ಯುರೋಪಿನ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸೈಬರ್ ದಾಳಿ: ಸಾವಿರಾರು ಪ್ರಯಾಣಿಕರಿಗೆ ತೊಂದರೆ

Date:

Advertisements

ಲಂಡನ್‌ನ ಹೀತ್ರೋ, ಬ್ರಸೆಲ್ಸ್ ಹಾಗೂ ಬರ್ಲಿನ್ ಸೇರಿದಂತೆ ಯುರೋಪಿನ ಹಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಶನಿವಾರ ದೊಡ್ಡ ಮಟ್ಟದ ತಾಂತ್ರಿಕ ವ್ಯತ್ಯಯ ಉಂಟಾಯಿತು.

ಏರ್‌ಲೈನ್‌ಗಳು ಮತ್ತು ವಿಮಾನ ನಿಲ್ದಾಣಗಳಿಗೆ ಚೆಕ್–ಇನ್ ಹಾಗೂ ಬೋರ್ಡಿಂಗ್ ವ್ಯವಸ್ಥೆಗಳನ್ನು ಒದಗಿಸುವ ಕಾಲಿನ್ಸ್ ಏರೋಸ್ಪೇಸ್ ಕಂಪನಿಯ ಮೇಲೆ ನಡೆದ ಸೈಬರ್ ದಾಳಿ ಇದಕ್ಕೆ ಕಾರಣವಾಗಿದೆ. ಇದರ ಪರಿಣಾಮವಾಗಿ ಸಾವಿರಾರು ಪ್ರಯಾಣಿಕರ ಹಾರಾಟಕ್ಕೆ ವ್ಯತ್ಯಯ ಉಂಟಾಗಿ ವಿಳಂಬ ಹಾಗೂ ಹಾರಾಟ ರದ್ದುಗೊಳ್ಳುವ ಪರಿಸ್ಥಿತಿ ಎದುರಾಯಿತು.

ಹೀತ್ರೋ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ವಿಮಾನ ಹಾರಾಟದ ಸ್ಥಿತಿ ನಿರಂತರವಾಗಿ ಪರಿಶೀಲಿಸಲು ಸೂಚನೆ ನೀಡಿದ್ದು, ಪ್ರಯಾಣಿಕರು ವಿಳಂಬವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಬ್ರಸೆಲ್ಸ್ ವಿಮಾನ ನಿಲ್ದಾಣದಲ್ಲಿ ಸ್ವಯಂಚಾಲಿತ ಚೆಕ್–ಇನ್ ಮತ್ತು ಬೋರ್ಡಿಂಗ್ ಸೇವೆಗಳು ಸಂಪೂರ್ಣ ಸ್ಥಗಿತಗೊಂಡ ಕಾರಣ ಸಿಬ್ಬಂದಿ ಕೈಯಾರೆ ಪ್ರಕ್ರಿಯೆಗಳನ್ನು ನಡೆಸುವಂತಾಗಿದೆ.

“ಇದು ಹಾರಾಟಗಳ ವೇಳಾಪಟ್ಟಿಗೆ ದೊಡ್ಡ ಪರಿಣಾಮ ಬೀರಿದ್ದು, ಅನಿವಾರ್ಯವಾಗಿ ವಿಳಂಬ ಮತ್ತು ರದ್ದುಪಡಿಸುವಿಕೆ ಸಂಭವಿಸುತ್ತಿದೆ. ಸೇವಾ ಸಂಸ್ಥೆ ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಪ್ರಯತ್ನಿಸುತ್ತಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ? ತಮಿಳುನಾಡು | ಬುರ್ಖಾ ಧರಿಸಿದ್ದ ಮಹಿಳೆಗೆ ಬಸ್ ಪ್ರವೇಶ ನಿರಾಕರಣೆ; ನಿರ್ವಾಹಕರ ಪರವಾನಗಿ ರದ್ದು

ಬರ್ಲಿನ್ ವಿಮಾನ ನಿಲ್ದಾಣವು ತನ್ನ ಜಾಲತಾಣದಲ್ಲಿ ಪ್ರಕಟಣೆ ನೀಡಿ, “ಯುರೋಪಿನಾದ್ಯಂತ ಕಾರ್ಯನಿರ್ವಹಿಸುವ ಪೂರೈಕೆದಾರನ ತಾಂತ್ರಿಕ ತೊಂದರೆಯಿಂದಾಗಿ ಚೆಕ್–ಇನ್‌ನಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಶೀಘ್ರ ಪರಿಹಾರ ಕಂಡುಹಿಡಿಯಲು ನಾವು ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದೆ.

ಇದೇ ವೇಳೆ, ಪೋಲೆಂಡ್‌ನ ಉಪಪ್ರಧಾನಿ ಹಾಗೂ ಡಿಜಿಟಲ್ ವ್ಯವಹಾರಗಳ ಸಚಿವ ಕ್ರಿಸ್ಟೋಫ್ ಗಾವ್ಕೋವ್ಸ್ಕಿ ಅವರು ಪೋಲೆಂಡ್‌ನ ವಿಮಾನ ನಿಲ್ದಾಣಗಳಿಗೆ ಯಾವುದೇ ಅಪಾಯದ ಲಕ್ಷಣಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

“ಸ್ಥಿತಿಗತಿಯ ಕುರಿತು ನಿರಂತರ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಇತರೆ ದೇಶಗಳ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ,” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

ಜರ್ಮನಿಯ ಅತಿ ದೊಡ್ಡ ವಿಮಾನ ನಿಲ್ದಾಣವಾದ ಫ್ರಾಂಕ್‌ಫರ್ಟ್ ಹಾಗೂ ಸ್ವಿಟ್ಜರ್‌ಲೆಂಡ್‌ನ ಝೂರಿಕ್ ವಿಮಾನ ನಿಲ್ದಾಣಗಳು ಈ ದಾಳಿಯಿಂದ ಯಾವುದೇ ರೀತಿಯ ಪರಿಣಾಮ ಅನುಭವಿಸಿಲ್ಲವೆಂದು ಅಧಿಕೃತವಾಗಿ ಸ್ಪಷ್ಟಪಡಿಸಿವೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೋಹಾ | ಕರ್ನಾಟಕ ಸಂಘ ಕತಾರ್, ಐಸಿಸಿ ಸಹಯೋಗದೊಂದಿಗೆ ‘ಎಂಜಿನಿಯರ್ಸ್‌ ಡೇ’ ಆಚರಣೆ

ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ 164ನೇ ಜನ್ಮದಿನದ ಅಂಗವಾಗಿ, ಕರ್ನಾಟಕ...

ಭಾರತ-ಭೂತಾನ್ ನಡುವೆ 2 ಗಡಿಯಾಚೆಗಿನ ರೈಲು ಯೋಜನೆ ಘೋಷಣೆ

ಭೂತಾನ್ ಮತ್ತು ಭಾರತದ ನಡುವೆ ಎರಡು ಗಡಿಯಾಚೆಗಿನ ರೈಲು ಸಂಪರ್ಕ ನಿರ್ಮಿಸುವ...

ಭಯೋತ್ಪಾದಕ ಸಂಘಟನೆ ಸಾಲಿಗೆ ಬಿಷ್ಣೋಯ್ ಗ್ಯಾಂಗ್: ಕೆನಡಾ ಸರ್ಕಾರ ಘೋಷಣೆ

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಿರುದ್ಧ ಕೆನಡಾ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು,...

ಅಮೆರಿಕದ ಹೊರಗೆ ತಯಾರಾದ ಸಿನಿಮಾಗಳಿಗೆ ಶೇ. 100 ಸುಂಕ: ಟ್ರಂಪ್ ಘೋಷಣೆ

ಅಮೆರಿಕದ ಹೊರಗೆ ನಿರ್ಮಾಣವಾಗುವ ಎಲ್ಲ ಚಿತ್ರಗಳ ಮೇಲೂ ಶೇ. 100 ರಷ್ಟು...

Download Eedina App Android / iOS

X