ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ: ಸಾಲ ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Date:

Advertisements

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ, ಬೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗದವರಿಂದ ಕೆಳಕಂಡ ಯೋಜನೆಗಳಿಗೆ 2025-26ನೇ ಸಾಲಿನಲ್ಲಿ ಸಾಲ ಸಹಾಯಧನ ಸೌಲಭ್ಯ ಪಡೆಯಲು – https://kmdconline.karnataka.gov.in ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.‌

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ 16‌ ಕೊನೆಯ ದಿನವಾಗಿದೆ. ಅರ್ಜಿದಾರರ ವಾರ್ಷಿಕ ಆದಾಯ 6.00 ಲಕ್ಷಗಳನ್ನು ಮೀರಿರಬಾರದು. ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮತ್ತು ವಾಸದ ದೃಢೀಕರಣಕ್ಕಾಗಿ ಪಡಿತರ ಚೀಟಿಯನ್ನು ಆಧಾರ್‌ನೊಂದಿಗೆ ಹೊಂದಿರಬೇಕು. ದಾಖಲಾತಿಗಳು ಬ್ಯಾಂಕ್ ಅಕೌಂಟ್‌ನೊಂದಿಗೆ ಜೋಡಣೆಯಾಗಿರಬೇಕು. 18 ರಿಂದ 55 ವರ್ಷಗಳ ವಯೋಮಿತಿಯವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ಹಾಗೂ ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ರಾಜ್ಯ/ಕೇಂದ್ರ/PSU ಸರ್ಕಾರದ ಉದ್ಯೋಗಿಯಾಗಿರಬಾರದು. ನಿಗಮದ ಇತರ ಯೋಜನೆಗಳಡಿಯಲ್ಲಿ ಅರ್ಜಿದಾರರು ಅಥವಾ ಅವರ ಕುಟುಂಬದ ಸದಸ್ಯರು ನಿಗಮದಿಂದ ಈಗಾಗಲೇ ಸಾಲ ಸೌಲಭ್ಯ ಪಡೆದಿರಬಾರದು ಹಾಗೂ ವಿವಿಧ ಯೋಜನೆಗಳಿಗೆ ಅನುಗುಣವಾಗಿ ದಾಖಲಾತಿಗಳನ್ನು ಒದಗಿಸಬೇಕು.

2025-26ನೇ ಸಾಲಿನ ವಿವಿಧ ಯೋಜನೆಗಳ ವಿವರ

1)ಮಹಿಳಾ ಸ್ವಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಸಹಾಯಧನ ಯೋಜನೆ: ಈ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯದ ಸ್ವಸಹಾಯ ಗುಂಪುಗಳಿಗೆ ವಿವಿಧ ರೀತಿಯ ಸ್ವಯಂ ಉದ್ಯೋಗ ಚಟುವಟಿಕೆಯಲ್ಲಿ ತೊಡಗಿಸಿ ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವ ಸಲುವಾಗಿ, ರಾಷ್ಟ್ರೀಕೃತ/ಶೆಡ್ಯೂಲ್ ಬ್ಯಾಂಕ್/ಆರ್.ಬಿ.ಐ ನಿಂದ ಮಾನ್ಯತೆ ಪಡೆದ ವಿವಿಧ ಆರ್ಥಿಕ ಸಂಸ್ಥೆಗಳಿಂದ ಪಡೆಯುವ ಸಾಲಕ್ಕೆ ಘಟಕ ವೆಚ್ಚದ ಶೇ.50% ಅಥವಾ ಗರಿಷ್ಟ 2.00 ಲಕ್ಷ ಸಹಾಯಧನವನ್ನು ನಿಗಮದಿಂದ ಒದಗಿಸಲಾಗುವುದು.

ಸಹಾಯಧನವು ಬ್ಯಾಕ್ ಎಂಡ್ ಸಬ್ಸಿಡಿಯಾಗಿದ್ದು ಸ್ವಸಹಾಯ ಸಂಘಗಳು ಆರ್ಥಿಕತೆ ಬ್ಯಾಂಕ್‌ಗಳಿಂದ ಪಡೆದ ಸಾಲದ ಮರುಪಾವತಿಗೆ ಹೊಂದಾಣಿಕೆ ಮಾಡಲಾಗುವುದು. 2 ಸಂಘದ ಗುಂಪಿನ ಸದಸ್ಯರ ಸಂಖ್ಯೆ 10 ರಿಂದ 20ರೊಳಗಿರಬೇಕು. ಒಂದು ಕುಟುಂಬದ ಒಬ್ಬರು ಸದಸ್ಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಸ್ವಸಹಾಯ ಉಪನೋಂದಣಾಧಿಕಾರಿಯವರಿಂದ ಕಡ್ಡಾಯವಾಗಿ ಸಂಘವು ನೋಂದಣಿಯಾಗಿರಬೇಕು. ನಿಗಮದ ಸಹಾಯಧನ ಪಡೆಯಲು ಸ್ವಸಹಾಯ ಗುಂಪು ರಚನೆಯಾಗಿ ಕನಿಷ್ಟ 6 ತಿಂಗಳಾಗಿರಬೇಕು.

2)ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ: ಈ ಯೋಜನೆಯಡಿಯಲ್ಲಿ ಮಾನ್ಯತೆ ಪಡೆದಿರುವ ಯಾವುದೇ ವಿದೇಶ ವಿಶ್ವವಿದ್ಯಾಲಯದಿಂದ ಪದವಿ/ಸ್ನಾತಕೋತ್ತರ ಪದವಿ ಮಾಡಬಯಸುವ ವಿದ್ಯಾರ್ಥಿಗಳಿಗೆ ಗರಿಷ್ಟ ರೂ.20.00ಲಕ್ಷಗಳವರೆಗೆ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತದೆ. ನಿಗಮಕ್ಕೆ ಆಸ್ತಿಯ (ಕಟ್ಟಡ/ಜಮೀನು) ಅಡಮಾನದ ಮೇಲೆ ಮಾತ್ರ ಸಾಲ ಒದಗಿಸಲಾಗುವುದು ಹಾಗೂ ಆಸ್ತಿಯ ಮೌಲ್ಯವು ಸಾಲದ ಮೊತ್ತಕ್ಕಿಂತ ಕಡಿಮೆ ಇರಬಾರದು. ಸಾಲದ ಮೊತ್ತವನ್ನು ವಿದ್ಯಾರ್ಥಿಯು ಭಾರತದಲ್ಲಿ ಹೊಂದಿರುವ ಬ್ಯಾಂಕ್ ಖಾತೆಗೆ ವರ್ಷಕ್ಕೆ ಒಂದು ಕಂತು ಮುಗಿದ 6 ತಿಂಗಳ ನಂತರ ಬಿಡುಗಡೆ ಮಾಡಲಾಗುತ್ತದೆ. ವಿದ್ಯಾಭ್ಯಾಸ ನಿಗದಿಪಡಿಸಿದ 60 ತಿಂಗಳ ಸಮಾನ ಕಂತುಗಳಲ್ಲಿ ಸಾಲವನ್ನು ಮರುಪಾವತಿ ಮಾಡಬೇಕಾಗಿದೆ. ಒಂದು ವೇಳೆ ಸಕಾಲಕ್ಕೆ ನಿಗಮಕ್ಕೆ ಮರುಪಾವತಿ ಮಾಡದೇ ಸುಸ್ಥಿದಾರರಾದಲ್ಲಿ ಸುಸ್ಥಿಯಾದ ಮೊತ್ತದ ಶೇಕಡಾ 2%ರಷ್ಟು ದಂಡ ಬಡ್ಡಿಯನ್ನು ವಿಧಿಸಲಾಗುವುದು. ವಿದ್ಯಾರ್ಥಿಯ ವಯಸ್ಸು 38 ವರ್ಷಕ್ಕಿಂತ ಕಡಿಮೆಯಿದ್ದು ಹಿಂದಿನ ವರ್ಷದಲ್ಲಿ ಕನಿಷ್ಟ 60% ಅಂಕವನ್ನು ಪಡೆದಿರಬೇಕು.

3)ಶ್ರಮಶಕ್ತಿ ಯೋಜನೆ: ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತ ವರ್ಗದ ಕಲಕಸುಬುದಾರರಿಗೆ ತರಬೇತಿ ನೀಡಿ, ಅವರು ತಮ್ಮ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಿಕೊಂಡು ಅದೇ ಕಸುಬನ್ನು ಮುಂದುವರೆಸಲು ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿಗೊಳಿಸುವ ಸಲುವಾಗಿ, ನಿಗಮದಿಂದ ಶೇಕಡಾ 4%ರ ಬಡ್ಡಿದರದಲ್ಲಿ ರೂ.50,000/- ಸಾಲ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಇದರಲ್ಲಿ ಶೇ.50ರಷ್ಟು ಸಾಲವನ್ನು 36 ತಿಂಗಳಿನಲ್ಲಿ ಫಲಾನುಭವಿಯು ಮರುಪಾವತಿ ಮಾಡಿದಲ್ಲಿ, ಉಳಿದ ಶೇ.50ರಷ್ಟು ಹಣವನ್ನು ಬ್ಯಾಕ್ ಎಂಡ್ ಸಹಾಯಧನವನ್ನಾಗಿ ಪರಿಗಣಿಲಾಗುತ್ತದೆ. ಫಲಾನುಭವಿಯು ತಾನು ಪಡೆದ ಸಾಲವನ್ನು 36 ತಿಂಗಳೊಳಗಾಗಿ ಮರುಪಾವತಿ ಮಾಡಲು ವಿಫಲನಾದಲ್ಲಿ ಸಹ ಸಾಲವೆಂದು ಶೇ.50ರಷ್ಟು ಬ್ಯಾಂಕ್ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಬೆಂಗಳೂರು | ಸೆ.22ರಿಂದ ಭಾರತೀಯ ವಿದ್ಯಾಭವನದಲ್ಲಿ ನವರಾತ್ರಿ ಉತ್ಸವ

4)ಸ್ವಾವಲಂಬಿ: ಈ ಯೋಜನೆಯಡಿ ರಾಷ್ಟ್ರೀಕೃಷ್ಣ ಜ್ಞ ಬ್ಯಾಂಕುಗಳು/ಷೆಡ್ಯೂಲ್ ಬ್ಯಾಂಕ್/ಆರ್.ಬಿ.ಐ ಮಾನ್ಯತೆ ಪಡೆದ ವಿವಿಧ ಫೈನಾನ್ಸ್ ಸಂಸ್ಥೆಗಳು ಸಾಲ ಮಂಜೂರಾತಿ ನೀಡಿದ ಪ್ಯಾಸೆಂಜರ್ ಆಟೋರಿಕ್ಷಾ ವಾಹನವನ್ನು ಖರೀದಿಸಲು ವಾಹನದ ಆನ್‌ ರೋಡ್ ಪ್ರೈಸ್ ಮೇಲೆ ಕನಿಷ್ಟ ಶೇ.50 ರಷ್ಟು ಗರಿಷ್ಟ da. 75,000/- ಸಹಾಯಧನದ, ಗೂಡ್ಸ್ ವಾಹನ/ಟ್ಯಾಕ್ಸಿ ಖರೀದಿಸಲು ಶೇ.50%ರಷ್ಟು ಸಹಾಯಧನ ಗರಿಷ್ಟ ರೂ.3,00,000/- ನೀಡಲಾಗುವುದು. ಆಯ್ಕೆ ಸಮಿತಿಯಲ್ಲಿ ಆಯ್ಕೆಯಾದ ಫಲಾನುಭವಿಗಳು ವಾಹನದ ಆನ್‌ರೋಡ್ ಪ್ರೈಸ್ ಮೇಲೆ ಕನಿಷ್ಟ ಶೇ.10ರಷ್ಟು ಮೊತ್ತವನ್ನು ತಮ್ಮ ಪಾಲಿನ ವಂತಿಗೆಯಾಗಿ ಸಂಬಂಧಿಸಿದ ಬ್ಯಾಂಕುಗಳಿಗೆ ಪಾವತಿಸತಕ್ಕದ್ದು.

5)ವೃತ್ತಿ ಪ್ರೋತ್ಸಾಹ ಯೋಜನೆ: ಈ ಯೋಜನೆಯಡಿ ಹಣ್ಣು ಹಂಪಲು, ಕೋಳಿ ಮತ್ತು ಮೀನು ಮಾರಾಟ, ಎಳನೀರು, ಕಬ್ಬಿನ ಹಾಲು, ತಂಪು ಪಾನೀಯ ಮಾರಾಟ, ಬೇಕರಿ, ಲಾಂಡ್ರಿ, ಡ್ರೈಕ್ಲೀನಿಂಗ್, ಹೇರ್ ಡ್ರೆಸಿಂಗ್ ಸಲೂನ್, ಬ್ಯೂಟಿ ಪಾರ್ಲರ್, ವಾಟರ್ ವಾಷ್, ಪಂಚರ್ ಶಾಪ್, ಮೆಕ್ಯಾನಿಕ್ ಶಾಪ್, ದ್ವಿಚಕ್ರ ತ್ರಿಚಕ್ರ ವಾಹನ ರಿಪೇರಿ, ಎಲೆಕ್ನಿಕಲ್/ಎಲೆಕ್ಟ್ರಾನಿಕ್ಸ್ ರಿಪೇರಿ, ರೆಫ್ರಿಜರೇಟರ್ ಮೋಟಾರ್ ರಿವೈಂಡಿಂಗ್ ವರ್ಕ್ಸ್, ಬಿದರಿ ವೇರ್ ಕೆಲಸ, ರೇಷ್ಮೆ ರೀಲಿಂಗ್ ಮತ್ತು ಟೆಸ್ಟಿಂಗ್. ಆಟಿಕೆ ಗೊಂಬೆ ತಯಾರಿಕೆ ಇತ್ಯಾದಿ ಚಟುವಟಿಕೆಗಳನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿ ಪಡಿಸಲು ನಿಗಮದಿಂದ ಶೇಕಡಾ.50%ರಷ್ಟು ಸಹಾಯಧನದೊಂದಿಗೆ ರೂ.1.00ಲಕ್ಷಗಳ ಸಾಲವನ್ನು ಶೇಕಡಾ 4% ಬಡ್ಡಿದರಲ್ಲಿ ನೀಡಲಾಗುವುದು.

6)ನೇರಸಾಲ ಯೋಜನೆ: ಈ ಯೋಜನೆಯಡಿಯಲ್ಲಿ ವ್ಯಾಪಾರ/ಉದ್ದಿಮೆ ಚಟುವಟಿಕೆ ಕೈಗೊಳ್ಳಲು ಬಯಸುವ 18 ರಿಂದ 55 ವರ್ಷದೊಳಗಿನ ನಿರುದ್ಯೋಗಿಗಳಿಗೆ ರೂ.20.00 ಲಕ್ಷವರೆಗೆ ಶೇ.4% ಬಡ್ಡಿ ದರದಲ್ಲಿ నాల ನೀಡಲಾಗುವುದು ಫಲಾನುಭವಿಗಳಿಗೆ ಆಸ್ತಿಯ (ಕಟ್ಟಡ/ಭೂಮಿ) ಅಡಮಾನ ಮೇಲೆ ಮಾತ್ರ ಸಾಲವನ್ನು ಒದಗಿಸಲಾಗುವುದು. ಆಸ್ತಿಯ ಮೌಲ್ಯವು ಸಾಲದ ಮೊತ್ತಕ್ಕಿಂತ ಕಡಿಮೆಯಿರಬಾರದು. ವ್ಯಾಪಾರ ಉದ್ದಿಮೆ ಸಾಲವನ್ನು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ನೀಡಲಾಗುವುದು.

7) ಸಾಂತ್ವನ ಯೋಜನೆ: ಕೋಮು ಗಲಭೆ ಮತ್ತು ಕೋಮು ಹಿಂಸಾಚಾರದ ಸಂದರ್ಭದಲ್ಲಿ ಹಾಗೂ ಪರಿಸರ ವಿಕೋಪಗಳಿಂದ ವ್ಯಾಪಾರ ಕೇಂದ್ರಗಳು ಹಾಗೂ ವಾಸದ ಮನೆಗಳು ನಾಶ ಅಥವಾ ಹಾನಿಗೊಳಗಾಗಿದ್ದರೆ ಅಂತಹ ಪ್ರಕರಣಗಳಲ್ಲಿ ವಿಶೇಷ/ದುರ್ಬಲ ವರ್ಗದ ಕನಿಷ್ಠ ರೂ.2.00ಲಕ್ಷ ನಷ್ಟವಾಗಿದ್ದರೆ ಫಲಾನುಭವಿಗಳಿಗೆ ಸಾಂತ್ವನ ಯೋಜನೆಯಡಿ ಗರಿಷ್ಟ ರೂ5.00ಲಕ್ಷಗಳ ಘಟಕ ವೆಚ್ಚಕ್ಕೆ ಶೇಕಡಾ 50ರಷ್ಟು ಸಹಾಯಧನ ಮತ್ತು ಶೇ.3ರ ಬಡ್ಡಿ ದರಡಲ್ಲಿ ಶೇಕಡಾ 50ರಷ್ಟು ಸಾಲವನ್ನು ನೀಡಲಾಗುವುದು. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

5 ಹುಲಿ, 20 ನವಿಲು, 19 ಕೋತಿಗಳ ಸಾವು ವನ್ಯಜೀವಿ ಸಂರಕ್ಷಣೆಯ ಜವಾಬ್ದಾರಿ ಹೆಚ್ಚಿಸಿದೆ: ಈಶ್ವರ ಖಂಡ್ರೆ

ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿ, ಮಧುಗಿರಿಯ ಮಿಡಿಗೇಶಿಯಲ್ಲಿ 20 ನವಿಲು,...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ 1% ಪ್ರತ್ಯೇಕ ಮೀಸಲಾತಿಗೆ ಆಗ್ರಹ; ದೆಹಲಿಯಲ್ಲಿ ಪ್ರತಿಭಟನೆ

ಕರ್ನಾಟಕ ಸರ್ಕಾರವು ಒಳಮೀಸಲಾತಿಯನ್ನು ಜಾರಿಗೊಳಿಸಿದೆ. ಆದರೆ, ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ 1%...

ದಾವಣಗೆರೆ | ಪರೀಕ್ಷೆ ಸಮಯ,ನಡೆಯದ ಪಾಠ; ಪರೀಕ್ಷೆ ಮುಂದೂಡಿಕೆಗೆ ಕುಲಸಚಿವರಿಗೆ ವಿದ್ಯಾರ್ಥಿಗಳ ಆಗ್ರಹ

ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದ್ದು...

‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ಗೆ ಇತಿಹಾಸಕಾರ ರಾಮಚಂದ್ರ ಗುಹಾ ಆಯ್ಕೆ

ಪ್ರಸಿದ್ಧ ಭಾರತೀಯ ಇತಿಹಾಸಕಾರ, ಅಂಕಣಕಾರ ಹಾಗೂ ಚಿಂತಕ ಡಾ.ರಾಮಚಂದ್ರ ಗುಹಾ ಅವರನ್ನು...

Download Eedina App Android / iOS

X