ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪತ್ನಿ ಮೆಲಾನಿಯಾ ಟ್ರಂಪ್ ಜೊತೆ ವಿಶ್ವಸಂಸ್ಥೆಯ ಪ್ರಧಾನ ಕಚೇರಿಗೆ ಎಸ್ಕಲೇಟರ್‌ನಲ್ಲಿ ತೆರಳುತ್ತಿದ್ದಾಗ ಏಕಾಏಕಿ ನಿಂತು ಗೊಂದಲ ಉಂಟಾಯಿತು. ಟ್ರಂಪ್‌ರ ಭಾಷಣಕ್ಕೂ ಕೆಲ ನಿಮಿಷಗಳ ಮುಂಚೆ ನಡೆದ ಈ ಘಟನೆಗೆ ಶ್ವೇತಭವನ ಆಕ್ರೋಶ ವ್ಯಕ್ತಪಡಿಸಿದೆ.
ಟ್ರಂಪ್ ಹಾಗೂ ಮೆಲಾನಿಯಾ ಎಸ್ಕಲೇಟರ್ ಹತ್ತಿದ ತಕ್ಷಣವೇ ಅದು ನಿಂತುಹೋಗಿದ್ದು, ಇಬ್ಬರೂ ಮೆಟ್ಟಿಲುಗಳ ಮೇಲೆಯೇ ನಡೆದು ಹೋಗಬೇಕಾಯಿತು.
ಬಳಿಕ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, “ಯಾರಾದರೂ ವಿಶ್ವಸಂಸ್ಥೆಯ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಎಸ್ಕಲೇಟರ್ ನಿಲ್ಲಿಸಿದ್ದರೆ, ಅವರನ್ನು ತಕ್ಷಣ ವಜಾ ಮಾಡಿ ತನಿಖೆ ನಡೆಸಬೇಕು” ಎಂದು ಬರೆದಿದ್ದಾರೆ. ಬ್ರಿಟಿಷ್ ದಿನಪತ್ರಿಕೆಯೊಂದರ ವರದಿ ಪ್ರಕಾರ, ಕೆಲವು ವಿಶ್ವಸಂಸ್ಥೆ ಸಿಬ್ಬಂದಿ ಟ್ರಂಪ್ ಬಂದಾಗ ಎಸ್ಕಲೇಟರ್ ಮತ್ತು ಲಿಫ್ಟ್ ನಿಲ್ಲಿಸುವ ಬಗ್ಗೆ ತಮಾಷೆ ಮಾಡಿದ್ದರು ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?
ಆದರೆ ವಿಶ್ವಸಂಸ್ಥೆಯ ವಕ್ತಾರ ಸ್ಟೆಫಾನೆ ದುಜಾರಿಕ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಅವರ ಪ್ರಕಾರ, ಟ್ರಂಪ್ ತಂಡದ ಒಬ್ಬ ವೀಡಿಯೋಗ್ರಾಫರ್ ಎಸ್ಕಲೇಟರ್ ಮೇಲೆ ಮುಂಚಿತವಾಗಿ ಕಾಲಿಟ್ಟಾಗ, ಸುರಕ್ಷತಾ ವ್ಯವಸ್ಥೆಯ ಸಂವೇದಕ ಸಕ್ರಿಯಗೊಂಡು ಎಸ್ಕಲೇಟರ್ ಸ್ವಯಂಚಾಲಿತವಾಗಿ ನಿಂತಿತು. ಕೆಲ ನಿಮಿಷಗಳಲ್ಲಿ ಅದನ್ನು ಮರುಚಾಲನೆಗೊಳಿಸಲಾಯಿತು.
ಭಾಷಣದ ವೇಳೆ ಟ್ರಂಪ್ ಹಾಸ್ಯಮಾಡುತ್ತಾ, “ವಿಶ್ವಸಂಸ್ಥೆಯಿಂದ ನನಗೆ ಸಿಕ್ಕದ್ದು ಕೆಟ್ಟ ಎಸ್ಕಲೇಟರ್ ಮತ್ತು ಕೆಟ್ಟ ಟೆಲಿಪ್ರಾಂಪ್ಟರ್ ಮಾತ್ರ” ಎಂದರು. “ಪತ್ನಿ ಆರೋಗ್ಯ ಸರಿಯಿಲ್ಲದಿದ್ದರೆ ಬೀಳುತ್ತಿದ್ದರು” ಎಂದು ಕೂಡ ಹಾಸ್ಯ ಮಾಡಿದರು.
ಘಟನೆ ರಾಜತಾಂತ್ರಿಕ ಚರ್ಚೆಗೆ ಕಾರಣವಾದರೂ, ವಿಶ್ವಸಂಸ್ಥೆ ತಾಂತ್ರಿಕ ದೋಷವಷ್ಟೇ ಸಂಭವಿಸಿತು ಎಂದು ಸ್ಪಷ್ಟಪಡಿಸಿದೆ.
Here’s when the UN escalator stopped working the second Trump & Melania got to it
— Terrible Pics (@TerriblePic) September 23, 2025
(The teleprompter stopped right when he started his speech also)pic.twitter.com/A70d8mUV2x