ಹಾಂಗ್ ಕಾಂಗ್ನ ತೈವಾನ್ನಲ್ಲಿ ‘ರಾಗಸ’ ಚಂಡಮಾರುತ ಭಾರಿ ಅನಾಹುತವನ್ನೇ ಸೃಷ್ಟಿಸಿದೆ. ಸರೋವರದ ತಡೆಗೋಡೆ ಒಡೆದು ಪಟ್ಟಣದ ಒಳಗಡೆ ನುಗಿದ್ದು, 14 ಮಂದಿ ಮೃತಪಟ್ಟಿದ್ದಾರೆ. 18 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಚಂಡಮಾರುತ ಎಂದು ಇದನ್ನು ಗುರುತಿಸಲಾಗಿದ್ದು, ಇದಕ್ಕೆ ಸೂಪರ್ ಟೈಫೂನ್ ರಾಗಸ ಎಂದು ಹೆಸರಿಡಲಾಗಿದೆ. ಸುಮಾರು 100 ಹೆಚ್ಚು ಜನರು ಪ್ರವಾಹದಲ್ಲಿ ಸಿಲುಕಿದ್ದು, ರಕ್ಷಣೆಗಾಗಿ ಗೋಗರೆಯುತ್ತಿದ್ದಾರೆ.
ಗಂಟೆಗೆ 200 ಕಿ.ಮೀ (124 ಮೈಲು) ವೇಗದಲ್ಲಿ ಗಾಳಿ ಚಂಡಮಾರುತ ಬರುತ್ತಿದ್ದು, ಮುಂದಿನ ಕೆಲವು ಗಂಟೆಗಳಲ್ಲಿ ಹಾಂಗ್ ಕಾಂಗ್ ನಗರಕ್ಕೆ ಹತ್ತಿರವಾಗಲಿದ್ದು, ಜನನಿಬಿಡ ಪ್ರದೇಶದಿಂದ ದಕ್ಷಿಣಕ್ಕೆ 100 ಕಿ.ಮೀ (60 ಮೈಲು) ದೂರದಲ್ಲಿ ಚಲಿಸಲಿದೆ ಎಂದು ಸ್ಥಳೀಯ ಹಹಾಮಾನ ಇಲಾಖೆ ಹೇಳಿದೆ.
ಚಂಡಮಾರುತ ಬುಧವಾರ ಹಾಂಗ್ ಕಾಂಗ್ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ವಿವಿಧೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣ ಮತ್ತು ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದೂ ಹವಾಮಾನ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.