ಹೋರಾಟ ಮಾಡಬಹುದು” ಎಂದರು.

ಎಂ ಜಂಬಯ್ಯ ನಾಯಕ, ಮೈಲೇಶ ಬೇವೂರು, ಎಂ ಮರಿರಾಮಪ್ಪ, ಡಾ ಅಕ್ಕಿ ಬಸವೇಶ, ಎಸ್ ಜಗನಾಥ, ನಾಗರಾಜ್ ಪತ್ತಾರ್, ದುರುಗೇಶ, ಎಚ್ ಡಿ ಚಂದ್ರಪ್ಪ, ಎ ಕೆ ಮಂಜುನಾಥ ಹಾಗೂ ನೂರಾರು ಮಹಿಳೆಯರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಪಾಲಿಕೆಗೆ 19 ಗ್ರಾಮಗಳ ಸೇರ್ಪಡೆಗೆ ಸಿದ್ಧತೆ

ಶಿವಮೊಗ್ಗ, ನಿರೀಕ್ಷೆಯಂತೆಯೇ ತುಮಕೂರು ಮತ್ತು ಶಿವಮೊಗ್ಗ ನಗರ ಪಾಲಿಕೆಗಳ ವ್ಯಾಪ್ತಿ ವಿಸ್ತರಣೆಗೆ...

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

Download Eedina App Android / iOS

X