ಚೆಸ್‌ | ಆರ್‌ ವೈಶಾಲಿ ಎರಡನೇ ಬಾರಿಗೆ FIDE ಮಹಿಳಾ ಗ್ರ್ಯಾಂಡ್ ಸ್ವಿಸ್ ಚಾಂಪಿಯನ್

Date:

ಭಾರತದ ಚೆಸ್ ತಾರೆ ಆರ್‌ ವೈಶಾಲಿ ಅವರು ಉಜ್ಬೇಕಿಸ್ತಾನ್‌ನ ಸಮರಕಂದ್‌ನಲ್ಲಿ ನಡೆದ FIDE ಮಹಿಳಾ ಗ್ರ್ಯಾಂಡ್ ಸ್ವಿಸ್ ಟೂರ್ನಮೆಂಟ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಈ ಗೆಲುವಿನೊಂದಿಗೆ, 2026ರ FIDE ಮಹಿಳಾ FIDE ಟೂರ್ನಮೆಂಟ್‌ಗೆ ಅರ್ಹತೆ ಗಳಿಸಿದ ಮೂರನೇ ಭಾರತೀಯ ಮಹಿಳಾ ಆಟಗಾರ್ತಿಯಾಗಿದ್ದಾರೆ.

- Advertisement -

ಜೂನ್‌ನಲ್ಲಿ ಜಾರ್ಜಿಯಾದಲ್ಲಿ ನಡೆದ FIDE ಮಹಿಳಾ ವಿಶ್ವಕಪ್‌ ಫೈನಲ್‌ನಲ್ಲಿ ದಿವ್ಯ ಹಾಗೂ ಕೊನೆರು ಹಂಪಿ ಇಬ್ಬರೂ ಸ್ಥಾನ ಪಡೆದಿದ್ದರು. ಅಂತಿಮ ಪಂದ್ಯದಲ್ಲಿ ದಿವ್ಯ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ವೈಶಾಲಿ, ಟೂರ್ನಮೆಂಟ್‌ನ 11ನೇ ಮತ್ತು ಅಂತಿಮ ಸುತ್ತಿನಲ್ಲಿ ಚೀನಾದ ತಾನ್ ಝಾಂಗಿಯವರ ವಿರುದ್ಧ ಡ್ರಾ ಸಾಧಿಸಿ ಒಟ್ಟು ಎಂಟು ಅಂಕಗಳೊಂದಿಗೆ ಟೂರ್ನಮೆಂಟ್ ಮುಕ್ತಾಯಗೊಳಿಸಿದರು. ರಷ್ಯಾದ ಕತೆರಿನಾ ಲಾಗ್ನೊ ಕೂಡ ಎಂಟು ಅಂಕಗಳನ್ನು ಗಳಿಸಿದ್ದರೂ, ಉತ್ತಮ ಟೈಬ್ರೇಕ್ ಸ್ಕೋರ್‌ನಿಂದಾಗಿ ವೈಶಾಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮತಾಂತರ ವಿಚಾರದಲ್ಲಿ ಬಿಜೆಪಿಯ ಬೂಟಾಟಿಕೆ ಮತ್ತು ವಾಸ್ತವ

ಈ ಮೂಲಕ ಅವರು ದಿವ್ಯ ದೇಶ್‌ಮುಖ್‌ ಮತ್ತು ಕೊನೆರು ಹಂಪಿ ನಂತರ, FIDE ಮಹಿಳಾ ಅಭ್ಯರ್ಥಿ ಟೂರ್ನಿಗೆ ಅರ್ಹತೆ ಪಡೆದ ಮೂರನೇ ಭಾರತೀಯ ಕ್ರೀಡಾಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಈ ಟೂರ್ನಮೆಂಟ್‌ನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದವರು ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ಗೆ ನೇರ ಅರ್ಹತೆ ಗಳಿಸುತ್ತಾರೆ. ಈ ಟೂರ್ನಮೆಂಟ್, ಹಾಲಿ ಚೀನಾದ ವಿಶ್ವ ಚಾಂಪಿಯನ್ ಜು ವೆಂಜುನ್‌ ಅವರೊಂದಿಗೆ ಸೆಣಸಲು ನಿರ್ಣಾಯಕವಾಗಿದೆ.

ವೈಶಾಲಿಯ ಈ ಸಾಧನೆ ಭಾರತೀಯ ಚೆಸ್‌ಗೆ ಮತ್ತೊಂದು ಗರಿ ಮೂಡಿಸಿದೆ. ಭಾರತದ ಮೂವರು ಮಹಿಳಾ ಆಟಗಾರ್ತಿಯರು ಒಂದೇ ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ಗೆ ಅರ್ಹತೆ ಗಳಿಸಿರುವುದು ದೇಶದ ಚೆಸ್ ಕ್ಷೇತ್ರದ ಸಾಧನಯನ್ನು ತೋರ್ಪಡಿಸುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: ಲವ್ಲಿನಾಗೆ ಚಿನ್ನ, ಬಿಲ್ಲುಗಾರಿಕೆಯಲ್ಲಿ ಐತಿಹಾಸಿಕ ಸಾಧನೆ; ಪದಕ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು...

ಏಷ್ಯನ್ ಗೇಮ್ಸ್: ಪಾಕ್ ಮಣಿಸಿ ಫೈನಲ್‌ಗೇರಿದ ಭಾರತ ಹಾಕಿ ತಂಡ; ಕುಸ್ತಿಯಲ್ಲಿ ನಿತೇಶ್‌ಗೆ ಬೆಳ್ಳಿ

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ 13ನೇ ದಿನವಾದ...

ಏಷ್ಯಾಡ್’ನಲ್ಲಿ ಶ್ರೀಲಂಕಾ ಸೋಲಿಸಿದ ಟೀಮ್ ಇಂಡಿಯಾ: ಚಿನ್ನದ ಪದಕಕ್ಕಾಗಿ ಪಾಕ್ ಎದುರು ಸೆಣಸು

ಸಂಘಟಿತ ಪ್ರದರ್ಶನ ನೀಡಿದ ಭಾರತ ಪುರುಷರ ಕ್ರಿಕೆಟ್ ತಂಡ, ಇಲ್ಲಿ ನಡೆಯುತ್ತಿರುವ...

ಗಿಲ್ ಅಮೋಘ ದ್ವಿಶತಕದಾಟ, ರೋಹಿತ್ ಶತಕ: 406 ರನ್ ಗುರಿ ಮುಟ್ಟಿ ಐತಿಹಾಸಿಕ ಜಯ ಸಾಧಿಸಿದ ಭಾರತ

ಗುವಾಹಟಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಇತಿಹಾಸ...